ದ್ವೇಷ ಹರಡಲು 'ವಿಭಜನೆ ಸ್ಮರಣೆ ದಿನ' ಆಚರಿಸಲಾಗುತ್ತಿದೆ: ಬಿಜೆಪಿ-ಸಂಘ ಪರಿವಾರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಸಂಘ ಪರಿವಾರ ತನ್ನ ಲಾಭಕ್ಕಾಗಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ದ್ವೇಷ ಹರಡಲು 'ವಿಭಜನೆ ಸ್ಮರಣೆ ದಿನ' ಆಚರಿಸಲಾಗುತ್ತಿದೆ: ಬಿಜೆಪಿ-ಸಂಘ ಪರಿವಾರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
Updated on

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಾಗ್ದಾಳಿ ನಡೆಸಿದ್ದು, ಇಂದಿನ ಆಡಳಿತಗಾರರು ಒಡೆದು ಆಳುವ ಚಿಂತನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ದ್ವೇಷವನ್ನು ಹರಡುವ ಉದ್ದೇಶದಿಂದ 'ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನ ಭೀಕರ ವಿಭಜನೆ ಸಂಸ್ಮರಣಾ ದಿನ'ವನ್ನು ಆಚರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಸಂಘ ಪರಿವಾರ ತನ್ನ ಲಾಭಕ್ಕಾಗಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿಯೇ ಹೊರತು ದೌರ್ಬಲ್ಯವಲ್ಲ, ನಮಗೆ ಸುಲಭವಾಗಿ ಸ್ವಾತಂತ್ರ್ಯ ಸಿಕ್ಕಿತು ಎಂದು ಕೆಲವರು ಅಪಪ್ರಚಾರ ಮಾಡುತ್ತಾರೆ, ಆದರೆ ಲಕ್ಷಗಟ್ಟಲೆ ಜನರು ತ್ಯಾಗ ಮಾಡಿದರು, ಮನೆ ತೊರೆದರು, ಶ್ರೀಮಂತ ಕುಟುಂಬದವರು ಜೈಲುಗಳಲ್ಲಿ ಕಾಲ ಕಳೆದರು ಎಂಬುದು ಸತ್ಯ ಎಂದರು.

ಅವರು ತೋರಿದ ಹಾದಿಯಲ್ಲಿ ನಡೆಯದೆ ಇಂದಿನ ಆಡಳಿತಗಾರರು ಒಡೆದು ಆಳುವ ಚಿಂತನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ದ್ವೇಷವನ್ನು ಹರಡುವ ಉದ್ದೇಶದಿಂದ ವಿಭಜನ ವಿಭಿಷಿಕಾ ಸ್ಮೃತಿ ದಿನ ಆಚರಿಸುತ್ತಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ಕಾಂಗ್ರೆಸ್ ಪಕ್ಷಕ್ಕೆ ಸಲಹೆ ನೀಡುತ್ತಾರೆ. ಯಾವುದೇ ಕೊಡುಗೆ ಇಲ್ಲದೆ ಹುತಾತ್ಮರ ನಡುವೆ ಎಣಿಸಲು ಬಯಸುತ್ತಾರೆ ಎಂದರು.

ತಮ್ಮ ಕಚೇರಿ ಮೇಲೆ ಧ್ವಜಾರೋಹಣ ಮಾಡುವುದನ್ನು ತಪ್ಪಿಸುತ್ತಿದ್ದವರು ಈಗ ‘ಹರ್ ಘರ್ ತಿರಂಗ’ ಎಂದು ಮಾತನಾಡುತ್ತಿದ್ದಾರೆ. ಎಲ್ಲ ಧರ್ಮ, ಜಾತಿ, ಪ್ರದೇಶದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ದಶಕಗಳ ಹೋರಾಟ ಮತ್ತು ತ್ಯಾಗ ಬಲಿದಾನಗಳ ನಂತರ ಗುಲಾಮಗಿರಿಯ ಸರಪಳಿಗಳು ಮುರಿದು ಭಾರತ ಸ್ವತಂತ್ರವಾಯಿತು. ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸರೋಜಿನಿ ನಾಯ್ಡು ಮತ್ತು ಅವರಂತಹ ಅಸಂಖ್ಯಾತ ವೀರರು ರಾಷ್ಟ್ರ ನಿರ್ಮಾಣದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದ್ದಾರೆ ಎಂದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಜನರ ಉತ್ಸಾಹ ಮತ್ತು ತ್ರಿವರ್ಣ ಧ್ವಜದ ವೈಭವವನ್ನು ದೇಶವು ನೋಡಿದೆ. ದೇಶದ ಜನರು 'ಹರ್ ಘರ್ ನೌಕ್ರಿ' ಮತ್ತು 'ಹರ್ ಘರ್ ನ್ಯಾಯ್' ಬಯಸುತ್ತಾರೆ. ನಮಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಬೇಕು. ಈ ದೇಶವು ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗದಿಂದ ಸ್ವಾತಂತ್ರ್ಯವನ್ನು ಬಯಸುತ್ತದೆ ಎಂದರು.

ದ್ವೇಷ ಹರಡಲು 'ವಿಭಜನೆ ಸ್ಮರಣೆ ದಿನ' ಆಚರಿಸಲಾಗುತ್ತಿದೆ: ಬಿಜೆಪಿ-ಸಂಘ ಪರಿವಾರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
78ನೇ ಸ್ವಾತಂತ್ರ್ಯ ದಿನಾಚರಣೆ : 'ಏಕರೂಪ ನಾಗರಿಕ ಸಂಹಿತೆ', 'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಪ್ರಧಾನಿ ಮೋದಿ ಕರೆ

ನರೇಂದ್ರ ಮೋದಿ ಸರ್ಕಾರವು 2021 ರಿಂದ ದೇಶ ವಿಭಜನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಆಗಸ್ಟ್ 14 ನ್ನು ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸುತ್ತಿದೆ.

ಅವರಿಂದ ದ್ವೇಷ ತುಂಬಿದ ರಾಜಕಾರಣ ದೇಶ ವಿಭಜನೆಗೆ ಕಾರಣವಾಯಿತು ಎಂಬುದು ಐತಿಹಾಸಿಕ ಸತ್ಯ. ಅವರಿಂದಲೇ ವಿಭಜನೆಯಾಯಿತು. ತಮ್ಮ ಅನುಕೂಲಕ್ಕಾಗಿ ಸಂಘ ಪರಿವಾರದವರು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಪ್ರಚಾರ ಮಾಡಿದ್ದಾರೆ ಎಂದು ಖರ್ಗೆ ಆರೋಪಿಸಿದರು.

ಸರ್ಕಾರದ ‘ಹರ್ ಘರ್ ತಿರಂಗ’ ಅಭಿಯಾನವನ್ನು ತರಾಟೆಗೆ ತೆಗೆದುಕೊಂಡ ಖರ್ಗೆ ಅವರು, 60 ವರ್ಷಗಳ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.

ಮೋದಿ ನೇತೃತ್ವದ ಆಡಳಿತ ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ, ಆದರೆ ಜನರು ಇನ್ನೂ ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಿಂದ ನರಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಾಗ ಜನರ ನಡುವೆ ಇರಬೇಕೆಂದು ನಾನು ಹೇಳಲು ಬಯಸುತ್ತೇನೆ ಮತ್ತು ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ ಎಂದು ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ಅವರ ಯಾತ್ರೆಯು ಜನರಲ್ಲಿ ಹೊಸ ಚೈತನ್ಯವನ್ನು ತುಂಬಿದೆ ಎಂದು ಜನರು ಹೊಸ ಭರವಸೆಯಿಂದ ನೋಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ಖರ್ಗೆ, ಸರ್ಕಾರವು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಗೊಂಬೆಗಳಾಗಿ ಪರಿವರ್ತಿಸಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನವು 140 ಕೋಟಿ ಭಾರತೀಯರಿಗೆ ಬಹುದೊಡ್ಡ ಗುರಾಣಿಯಾಗಿದೆ, ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಅವರನ್ನು ರಕ್ಷಿಸುತ್ತೇವೆ ಎಂದು ಪ್ರತಿಪಾದಿಸಿದರು.

ಪ್ರತಿಪಕ್ಷಗಳು ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ಇದ್ದಂತೆ, ಸರ್ಕಾರದ ಅಸಂವಿಧಾನಿಕ ಧೋರಣೆ ತಡೆಯುವುದರೊಂದಿಗೆ ಸಾರ್ವಜನಿಕರ ಸಮಸ್ಯೆಗಳನ್ನೂ ಎತ್ತಿ ಹಿಡಿಯುತ್ತದೆ. ಕೆಲವು ಶಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ದೇಶದ ಮೇಲೆ ಹೇರುವ ಮೂಲಕ ನಮ್ಮ ಭ್ರಾತೃತ್ವವನ್ನು ನಾಶಮಾಡಲು ಯತ್ನಿಸುತ್ತಿವೆ ಎಂದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ನಾನು ನಿರುದ್ಯೋಗ, ಹಣದುಬ್ಬರ, ಬಡತನ, ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ನಾನು ಎಲ್ಲ ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಸಂವಿಧಾನವನ್ನು ರಕ್ಷಿಸಲು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿರಿ. ಇದು ನಿಜವಾದ ಗೌರವವಾಗಿದೆ. ನಮ್ಮ ಪೂರ್ವಜರಿಗೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ನ್ಯಾಯ, ಸಮಾನತೆ ಮತ್ತು ಏಕತೆ ನಮ್ಮ ರಾಷ್ಟ್ರೀಯ ಸಂಕಲ್ಪವಾಗಿದೆ. ಈ ಮೌಲ್ಯಗಳು ನಮ್ಮ ಸಂವಿಧಾನದ ಅಡಿಪಾಯವಾಗಿದೆ, ಅವುಗಳನ್ನು ರಕ್ಷಿಸುವುದು ನಮ್ಮ ಅಂತಿಮ ಕರ್ತವ್ಯವಾಗಿದೆ. ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಅದರ ತತ್ವಗಳನ್ನು ರಕ್ಷಿಸುವ ನಮ್ಮ ಸಂಕಲ್ಪ ದೃಢವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com