ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮಹಾ ಸರ್ಕಾರದ 'ಲಡ್ಕಿ ಬಹಿನ್' ಯೋಜನೆಗೆ ಅಧಿಕೃತ ಚಾಲನೆ; ಪ್ರತಿ ತಿಂಗಳು ಮಹಿಳೆಯರ ಖಾತೆಗೆ 1500 ರೂ. ಜಮೆ

ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಈ ಮಾಸಿಕ ಸ್ಟೈಫಂಡ್ ಅನ್ನು 1,500 ರಿಂದ 3,000 ಕ್ಕೆ ದ್ವಿಗುಣಗೊಳಿಸುವ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸುಳಿವು ನೀಡಿದ್ದಾರೆ.
Published on

ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರ ರಕ್ಷಾ ಬಂಧನಕ್ಕು ಮುನ್ನ ರಾಜ್ಯದ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಮಹಿಳೆಯರಿಗೆ ಪ್ರತಿ ತಿಂಗಳು 1500 ರೂಪಾಯಿ ನೀಡುವ ಮಹತ್ವಾಕಾಂಕ್ಷೆಯ 'ಮಝಿ ಲಡ್ಕಿ ಬಹಿನ್' ಯೋಜನೆಗೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಿದೆ.

ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಈ ಮಾಸಿಕ ಸ್ಟೈಫಂಡ್ ಅನ್ನು 1,500 ರಿಂದ 3,000 ಕ್ಕೆ ದ್ವಿಗುಣಗೊಳಿಸುವ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸುಳಿವು ನೀಡಿದ್ದಾರೆ.

ಈ ಯೋಜನೆಯಿಂದ 1 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆಯುವ ನಿರೀಕ್ಷೆಯಿದ್ದು, ಈ ಯೋಜನೆ ತಾತ್ಕಾಲಿಕವಾಗಿರುವುದಿಲ್ಲ. ಇದು ಅನಿರ್ದಿಷ್ಟಾವಧಿಗೆ ಮುಂದುವರೆಯುತ್ತದೆ ಎಂದು ಶಿಂಧೆ ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ: ಕಾರು ಡಿಕ್ಕಿ ಹೊಡೆದು ಪ್ರೊಫೆಸರ್ ಸಾವು, ಕುಡಿದ ಮತ್ತಿನಲ್ಲಿದ್ದ ಚಾಲಕನ ಬಂಧನ

ಶಿವಸೇನೆ, ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಒಳಗೊಂಡ ಮಹಾಯುತಿ ಸರ್ಕಾರ, ಲೋಕಸಭೆ ಚುನಾವಣೆಯ ಸೋಲಿನ ನಂತರ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಯೋಜನೆಯನ್ನು ಘೋಷಿಸಿತ್ತು.

ಈ ಯೋಜನೆಯು 21 ರಿಂದ 60 ವರ್ಷ ವಯಸ್ಸಿನ ವಿವಾಹಿತ, ವಿಚ್ಛೇದಿತ ಮತ್ತು ನಿರ್ಗತಿಕ ಮಹಿಳೆಯರಿಗೆ ಮಾಸಿಕ 1,500 ರೂ. ಸಹಾಯವನ್ನು ನೀಡುತ್ತದೆ ಮತ್ತು ವಾರ್ಷಿಕ 2.5 ಲಕ್ಷ ರೂ. ಗಿಂತ ಕಡಿಮೆ ಆದಾಯ ಇರುವ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

"ನಾವು ನಿಮ್ಮ ಬೆಂಬಲದಿಂದ ಮತ್ತೆ ಅಧಿಕಾರಕ್ಕೆ ಬಂದರೆ ನಿಮಗೆ ಪ್ರತಿ ತಿಂಗಳು 3,000 ರೂ.ಗಿಂತ ಹೆಚ್ಚಿನ ಹಣವನ್ನು ನೀಡಬಹುದು" ಎಂದು ಶಿಂಧೆ ಅವರು ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com