ತ್ರಿವಳಿ ತಲಾಖ್ ನಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ಶೋಚನೀಯ: ಸುಪ್ರೀಂ ಕೋರ್ಟ್ ಗೆ ಕೇಂದ್ರದ ಮಾಹಿತಿ

ವಿವಾಹದ ದೃಷ್ಟಿಯಿಂದ ಸಾಮಾಜಿಕವಾಗಿಯೂ ತ್ರಿವಳಿ ತಲಾಖ್ ಮಾರಕ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
Supreme Court
ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: ತ್ರಿವಳಿ ತಲಾಖ್ ನಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ಶೋಚನೀಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿದೆ.

ವಿವಾಹದ ದೃಷ್ಟಿಯಿಂದ ಸಾಮಾಜಿಕವಾಗಿಯೂ ತ್ರಿವಳಿ ತಲಾಖ್ ಮಾರಕ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

2017 ರಲ್ಲಿ ಕೆಲವು ಮುಸ್ಲಿಂ ಸಮುದಾಯಗಳಲ್ಲಿ ಮಾನ್ಯವಾಗಿದ್ದ ಈ ಪದ್ಧತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಆ ಸಮುದಾಯಗಳ ಸದಸ್ಯರಲ್ಲಿ "ಈ ಅಭ್ಯಾಸದಿಂದ ವಿಚ್ಛೇದನಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸಾಕಷ್ಟು ಪ್ರತಿಬಂಧಕವಾಗಿ ಕೆಲಸ ಮಾಡಿಲ್ಲ" ಎಂದು ಸರ್ಕಾರ ಹೇಳಿದೆ.

"ತ್ರಿವಳಿ ತಲಾಖ್'ನ ಬಲಿಪಶುಗಳು ಪೊಲೀಸರನ್ನು ಸಂಪರ್ಕಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಮತ್ತು ಕಾನೂನಿನಲ್ಲಿ ದಂಡನಾತ್ಮಕ ನಿಬಂಧನೆಗಳ ಅನುಪಸ್ಥಿತಿಯಲ್ಲಿ ಪತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದ ಕಾರಣ ಪೊಲೀಸರು ಅಸಹಾಯಕರಾಗಿದ್ದರು. (ಇದನ್ನು) ತಡೆಯುವ ಸಲುವಾಗಿ ಕಟ್ಟುನಿಟ್ಟಾದ (ಕಾನೂನು) ನಿಬಂಧನೆಗಳು ತುರ್ತು ಅಗತ್ಯ", ಎಂದು ಸರ್ಕಾರ ಹೇಳಿದೆ.

ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಮಾನ್ಯಗೊಳಿಸಿರುವುದರಿಂದ ಅದನ್ನು ಕ್ರಿಮಿನಲ್ ಮಾಡುವ ಅಗತ್ಯವಿಲ್ಲ ಎಂದು ವಾದಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ರೀತಿಯಾಗಿ ಪ್ರಮಾಣ ಪತ್ರ ಸಲ್ಲಿಸಿದೆ.

ಮೂಲ ಅಫಿಡವಿಟ್ ನ್ನು ಈ ತಿಂಗಳ ಆರಂಭದಲ್ಲಿ ಸಮಸ್ತ ಕೇರಳ ಜಮಿಯತುಲ್ ಉಲೇಮಾ ಸಲ್ಲಿಸಿದೆ, ಅದು ತನ್ನನ್ನು "ಪ್ರಖ್ಯಾತ ಸುನ್ನಿ ವಿದ್ವಾಂಸರ ಸಂಘ" ಎಂದು ವಿವರಿಸಿದ್ದು ಇತರ ಅಂಶಗಳ ಪೈಕಿ, ಅರ್ಜಿದಾರರು ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019 ನ್ನು ಅಸಂವಿಧಾನಿಕ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com