ರಾಜಕೀಯ ತೊರೆಯುವುದಿಲ್ಲ, ಹೊಸ ಪಕ್ಷ ಕಟ್ಟುತ್ತೇನೆ: ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್

"ಜೆಎಂಎಂಗಾಗಿ ನನ್ನ ಇಡೀ ಜೀವನ ಮುಡಿಪಾಗಿಟ್ಟಿದ್ದೆ. ಆದರೆ ಅವರಿಂದ ಅವಮಾನ ಅನುಭವಿಸಿದ" ನಂತರ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ದೃಢವಾಗಿರುವುದಾಗಿ ಮಾಜಿ ಸಿಎಂ ಹೇಳಿದ್ದಾರೆ.
ಚಂಪೈ ಸೊರೆನ್
ಚಂಪೈ ಸೊರೆನ್TNIE
Updated on

ರಾಂಚಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ರಾಜಕೀಯ ತೊರೆಯುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ. ಅಲ್ಲದೆ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಆಯ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.

"ಜೆಎಂಎಂಗಾಗಿ ನನ್ನ ಇಡೀ ಜೀವನ ಮುಡಿಪಾಗಿಟ್ಟಿದ್ದೆ. ಆದರೆ ಅವರಿಂದ ಅವಮಾನ ಅನುಭವಿಸಿದ" ನಂತರ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ದೃಢವಾಗಿರುವುದಾಗಿ ಮಾಜಿ ಸಿಎಂ ಹೇಳಿದ್ದಾರೆ.

ತಮ್ಮ ಪೂರ್ವಜರ ಗ್ರಾಮ ಜಿಲಿಂಗೋರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಹಿರಿಯ ನಾಯಕ ಸೊರೆನ್, "ಇದು ನನ್ನ ಜೀವನದ ಹೊಸ ಅಧ್ಯಾಯ, ನನ್ನ ಬೆಂಬಲಗರಿಂದ ನನಗೆ ಸಾಕಷ್ಟು ಪ್ರೀತಿ ಮತ್ತು ಬೆಂಬಲ ಸಿಕ್ಕಿರುವುದರಿಂದ ನಾನು ರಾಜಕೀಯವನ್ನು ತೊರೆಯುವುದಿಲ್ಲ ಎಂದರು.

ಚಂಪೈ ಸೊರೆನ್
ಜಾರ್ಖಂಡ್‌ ನಲ್ಲಿ ಭೀಕರ ಅಪಘಾತ: ಮಾಜಿ ಸಿಎಂ ಚಂಪೈ ಸೊರೆನ್ ಬೆಂಗಾವಲು ತಂಡದ ಇಬ್ಬರು ಪೊಲೀಸರು ಸಾವು

ಒಂದು ನಾನು ರಾಜಕೀಯ ತೊರೆಯುವುದಿಲ್ಲ ಮತ್ತು ನಾನು ಹೊಸ ಪಕ್ಷ ಸ್ಥಾಪಿಸಬಹುದು ಎಂದು 67 ವರ್ಷದ ಬುಡಕಟ್ಟು ನಾಯಕ ಚಂಪೈ ಸೊರೆನ್ ಹೇಳಿದ್ದಾರೆ. ಚಂಪೈ ಸೊರೆನ್ ಅವರು 1990 ರ ದಶಕದಲ್ಲಿ ಪ್ರತ್ಯೇಕ ರಾಜ್ಯ ರಚಿಸುವ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ 'ಜಾರ್ಖಂಡ್‌ನ ಹುಲಿ' ಎಂಬ ಖ್ಯಾತಿ ಗಳಿಸಿದ್ದಾರೆ.

"ಜೆಎಂಎಂನಿಂದ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಇದು ಜಾರ್ಖಂಡ್‌ನ ಭೂಮಿ. ನಾನು ನನ್ನ ವಿದ್ಯಾರ್ಥಿ ಜೀವನದಿಂದಲೂ ಹೋರಾಟ ಮಾಡಿದ್ದೇನೆ. ನಾನು ಪಕ್ಷದ ವರಿಷ್ಠ ಶಿಬು ಸೊರೆನ್ ನೇತೃತ್ವದಲ್ಲಿ ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ನಡೆದ ಆಂದೋಲನದಲ್ಲಿ ಭಾಗವಹಿಸಿದ್ದೇನೆ" ಎಂದು ಚಂಪೈ ಸೊರೆನ್ ಹೇಳಿದ್ದಾರೆ.

2000ದಲ್ಲಿ ಜಾರ್ಖಂಡ್ ಅನ್ನು ಬಿಹಾರದಿಂದ ಪ್ರತ್ಯೇಕ ರಾಜ್ಯವಾಗಿ ಘೋಷಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com