ಶಾಪಿಂಗ್ ಕಾಂಪ್ಲೆಕ್ಸ್ ನೆಲಸಮ
ದೇಶ
ಅಯೋಧ್ಯೆಯಲ್ಲಿ ಸಾಮೂಹಿಕ ಅತ್ಯಾಚಾರ: ಆರೋಪಿ ಎಸ್‌ಪಿ ನಾಯಕನ ಅಕ್ರಮ ಶಾಪಿಂಗ್ ಕಾಂಪ್ಲೆಕ್ಸ್ ನೆಲಸಮ
ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಯಿದ್ ಖಾನ್(65) ಅವರನ್ನು ಜುಲೈ 30 ರಂದು ಅವರ ಸೇವಕ ರಾಜು ಖಾನ್ ಅವರೊಂದಿಗೆ ಬಂಧಿಸಲಾಗಿತ್ತು.
ಲಖನೌ: ಅತ್ಯಾಚಾರ ಆರೋಪಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಮೊಯಿದ್ ಖಾನ್ ಒಡೆತನದ ಅಕ್ರಮ ಬಹುಮಹಡಿ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಅಯೋಧ್ಯೆ ಜಿಲ್ಲಾಡಳಿತ ಗುರುವಾರ ನೆಲಸಮಗೊಳಿಸಿದೆ.
ಸುಮಾರು 3 ಕೋಟಿ ಮೌಲ್ಯದ 4 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ನೆಲಸಮಗೊಳಿಸಲು ಮೂರು ಬುಲ್ಡೋಜರ್ ಮತ್ತು ಅಗೆಯುವ ಯಂತ್ರವನ್ನು ಬಳಸಿ, ಭಾರೀ ಭದ್ರತೆಯಲ್ಲಿ ಧ್ವಂಸಗೊಳಿಸಲಾಗಿದೆ.
ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಯಿದ್ ಖಾನ್(65) ಅವರನ್ನು ಜುಲೈ 30 ರಂದು ಅವರ ಸೇವಕ ರಾಜು ಖಾನ್ ಅವರೊಂದಿಗೆ ಬಂಧಿಸಲಾಗಿತ್ತು.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿ ಆಗಸ್ಟ್ 7 ರಂದು ಲಖನೌನ ಕ್ವೀನ್ ಮೇರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಂಧಿತರಾದ ಮೊಯಿದ್ ಖಾನ್ ಅವರ ಮತ್ತೊಂದು ಅಕ್ರಮ ಕಟ್ಟಡ, 3,000 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾದ ಬೇಕರಿಯನ್ನು ಸಹ ಈ ತಿಂಗಳ ಆರಂಭದಲ್ಲಿ ಬುಲ್ಡೋಜ್ ಮಾಡಲಾಗಿದೆ.