ರುದ್ರಪ್ರಯಾಗ್(ಉತ್ತರಾಖಂಡ): ಶುಕ್ರವಾರ ನಸುಕಿನ ಜಾವ ರುದ್ರಪ್ರಯಾಗದ ಫಾಂಟಾ ಹೆಲಿಪ್ಯಾಡ್‌ಗೆ ಸಮೀಪವಿರುವ ಖಾಟ್ ಗಡೇರಾ ಬಳಿ ಅವಶೇಷಗಳಡಿಯಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಮಧ್ಯರಾತ್ರಿ 1:20 ರ ಸುಮಾರಿಗೆ ಘಟನೆಯ ಬಗ್ಗೆ ಜಿಲ್ಲಾ ವಿಪತ್ತು ರಕ್ಷಣಾ ಪಡೆಗೆ ತಿಳಿಸಲಾಯಿತು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು.
ರುದ್ರಪ್ರಯಾಗದ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ನಾಲ್ವರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ವರದಿಗಳ ಪ್ರಕಾರ, ಅವರೆಲ್ಲರೂ ನೇಪಾಳಿ ಪ್ರಜೆಗಳಾಗಿದ್ದು, ತೆರವು ಕಾರ್ಯ ನಡೆಯುತ್ತಿದೆ. ಅವರ ಮೃತದೇಹಗಳನ್ನು ಡಿಡಿಆರ್‌ಎಫ್ ತಂಡವು ರುದ್ರಪ್ರಯಾಗಕ್ಕೆ ತರುತ್ತಿದೆ ಎಂದು ರುದ್ರಪ್ರಯಾಗ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಚಮೋಲಿ ಪೊಲೀಸರು ನಿರ್ಬಂಧಿಸಲಾದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರೀ ಮಳೆಯ ನಂತರ, ನಂದಪ್ರಯಾಗ, ಚಿಂಕಾ, ಗುಲಾಬ್‌ಕೋಟಿ, ಪಗಲ್‌ನಾಲಾ ಮತ್ತು ಕಾಂಚನಾಲಾ (ಬದ್ರಿನಾಥ್) ಬಳಿ ಅವಶೇಷಗಳಿಂದಾಗಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಬರೆದಿದ್ದಾರೆ.
Advertisement