ರಾಷ್ಟ್ರ ರಾಜಧಾನಿಯ 200 ಮಹಿಳೆಯರಿಗೆ ಡ್ರೋನ್ ಆಪರೇಟಿಂಗ್ ತರಬೇತಿ

'ನಮೋ ಡ್ರೋನ್ ದೀದಿ' ಯೋಜನೆಯಡಿ, ಪ್ರತಿ ತರಬೇತಿದಾರರಿಗೆ ಒಟ್ಟು 25,000 ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಹಣ ಸಂಗ್ರಹ
ಡ್ರೋನ್ ಸಾಂದರ್ಭಿಕ ಚಿತ್ರ
ಡ್ರೋನ್ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಷ್ಟ್ರ ರಾಜಧಾನಿಯ 200 ಮಹಿಳೆಯರಿಗೆ ಡ್ರೋನ್ ಆಪರೇಟ್ ಮಾಡುವ ತರಬೇತಿ ನೀಡಲು ಯೋಜನೆಯೊಂದನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರೂಪಿಸಿದ್ದು, ಡ್ರೋನ್ ಪೈಲಟ್ ಪರವಾನಗಿ ನೀಡಲಾಗುವುದು ಎಂದು ರಾಜ್ ನಿವಾಸ್ ಶನಿವಾರ ತಿಳಿಸಿದ್ದಾರೆ.

'ನಮೋ ಡ್ರೋನ್ ದೀದಿ' ಯೋಜನೆಯಡಿ, ಪ್ರತಿ ತರಬೇತಿದಾರರಿಗೆ ಒಟ್ಟು 25,000 ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಹಣವನ್ನು ಸಂಗ್ರಹಿಸಲಾಗುತ್ತದೆ.

ಈ ಉಪಕ್ರಮ ಡ್ರೋನ್ ತಂತ್ರಜ್ಞಾನದೊಂದಿಗೆ ದೇಶಾದ್ಯಂತ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಮಿಷನ್‌ನ ಭಾಗವಾಗಿದೆ.

ತರಬೇತಿ ಪಡೆಯುವವರಿಗೆ ಡ್ರೋನ್‌ಗಳನ್ನು ಸಹ ನೀಡಲಾಗುವುದು, ಅವುಗಳನ್ನು ಬಳಸಲು ಅಥವಾ ಬಾಡಿಗೆಗೆ ನೀಡಲು ಅನುಮತಿಸಲಾಗುವುದು. ಶುಕ್ರವಾರ ನಗರದ ಸಿಂಗೋಲಾ ಮತ್ತು ಶನಿವಾರ ಬದು ಸಾರಾಯಿ ಗ್ರಾಮದಲ್ಲಿ ಡ್ರೋನ್ ಪ್ರದರ್ಶನ ಕಾರ್ಯಕ್ರಮಗಳೊಂದಿಗೆ ಈ ಕಾರ್ಯಕ್ರಮ ಆರಂಭವಾಯಿತು. ನಗರದ ವಿವಿಧೆಡೆ ಪ್ರದರ್ಶನಗಳನ್ನು ನಡೆಸಲು ಎನ್‌ಜಿಒ ಅನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಸಾಂದರ್ಭಿಕ ಚಿತ್ರ
ಉಡುಪಿ: ಅತ್ಯಾಧುನಿಕ ತಂತ್ರಜ್ಞಾನ; ಡ್ರೋನ್ ಮೂಲಕ ವೈದ್ಯಕೀಯ ಪರಿಕರ ರವಾನೆ ಯಶಸ್ವಿ

ಈ ಡ್ರೋನ್ ದೀದಿಯರು ಒಮ್ಮೆ ತರಬೇತಿ ಪಡೆದ ನಂತರ, ಪೈಲಟ್ ಪರವಾನಗಿ ಪ್ರಮಾಣಪತ್ರಗಳೊಂದಿಗೆ, ಡ್ರೋನ್ ಸಮೀಕ್ಷೆಗಳು, ಈವೆಂಟ್ ಶೂಟ್‌ಗಳು, ಫೋಟೋಗ್ರಫಿ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ನಡೆಸುವ ಮೂಲಕ ಉದ್ಯೋಗ ಹುಡುಕಲು ಅಥವಾ ಸ್ವಯಂ ಉದ್ಯೋಗಿಯಾಗಲು ಸಾಕಷ್ಟು ಅವಕಾಶ ಸಿಗುತ್ತದೆ. ಬಿತ್ತನೆ ಮತ್ತು ಕೀಟನಾಶಕ ಅಥವಾ ರಸಗೊಬ್ಬರ ಸಿಂಪಡಣೆಯಂತಹ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com