ಮಾಜಿ 'ಮಿಸ್ ಇಂಡಿಯಾ ಪಟ್ಟಿಯಲ್ಲಿ ದಲಿತ, ಆದಿವಾಸಿ ಮಹಿಳೆಯರಿಲ್ಲ-ರಾಹುಲ್ ಗಾಂಧಿ

ಬಾಲಿವುಡ್ ನಲ್ಲಿ ಚಮ್ಮಾರ ಅಥವಾ ಪ್ಲಂಬರ್ ನ್ನು ಯಾರೂ ತೋರಿಸುವುದಿಲ್ಲ. ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ, ಅದರಲ್ಲಿ ದಲಿತ, ಆದಿವಾಸಿ (ಬುಡಕಟ್ಟು) ಅಥವಾ ಒಬಿಸಿ ಮಹಿಳೆಯರೇ ಇರಲಿಲ್ಲ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಪ್ರಯಾಗರಾಜ್: ಮಾಜಿ ಮಿಸ್ ಇಂಡಿಯಾದ ಪಟ್ಟಿಯನ್ನು ಪರಿಶೀಲಿಸಿದ್ದು, ಅದರಲ್ಲಿ ವಿಜೇತರಾದವರಲ್ಲಿ ಯಾರು ದಲಿತ, ಬುಡಕಟ್ಟು ಅಥವಾ ಒಬಿಸಿಯ ಮಹಿಳೆಯರಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ರಾಷ್ಟ್ರವ್ಯಾಪಿ ಜಾತಿ ಗಣತಿಗಾಗಿ ಒತ್ತಾಯಿಸುತ್ತಿರುವಂತೆಯೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ 'ಸಂವಿಧಾನ ಸಮ್ಮಾನ್ ಸಮ್ಮೇಳನ'ದ ಸಂದರ್ಭದಲ್ಲಿ ಗಾಂಧಿಯವರು ಈ ಹೇಳಿಕೆ ನೀಡಿದರು.

ಬಾಲಿವುಡ್ ನಲ್ಲಿ ಚಮ್ಮಾರ ಅಥವಾ ಪ್ಲಂಬರ್ ನ್ನು ಯಾರೂ ತೋರಿಸುವುದಿಲ್ಲ. ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ, ಅದರಲ್ಲಿ ದಲಿತ, ಆದಿವಾಸಿ (ಬುಡಕಟ್ಟು) ಅಥವಾ ಒಬಿಸಿ ಮಹಿಳೆಯರೇ ಇರಲಿಲ್ಲ. 90 ರಷ್ಟು ಜನರು ಭಾಗವಹಿಸದಿರುವಾಗ ಕೆಲವರು ಕ್ರಿಕೆಟ್ ಅಥವಾ ಬೋರ್ ಬಗ್ಗೆ ಮಾತನಾಡುತ್ತಾರೆಯೇ?ಎಂದು ಅವರು ಕೇಳಿದರು.

ದೇಶದ ಜನಸಂಖ್ಯೆಯಲ್ಲಿ ಶೇ. 90 ರಷ್ಟಿರುವ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಜನರ ಭಾಗವಹಿಸುವಿಕೆ ಇಲ್ಲದೆ ದೇಶ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದೇಶದ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮಾಧ್ಯಮಗಳಲ್ಲಿರುವ ಉನ್ನತ ಆ್ಯಂಕರ್‌ಗಳಲ್ಲಿಯೂ ಯಾರು ದಲಿತ, ಆದಿವಾಸಿ ಮಹಿಳೆಯರು ಇಲ್ಲ. ಮೋದಿಜಿ ಯಾರನ್ನಾದರೂ ಅಪ್ಪಿಕೊಂಡರೂ ನಾವು ಸೂಪರ್ ಪವರ್ ಆಗಿದ್ದೇವೆ ಎಂದು ಹೇಳುತ್ತಾರೆ. ನಾವು ಹೇಗೆ ಸೂಪರ್ ಪವರ್ ಆಗಿದ್ದೇವೆ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ
ಶೇ.50ರಷ್ಟು ಮೀಸಲಾತಿ ಮಿತಿ ರದ್ದುಪಡಿಸಿ, ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ನೀಡಿ: ರಾಹುಲ್ ಗಾಂಧಿ

ನಾನು ಜಾತಿ ಗಣತಿ ಬೇಡಿಕೆ ಮೂಲಕ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರಬಹುದೆಂದು ಬಿಜೆಪಿಯವರು ಹೇಳಬಹುದು. ಆದರೆ ಎಷ್ಟು ಸಂಸ್ಥೆಗಳಲ್ಲಿ, ಕಾರ್ಪೋರೇಟರ್ ವಲಯದಲ್ಲಿ, ಬಾಲಿವುಡ್, ಮಿಸ್ ಇಂಡಿಯಾ ವಿಜೇತರಲ್ಲಿ ದಲಿತ, ಆದಿವಾಸಿ, ಒಬಿಸಿಯವರು ಇದ್ದಾರೆ. ಅವರಿಲ್ಲ ಎಂದು ನಾನು ಮಾತ್ರ ಹೇಳಬಲ್ಲೆ, ಇದನ್ನು ಪರಿಶೀಲಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com