ಡಿಜಿಟಲ್ ಜಾಹಿರಾತು ಫಲಕದಲ್ಲಿ Porn clip ಪ್ರಸಾರ!

ಕನೌಟ್ ಪ್ಲೇಸ್ ಪ್ರದೇಶದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಜಾಹಿರಾತು ಪ್ರದರ್ಶಿಸುವುದಕ್ಕೆ ಮೀಸಲಿಟ್ಟ ಎಲ್ ಇಡಿ ಪರದೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗುತ್ತಿರುವುದನ್ನು ದಾರಿಯಲ್ಲಿ ಹೋಗುತ್ತಿದ್ದವರು ಗಮನಿಸಿದ್ದಾರೆ.
Digital advertisement board (file pic)
ಡಿಜಿಟಲ್ ಜಾಹಿರಾತು ಫಲಕ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ಡಿಜಿಟಲ್ ಜಾಹಿರಾತು ಫಲಕದಲ್ಲಿ ನೀಲಿ ಚಿತ್ರ (ಪೋರ್ನ್ ಕ್ಲಿಪ್) ಪ್ರಸಾರವಾಗಿದ್ದು, ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಕನೌಟ್ ಪ್ಲೇಸ್ ಪ್ರದೇಶದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಜಾಹಿರಾತು ಪ್ರದರ್ಶಿಸುವುದಕ್ಕೆ ಮೀಸಲಿಟ್ಟ ಎಲ್ ಇಡಿ ಪರದೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗುತ್ತಿರುವುದನ್ನು ದಾರಿಯಲ್ಲಿ ಹೋಗುತ್ತಿದ್ದವರು ಗಮನಿಸಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.

ಕೆಲವು ಸೆಕೆಂಡುಗಳ ಅವಧಿಯ ವೀಡಿಯೊ ಕ್ಲಿಪ್ ಅನ್ನು ನಾಗರಿಕ ಅಧಿಕಾರಿಗಳ ಸಹಾಯದಿಂದ ಬೋರ್ಡ್ ನಿಂದ ತೆಗೆದುಹಾಕಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಈ ಕೃತ್ಯದ ಹಿಂದಿನ ಅಪರಾಧಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Digital advertisement board (file pic)
ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂಜಯ್‌ ರಾಯ್ ಅಶ್ಲೀಲ ಚಿತ್ರ ವ್ಯಸನಿ, ಹೆಣ್ಣುಬಾಕ!

ಕನೌಟ್ ಪ್ಲೇಸ್ ರಾಷ್ಟ್ರೀಯ ರಾಜಧಾನಿಯ ಹೃದಯಭಾಗದಲ್ಲಿರುವ ಒಂದು ಸಾಂಪ್ರದಾಯಿಕ ಮತ್ತು ಐತಿಹಾಸಿಕ ವಾಣಿಜ್ಯ ಪ್ರದೇಶವಾಗಿದೆ ಮತ್ತು ನಗರದ ಅತ್ಯಂತ ಜನನಿಬಿಡ ಮಾರುಕಟ್ಟೆ ಸ್ಥಳಗಳಲ್ಲಿ ಒಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com