ಜಮ್ಮು-ಕಾಶ್ಮೀರ ಚುನಾವಣೆ: ಆಜಾದ್ ಪಕ್ಷದ 13 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ!

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರ ಪಕ್ಷಕ್ಕೆ ಇದು ಚೊಚ್ಚಲ ವಿಧಾನಸಭಾ ಚುನಾವಣೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆರ್.ಎಸ್.ಚಿಬ್ ಪಟ್ಟಿ ಬಿಡುಗಡೆ ಮಾಡಿದರು.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್
Updated on

ಶ್ರೀನಗರ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (DPAP) ತನ್ನ 13 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರ ಪಕ್ಷಕ್ಕೆ ಇದು ಚೊಚ್ಚಲ ವಿಧಾನಸಭಾ ಚುನಾವಣೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆರ್.ಎಸ್.ಚಿಬ್ ಪಟ್ಟಿ ಬಿಡುಗಡೆ ಮಾಡಿದರು.

ದೋಡಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಅಬ್ದುಲ್ ಮಜೀದ್ ವಾನಿ, ದೇವಸರ್‌ನಿಂದ ಮಾಜಿ ಶಾಸಕ ಮೊಹಮ್ಮದ್ ಅಮೀನ್ ಭಟ್, ಭದರ್ವಾದಿಂದ ಮಾಜಿ ಅಡ್ವೊಕೇಟ್ ಜನರಲ್ ಮೊಹಮ್ಮದ್ ಅಸ್ಲಾಂ ಗೋಣಿ, ದೂರ್ ನಿಂದ ಡಿಡಿಸಿ ಸದಸ್ಯ ಸಲೀಂ ಪರ್ರೆ ಮತ್ತು ಲೋಲಾಬ್‌ನಿಂದ ಮುನೀರ್ ಅಹ್ಮದ್ ಮಿರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಅನಂತನಾಗ್ ಪಶ್ಚಿಮದಿಂದ ಡಿಡಿಸಿ ಸದಸ್ಯ ಬಿಲಾಲ್ ಅಹ್ಮದ್ ದೇವ, ರಾಜ್‌ಪೋರಾದಿಂದ ಗುಲಾಮ್ ನಬಿ ವಾನಿ, ಅನಂತನಾಗ್‌ನಿಂದ ಮೀರ್ ಅಲ್ತಾಫ್ ಹುಸೇನ್ ಮತ್ತು ಗಂದರ್‌ಬಾಲ್‌ನಿಂದ ಕೈಸರ್ ಸುಲ್ತಾನ್ ಗನೈ (ಜಿನ್) ಅಭ್ಯರ್ಥಿಯಾಗಲಿದ್ದಾರೆ ಎಂದು ಡಿಪಿಎಪಿ ತಿಳಿಸಿದೆ.

ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ ಘೋಷಣೆ; ಅಕ್ಟೋಬರ್ 4 ರಂದು ಫಲಿತಾಂಶ

ಖನ್ಯಾರ್‌ನಿಂದ ಅಮೀರ್ ಅಹ್ಮದ್ ಮತ್ತಿತರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಮೀರ್ ಅಹ್ಮದ್ ಭಟ್ ಇತ್ತೀಚೆಗೆ ಶ್ರೀನಗರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com