ರಾಂಚಿ: ರಾಂಚಿಯಲ್ಲಿ ನಡೆದ ಭಾರತೀಯ ಜನತಾ ಯುವ ಮೋರ್ಚ ರ್ಯಾಲಿಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆದ ಪ್ರಕರಣದಲ್ಲಿ 12,000 ಮಂದಿ ಅನಾಮಿಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
1200 ಮಂದಿ ಜೊತೆ 51 ಮಂದಿ ಗುರುತು ಸ್ಪಷ್ಟವಿರುವವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ, ಕೇಂದ್ರ ಸಚಿವ ಅರ್ಜುನ್ ಮುಂಡಾ, ರಕ್ಷಣಾ ಖಾತೆ ರಾಜ್ಯ ಸಚಿವರಾದ ಸಂಜಯ್ ಸೇಠ್, ವಕ್ತಾರ ಪ್ರತುಲ್ ಸಹದೇವ್ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ರಾಂಚಿ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಜಾರ್ಖಂಡ್ ಘಟಕ ಆಗಸ್ಟ್ 23 ರಂದು (ಶುಕ್ರವಾರ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸರ್ಕಾರದ ವಿರುದ್ಧ ರಾಂಚಿಯಲ್ಲಿ 'ಯುವ ಆಕ್ರೋಷ್ ರ್ಯಾಲಿ' ನಡೆಸಿತ್ತು.
ಈ ಯುವ ಪ್ರತಿಭಟನಾ ರ್ಯಾಲಿಯಲ್ಲಿ ಜಾರ್ಖಂಡ್ ನ ಎಲ್ಲಾ ಬಿಜೆಪಿ ನಾಯಕರು, ಹಿರಿಯ ನಾಯಕರು, ಕೇಂದ್ರ ಸಚಿವ ಸಂಜಯ್ ಸೇಠ್, ಮಾಜಿ ಕೇಂದ್ರ ಸಚಿವ ಅರ್ಜುನ್ ಮುಂಡಾ, ಬಾಬುಲಾಲ್ ಮರಾಂಡಿ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.
ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಉತ್ತುಂಗದಲ್ಲಿದೆ, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ, ಮಹಿಳೆಯರ ಸುರಕ್ಷತೆಯೇ ದೊಡ್ಡ ಸಮಸ್ಯೆಯಾಗಿದ್ದು, ಇವೆಲ್ಲದಕ್ಕೂ ಹೇಮಂತ್ ಸೋರೆನ್ ಸರ್ಕಾರ ಉತ್ತರ ನೀಡಬೇಕಿದೆ ಎಂದು ಕೇಂದ್ರ ಸಚಿವ ಸಂಜಯ್ ಸೇಠ್ ಹೇಳಿದ್ದಾರೆ.
ಈ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸರ್ಕಾರವನ್ನು ಮೂಲೆಗುಂಪು ಮಾಡಲು ಬಿಜೆಪಿ ಸಂಪೂರ್ಣ ಸಿದ್ಧತೆ ನಡೆಸಿದೆ.
Advertisement