ಬುಡಕಟ್ಟು ಅಸ್ಮಿತೆ, ಅಸ್ತಿತ್ವ ಉಳಿಸಲು ಬಿಜೆಪಿಗೆ ಸೇರ್ಪಡೆ: ಚಂಪೈ ಸೊರೇನ್

ಬುಡಕಟ್ಟು ಜನಾಂಗದವರ ವಿಷಯದಲ್ಲಿ ಬಿಜೆಪಿ ಮಾತ್ರ ಗಂಭೀರವಾಗಿದೆ. ಇತರರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಂಪೈ ಸೊರೇನ್
ಚಂಪೈ ಸೊರೇನ್
Updated on

ರಾಂಚಿ: ಬಾಂಗ್ಲಾದೇಶದಿಂದ ಅತಿರೇಕದ ಒಳನುಸುಳುವಿಕೆಯಿಂದಾಗಿ ಜಾರ್ಖಂಡ್ ನ ಸಂತಾಲ್ ಪರಗಣ ಪ್ರದೇಶದಲ್ಲಿ ಅಪಾಯದಲ್ಲಿರುವ ಬುಡಕಟ್ಟು ಜನಾಂಗದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಲು ತಾನು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಮಂಗಳವಾರ ಹೇಳಿದ್ದಾರೆ.

ಬುಡಕಟ್ಟು ಜನಾಂಗದವರ ವಿಷಯದಲ್ಲಿ ಬಿಜೆಪಿ ಮಾತ್ರ ಗಂಭೀರವಾಗಿದೆ. ಇತರರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

"ಇಂದು ಬಾಬಾ ತಿಲ್ಕಾ ಮಾಂಝಿ ಮತ್ತು ಸಿಡೋ-ಕನ್ಹು ಅವರ ಪುಣ್ಯಭೂಮಿಸಂತಾಲ್ ಪರಗಣದಲ್ಲಿ ಬಾಂಗ್ಲಾದೇಶದ ಒಳನುಸುಳುವಿಕೆ ದೊಡ್ಡ ಸಮಸ್ಯೆಯಾಗಿದೆ. ಬ್ರಿಟಿಷರ ಗುಲಾಮಗಿರಿಯನ್ನು ಎಂದಿಗೂ ಒಪ್ಪಿಕೊಳ್ಳದ ಆ ವೀರರ ವಂಶಸ್ಥರ ಭೂಮಿಯನ್ನು ಈ ನುಸುಳುಕೋರರು ಆಕ್ರಮಿಸಿಕೊಂಡಿರುವುದಕ್ಕಿಂತ ಹೆಚ್ಚಿನ ದುರದೃಷ್ಟಕರ ಏನಿದೆ. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಅಪಾಯದಲ್ಲಿದ್ದಾರೆ ಎಂದು ಚಂಪೈ ಸೊರೆನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಂಪೈ ಸೊರೇನ್
ಜಾರ್ಖಂಡ್‌ ಮಾಜಿ CM ಚಂಪೈ ಸೊರೇನ್ ಆಗಸ್ಟ್ 30 ರಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com