10,000 ರೂ.ಗೆ ಮಗು ಮಾರಾಟ ಮಾಡಿದ್ದ ಅಂಗನವಾಡಿ ಕಾರ್ಯಕರ್ತೆ: ಆಂಧ್ರ ಪ್ರದೇಶ ಪೊಲೀಸರಿಂದ ಶಿಶು ರಕ್ಷಣೆ

ಮೊನ್ನೆ ಸೋಮವಾರ ಪೊನ್ನಲೂರು ಪೊಲೀಸರು ಶಿಶುವನ್ನು ರಕ್ಷಿಸಿ ಒಂಗೋಲ್ ಜಿಜಿಎಚ್‌ನಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಶೀಘ್ರದಲ್ಲೇ ಶಿಶು ಗೃಹಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
10,000 ರೂ.ಗೆ ಮಗು ಮಾರಾಟ ಮಾಡಿದ್ದ ಅಂಗನವಾಡಿ ಕಾರ್ಯಕರ್ತೆ: ಆಂಧ್ರ ಪ್ರದೇಶ ಪೊಲೀಸರಿಂದ ಶಿಶು ರಕ್ಷಣೆ
Updated on

ಒಂಗೋಲೆ: ಅಂಗನವಾಡಿ ಕಾರ್ಯಕರ್ತೆಯೊಬ್ಬರು ತನ್ನ ನವಜಾತ ಹೆಣ್ಣುಮಗುವನ್ನು ತೆಲಂಗಾಣದ ಖಮ್ಮಂನ ದಂಪತಿಗೆ 10 ಸಾವಿರ ರೂಪಾಯಿಗೆ ಮಾರಾಟ ಮಾಡಿ, ಸಿಬ್ಬಂದಿಗೆ ತಿಳಿಸದೆ ಒಂಗೋಲ್ ಸರ್ಕಾರಿ ಜನರಲ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ.

ಮೊನ್ನೆ ಸೋಮವಾರ ಪೊನ್ನಲೂರು ಪೊಲೀಸರು ಶಿಶುವನ್ನು ರಕ್ಷಿಸಿ ಒಂಗೋಲ್ ಜಿಜಿಎಚ್‌ನಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಶೀಘ್ರದಲ್ಲೇ ಶಿಶು ಗೃಹಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಪೊನ್ನಲೂರು ಮಂಡಲದ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಂಗನವಾಡಿ ಕಾರ್ಯಕರ್ತೆ ವಿ ಮಂಜುಳಾ (48ವ) ತನ್ನ ಪತಿಯಿಂದ ವಿಚ್ಛೇದನದ ನಂತರ ಇಬ್ಬರು ಪುತ್ರರು ಮತ್ತು ಪುತ್ರಿಯೊಂದಿಗೆ ವಾಸಿಸುತ್ತಿದ್ದರು.

ಆಕೆ ಗರ್ಭಿಣಿಯಾಗಿದ್ದಾಗ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು. ಆಗಸ್ಟ್ 21 ರಂದು ಕಂದುಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು, ಆಕೆ ದುರ್ಬಲ, ರಕ್ತಹೀನತೆ ಮತ್ತು ನ್ಯುಮೋನಿಯಾ ಲಕ್ಷಣಗಳಿಂದ ಬಳಲುತ್ತಿದ್ದ ಕಾರಣ ಆಗಸ್ಟ್ 22 ರಂದು ಒಂಗೋಲ್ ಜಿಜಿಹೆಚ್‌ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು.

ಜಿಜಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಮಂಜುಳಾ ಅದೇ ವಾರ್ಡ್‌ನಲ್ಲಿರುವ ಇನ್ನೊಬ್ಬ ರೋಗಿಯ ಸಂಪರ್ಕಕ್ಕೆ ಬಂದಳು. ನವಜಾತ ಶಿಶು ತನಗೆ ಬೇಡ, ಆಕೆಯನ್ನು ಮಾರಾಟ ಮಾಡಲು ಸಿದ್ಧ ಎಂದು ಮಹಿಳೆಗೆ ಹೇಳಿದ್ದಾಳೆ. ಇತರ ರೋಗಿ ಮತ್ತು ಆಕೆಯ ಪತಿ ತಕ್ಷಣವೇ ಖಮ್ಮಂನಲ್ಲಿರುವ ತಮ್ಮ ಸಂಬಂಧಿಕರನ್ನು ಸಂಪರ್ಕಿಸಿದರು, ಅವರು ಮಗುವಿಗೆ ಪ್ರತಿಯಾಗಿ ಮಂಜುಳಾಗೆ 10,000 ರೂಪಾಯಿ ನೀಡಿದ್ದರು.

3 ದಿನಗಳಲ್ಲಿ ವರದಿ ಕೇಳಿದ ಎಪಿಎಸ್ ಸಿಪಿಸಿಆರ್

ಅಂಗನವಾಡಿ ಕಾರ್ಯಕರ್ತೆ ಒಪ್ಪಿಗೆ ಸೂಚಿಸಿದ ಬಳಿಕ ಮತ್ತೋರ್ವ ರೋಗಿ 6 ಸಾವಿರ ನೀಡಿ 4 ಸಾವಿರ ಕಮಿಷನ್ ಇಟ್ಟುಕೊಂಡಿದ್ದರು. ತರುವಾಯ, ಮಂಜುಳಾ ಮತ್ತು ಅವಳ ಮಗು, ಇತರ ಮಹಿಳೆಯೊಂದಿಗೆ ಯಾವುದೇ ಮಾತಿಲ್ಲದೆ ಆಸ್ಪತ್ರೆಯಿಂದ ಹೊರಟುಹೋದರು.

ವಿಷಯ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳು ಆಗಸ್ಟ್ 24 ರಂದು ಒಂಗೋಲ್ ಜಿಜಿಎಚ್‌ನಲ್ಲಿ ಅಧಿಕಾರಿಗಳನ್ನು ವಿಚಾರಿಸಿದ್ದಾರೆ.ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ (APSCPCR) ವಿಷಯ ತಿಳಿದಿದೆ. ನಂತರ ಆಯೋಗದ ಸದಸ್ಯೆ ಬತ್ತುಲ ಪದ್ಮಾವತಿ ಅವರು ತಕ್ಷಣ ಪ್ರತಿಕ್ರಿಯಿಸಿ ಸಮಸ್ಯೆಯ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳ ರಕ್ಷಣಾ ಸಮಿತಿ ನೀಡಿದ ದೂರಿನ ಮೇರೆಗೆ ಪೊನ್ನಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಗಸ್ಟ್ 25 ರ ರಾತ್ರಿ, ಮಗು ಇರುವ ಸ್ಥಳದ ಬಗ್ಗೆ ತಿಳಿದುಕೊಂಡು ಸೋಮವಾರ ಬೆಳಿಗ್ಗೆ ಖಮ್ಮಂನಿಂದ ಒಂಗೋಲ್ಗೆ ಕರೆತಂದರು.

10,000 ರೂ.ಗೆ ಮಗು ಮಾರಾಟ ಮಾಡಿದ್ದ ಅಂಗನವಾಡಿ ಕಾರ್ಯಕರ್ತೆ: ಆಂಧ್ರ ಪ್ರದೇಶ ಪೊಲೀಸರಿಂದ ಶಿಶು ರಕ್ಷಣೆ
Video: ಆಟಿಕೆ ಎಂದು ಭಾವಿಸಿ ಹಾವನ್ನೇ ಕಚ್ಚಿದ ಮಗು; ದಂಗಾದ ವೈದ್ಯರು, ಹಾವು ಸಾವು!

ಮಕ್ಕಳ ಹಕ್ಕು ಆಯೋಗ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿ ಜಿಲ್ಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತು, ನೋಟಿಸ್‌ಗಳನ್ನು ಸ್ವೀಕರಿಸಿದ ಮೂರು ದಿನಗಳಲ್ಲಿ ತನಿಖೆ ನಡೆಸಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು.

ಮೂರು ದಿನಗಳೊಳಗೆ ಸಮಗ್ರ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಮಕ್ಕಳ ಹಕ್ಕು ಆಯೋಗ ಅಧ್ಯಕ್ಷ ಕೇಸಲಿ ಅಪ್ಪಾ ರಾವ್ ಅವರು ಜಿಲ್ಲಾ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಮಗುವಿನ ಆರೋಗ್ಯ ಮತ್ತು ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ನಾನು ಪ್ರಕಾಶಂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ) ಅವರೊಂದಿಗೆ ವೈಯಕ್ತಿಕವಾಗಿ ವಿಚಾರಿಸಿದ್ದೇನೆ. ಒಬ್ಬ ಅಂಗನವಾಡಿ ಕಾರ್ಯಕರ್ತೆಯಾಗಿರುವ ಆಕೆ ತನ್ನ ಮಗುವಿನ ಮಾರಾಟಕ್ಕೆ ಮುಂದಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಪದ್ಮಾವತಿ ಟಿಎನ್‌ಐಇಗೆ ತಿಳಿಸಿದರು.

ಈ ಘಟನೆ ಬಗ್ಗೆ ಆಸ್ಪತ್ರೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆ, ಕರ್ತವ್ಯನಿರತ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಔಟ್‌ಪೋಸ್ಟ್ ಭದ್ರತೆಯ ಪಾತ್ರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಸಮಗ್ರ ವಿಚಾರಣೆಯ ಮೂಲಕ ಸತ್ಯಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಆಯೋಗವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com