ಮಧ್ಯ ಪ್ರದೇಶ: ಮಹಿಳೆ, ಅಪ್ರಾಪ್ತ ಪುತ್ರನಿಗೆ ಪೊಲೀಸರಿಂದ ಥಳಿತ; ಹತ್ತು ತಿಂಗಳ ನಂತರ ತನಿಖೆಗೆ ಆದೇಶ

ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವೀಡಿಯೊ ಇದೀಗ ಕೋಲಾಹಲವನ್ನು ಸೃಷ್ಟಿಸಿದ್ದು, ಘಟನೆ ನಡೆದು 10 ತಿಂಗಳ ನಂತರ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ದಲಿತ ಮಹಿಳೆ, 15 ವರ್ಷದ ಮಗನಿಗೆ ಪೊಲೀಸರಿಂದ ಥಳಿತ
ದಲಿತ ಮಹಿಳೆ, 15 ವರ್ಷದ ಮಗನಿಗೆ ಪೊಲೀಸರಿಂದ ಥಳಿತ
Updated on

ಭೋಪಾಲ್: ಪೊಲೀಸ್ ಠಾಣೆಯಲ್ಲಿ ದಲಿತ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗನ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿ, ಥಳಿಸುವ ವೀಡಿಯೊ ಇತ್ತೀಚೆಗೆ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವೀಡಿಯೊ ಇದೀಗ ಕೋಲಾಹಲವನ್ನು ಸೃಷ್ಟಿಸಿದ್ದು, ಘಟನೆ ನಡೆದು 10 ತಿಂಗಳ ನಂತರ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಪೊಲೀಸ್ ಠಾಣೆಯೊಳಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ದೊಣ್ಣೆಯಿಂದ ಥಳಿಸಿ, ಎಳೆದೊಯ್ದು ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಂತರ ಇತರ ನಾಲ್ವರು ಪೊಲೀಸರು ಸಮವಸ್ತ್ರದಲ್ಲಿ ಕೋಣೆಗೆ ಪ್ರವೇಶಿಸಿ ಮಹಿಳೆಯ ಹದಿಹರೆಯದ ಮಗನ ಮೇಲೆ ಹಲ್ಲೆ ಮಾಡುತ್ತಿರುವುದು ವಿಡಿಯೋದಲ್ಲಿದೆ.

ತಾಯಿಯ ಮುಂದೆಯೇ ಇಬ್ಬರು ಪೊಲೀಸರು ಬಾಲಕನನ್ನು ಹಿಡಿದು ದೊಣ್ಣೆಯಿಂದ ಕ್ರೂರವಾಗಿ ಥಳಿಸುತ್ತಿರುವುದು ವಿಡಿಯೋ ಸೆರೆಯಾಗಿದೆ.

"ಮುಖ್ಯಮಂತ್ರಿ ಮೋಹನ್ ಯಾದವ್ ಅವರೇ ದಯವಿಟ್ಟು ಮಧ್ಯಪ್ರದೇಶದಲ್ಲಿ ಏನಾಗುತ್ತಿದೆ ಎಂದು ನಮಗೆ ತಿಳಿಸುವಿರಾ? ನಿಮ್ಮ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಮೂಲಕ ಜನರನ್ನು ಕೊಲ್ಲಲು ಮುಂದಾಗಿದ್ದಾರೆ" ಎಂದು ಕಾಂಗ್ರೆಸ್ ವಿಡಿಯೋವನ್ನು ಶೇರ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದೆ.

"ಕಟ್ನಿ ಜಿಆರ್‌ಪಿ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತ ಕುಟುಂಬದ 15 ವರ್ಷದ ಬಾಲಕ ಮತ್ತು ಆತನ ತಾಯಿಯ ಮೇಲೆ ಪೊಲೀಸ್ ಠಾಣೆಯ ಪ್ರಭಾರಿ ಮತ್ತು ಪೊಲೀಸ್ ಸಿಬ್ಬಂದಿಯ ಕ್ರೌರ್ಯವು ಮನ ಕಲಕುವ ಘಟನೆಯಾಗಿದೆ! ಈ ಜನ ಎಲ್ಲಿಗೆ ಬಂದರು ಎಂಬುದು ಪ್ರಶ್ನೆ. ನಿಮ್ಮ ಉದಾಸೀನತೆಯಿಂದಾಗಿ ಪೊಲೀಸರಿಗೆ ಈ ಧೈರ್ಯ ಬಂತೆ? ಅಥವಾ ಅಂತಹ ಕೃತ್ಯಗಳನ್ನು ಮಾಡಲು ನೀವು ಅವರಿಗೆ ಪರವಾನಗಿ ನೀಡಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ವಿಡಿಯೋ ವೈರಲ್ ಆಗಿದ್ದು, ಘಟನೆ ನಡೆದು ಹತ್ತು ತಿಂಗಳು ಕಳೆದರೂ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಪೊಲೀಸರು ಗುರುವಾರ ಈ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com