
ಥಾಣೆ: ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ 24 ವರ್ಷದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಮತ್ತು ಸೆಕ್ಸ್ ದಂಧೆಗಾಗಿ ಮಹಿಳೆಯನ್ನು 2 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದಲ್ಲಿ ನವಿ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸೆಕ್ಸ್ ದಂಧೆಗಾಗಿ ಬಾಂಗ್ಲಾದೇಶಿ ಮಹಿಳೆಯ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಮಹಿಳೆ ಸೇರಿದಂತೆ ಬಂಧಿತ ಜೋಡಿಯನ್ನು ನೆರೂಲ್ ಮೂಲದ ಅಮೀರ್ ಅಜಂ(27) ಮತ್ತು ಶೈಫಾಲಿ ಜಹಾಂಗೀರ್ ಮುಲ್ಲಾ(34) ಎಂದು ಗುರುತಿಸಲಾಗಿದೆ.
"ಕೆಲವು ಏಜೆಂಟರು ಸಂತ್ರಸ್ತೆಯನ್ನು ಉದ್ಯೋಗ ಕೊಡಿಸುವ ಭರವಸೆಯ ಮೇಲೆ ಭಾರತಕ್ಕೆ ಕರೆತಂದು ವಂಚಿಸಿದ್ದಾರೆ. ಮಹಿಳೆ ಭಾರತಕ್ಕೆ ಬಂದ ನಂತರ ಒಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ, ಇತರ ಕೆಲವು ಆರೋಪಿಗಳು ಯುವತಿಯನ್ನು ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಸೆಕ್ಸ್ ದಂಧೆ ನಡೆಸುತ್ತಿರುವವರಿಗೆ ಒಪ್ಪಿಸಿದ್ದಾರೆ ಎಂದು ನೆರೂಲ್ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ನೀಲೇಶ್ ಫುಲೆ ಹೇಳಿದ್ದಾರೆ.
"ಏಜೆಂಟರು ನಂತರ ಸಂತ್ರಸ್ತೆಯನ್ನು ಕರೆದೊಯ್ದು ಇತರ ಇಬ್ಬರು ಆರೋಪಿಗಳಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಅವರು ಸೆಕ್ಸ್ ದಂಧೆಯಲ್ಲಿ ಭಾಗಿಯಾಗುವಂತೆ ಯುವತಿಗೆ ಒತ್ತಾಯಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಅಡಿಯಲ್ಲಿ ಅತ್ಯಾಚಾರ, ಮಾನವ ಕಳ್ಳಸಾಗಣೆ, ಅನೈತಿಕ ಸಂಬಂಧ(ತಡೆಗಟ್ಟುವಿಕೆ) ಕಾಯ್ದೆ, ಪಾಸ್‌ಪೋರ್ಟ್(ಭಾರತದ ಪ್ರವೇಶ) ಕಾಯ್ದೆ ಸೇರಿದಂತೆ ಇತರ ಸೆಕ್ಷೆನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಅವರು ತಿಳಿಸಿದ್ದಾರೆ.
Advertisement