
ರಾಂಚಿ: ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಜೆಎಂಎಂಗೆ ಮತ್ತೊಂದು ಹಿನ್ನಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಸೇರಿದ ಮಾರನೇ ದಿನವೇ ಉಚ್ಛಾಟಿತ ಜೆಎಂಎಂ ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಅವರು ಶನಿವಾರ ಕೇಸರಿ ಪಡೆ ಸೇರಿದರು.
ಇಂದು ರಾಂಚಿಯ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕೊಲ್ಹಾನ್ ಟೈಗರ್ ಮತ್ತು ಬಿಜೆಪಿ ನಾಯಕ ಚಂಪೈ ಸೊರೆನ್, ಬಿಜೆಪಿ ನಾಯಕಿ ಸೀತಾ ಸೊರೆನ್, ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಮತ್ತು ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿ ಅವರ ಸಮ್ಮುಖದಲ್ಲಿ ಹೆಂಬ್ರೋಮ್ ಅವರು ಬಿಜೆಪಿ ಸೇರಿದರು.
ಜಾರ್ಖಂಡ್ ವಿಧಾನಸಭೆಯ ಸ್ಪೀಕರ್, ಪಕ್ಷಾಂತರ ಪ್ರಕರಣದಲ್ಲಿ ಹೆಂಬ್ರೋಮ್ ಅವರ ಶಾಸಕತ್ವವನ್ನು ಅನರ್ಹಗೊಳಿಸಿದ್ದಾರೆ.
ಹೆಂಬ್ರೋಮ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್‌ಮಹಲ್ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಪಕ್ಷದ ವಿರುದ್ಧವೇ ಸ್ಪರ್ಧಿಸಿದ್ದರು. ಈ ಕಾರಣದಿಂದಾಗಿ ಜೆಎಂಎಂ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು.
ಲೋಬಿನ್ ಹೆಂಬ್ರೋಮ್ ಅವರು ರಾಜ್ಯದ ಸಂತಾಲ್ ಪರಗಣ ಪ್ರದೇಶದ ಪ್ರಬಲ ಬುಡಕಟ್ಟು ನಾಯಕರಾಗಿದ್ದಾರೆ.
Advertisement