ಸ್ವತಃ ತಾಯಿ ಕರೆದರೂ ಕಿಡ್ನಾಪರ್ ಬಳಿಯಿಂದ ಬರಲೊಪ್ಪದ ಬಾಲಕ: ಮನಕಲಕುವ ವಿಡಿಯೊ...

ಕಿಡ್ನಾಪ್ ಮಾಡಿದ ಕಿಡ್ನಾಪರ್‌ನನ್ನು ಬಿಟ್ಟು ತನ್ನ ಮನೆಗೆ ಹೋಗೋದಕ್ಕೆ 2 ವರ್ಷದ ಬಾಲಕ ನಿರಾಕರಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಿಡ್ನಾಪರ್ ನಿಂದ ಬರಲೊಪ್ಪದ ಪುಟ್ಟ ಬಾಲಕ
ಕಿಡ್ನಾಪರ್ ನಿಂದ ಬರಲೊಪ್ಪದ ಪುಟ್ಟ ಬಾಲಕ
Updated on

ಜೈಪುರ: ಕಿಡ್ನಾಪರ್ ನ್ನು ಇಷ್ಟಪಡುವ ಮಕ್ಕಳು, ಅವರನ್ನು ಬಿಟ್ಟು ಬರಲು ಮನಸ್ಸಾಗದೆ ಅಳುವುದನ್ನು ನೀವು ಸಿನಿಮಾದಲ್ಲಿ ನೋಡಿರಬಹುದು. ಆದರೆ ನಿಜ ಜೀವನದಲ್ಲಿ ರಾಜಸ್ಥಾನದ ಜೈಪುರದಲ್ಲಿ ಇಂತಹ ಘಟನೆಯೊಂದು ನಡೆದಿದೆ.

ಕಿಡ್ನಾಪ್ ಮಾಡಿದ ಕಿಡ್ನಾಪರ್‌ನನ್ನು ಬಿಟ್ಟು ತನ್ನ ಮನೆಗೆ ಹೋಗೋದಕ್ಕೆ 2 ವರ್ಷದ ಬಾಲಕ ನಿರಾಕರಿಸಿದ್ದಾನೆ. ತನ್ನ ತಾಯಿಯೇ ಬಂದು ಕರೆದರೂ ಬಾಲಕ ಮಾತ್ರ ಕಿಡ್ನಾಪರ್‌ನನ್ನು ಬಿಟ್ಟು ಬರಲ್ಲ ಅಂತ ಹಠ ಹಿಡಿದಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

14 ತಿಂಗಳ ಹಿಂದೆ ಪೃಥ್ವಿ ಎಂಬ 11 ತಿಂಗಳ ಮಗುವನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಆತನ ತಂದೆ ತಾಯಿ ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಮಗುವಿಗಾಗಿ ಎಲ್ಲಾ ಕಡೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಬಾಲಕ ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ. ಬಾಲಕನನ್ನು ಯಾರು ಕಿಡ್ನಾಪ್ ಮಾಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇದ್ದರೂ, ಆತನ್ನು ಹಿಡಿಯೋಕೆ ಆಗಿರಲಿಲ್ಲ.

ಕೊನೆಗೂ ಕಿಡ್ನಾಪರ್‌ನನ್ನು ಪತ್ತೆ ಹಚ್ಚಿದ ಪೊಲೀಸರು, ಆತನನ್ನು ಅರಸ್ಟ್ ಮಾಡಿದ್ದಾರೆ. ಈ ವೇಳೆ ಬಾಲಕನ್ನು ಕರೆದುಕೊಂಡು ಹೋಗಲು ಆತನ ತಾಯಿ ಸೇರಿದಂತೆ ಕುಟುಂಬಸ್ಥರು ಬಂದಿದ್ದರು. ಆದರೆ ಕಿಡ್ನಾಪರ್‌ ಧನುಜ್‌ನನ್ನು ಬಿಟ್ಟು ಹೋಗಲು ಬಾಲಕ ಒಪ್ಪಿಲ್ಲ, ತಾಯಿಯೇ ಬಂದು ಕರೆದರೂ ಮನೆಗೆ ಬರಲು ಒಪ್ಪದ ಬಾಲಕ, ಕಿಡ್ನಾಪರ್ ಧನುಜ್‌ನನ್ನು ತಬ್ಬಿ ಹಿಡಿದಿದ್ದಾನೆ. ಈ ವೇಳೆ ಆರೋಪಿಯೂ ಕಣ್ಣೀರಿಟ್ಟಿರುವ ದೃಶ್ಯ ಮನಕಲಕುವಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com