ನ್ಯಾಯಾಂಗ ಸಮಿತಿ ಸದಸ್ಯರು ಸಂಭಾಲ್‌ ಜಾಮಾ ಮಸೀದಿ ಹಿಂಸಾಚಾರ: ನ್ಯಾಯಾಂಗ ಸಮಿತಿ ಸದಸ್ಯರಿಂದ ತಪಾಸಣೆ

ಸಮಿತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡಿ ಘಟನೆಯ ಕುರಿತು ನಿವಾಸಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಸಮಿತಿಯೊಂದಿಗೆ ಭದ್ರತಾ ಸಿಬ್ಬಂದಿ ಇದ್ದರು. ಆದಾಗ್ಯೂ, ಬೆಳಗ್ಗೆ ಭೇಟಿಯ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಆಯೋಗದ ಸದಸ್ಯರು ಪ್ರತಿಕ್ರಿಯಿಸಲಿಲ್ಲ.
ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಗೆ ಭಾನುವಾರ ಭೇಟಿ ನೀಡಿತು.
ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಗೆ ಭಾನುವಾರ ಭೇಟಿ ನೀಡಿತು.
Updated on

ಸಂಭಾಲ್: ಮೊಘಲರ ಕಾಲದ ಮಸೀದಿಯ ಸಮೀಕ್ಷೆಯ ಕುರಿತು ನ್ಯಾಯಾಲಯದ ಆದೇಶದ ಮೇರೆಗೆ ಹಿಂಸಾಚಾರಕ್ಕೆ ಶಾಹಿ ಜಾಮಾ ಮಸೀದಿಗೆ ಬಿಗಿ ಭದ್ರತೆಯ ನಡುವೆ, ನ್ಯಾಯಾಂಗ ಆಯೋಗದ ಸದಸ್ಯರು ಭಾನುವಾರ ಭೇಟಿ ನೀಡಿದರು.

ತಂಡದ ಮುಖ್ಯಸ್ಥ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ದೇವೇಂದ್ರ ಕುಮಾರ್ ಅರೋರಾ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಅರವಿಂದ್ ಕುಮಾರ್ ಜೈನ್ ಅವರು ತ್ರಿಸದಸ್ಯ ಆಯೋಗದ ಇಬ್ಬರು ಸದಸ್ಯರು ಆಗಿದ್ದು, ನವೆಂಬರ್ 24 ರಂದು ಹಿಂಸಾಚಾರಕ್ಕೆ ಸಾಕ್ಷಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಸಮಿತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡಿ ಘಟನೆಯ ಕುರಿತು ನಿವಾಸಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಸಮಿತಿಯೊಂದಿಗೆ ಭದ್ರತಾ ಸಿಬ್ಬಂದಿ ಇದ್ದರು. ಆದಾಗ್ಯೂ, ಬೆಳಗ್ಗೆ ಭೇಟಿಯ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಆಯೋಗದ ಸದಸ್ಯರು ಪ್ರತಿಕ್ರಿಯಿಸಲಿಲ್ಲ.

ಇವರೊಂದಿಗೆ ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್, ಡಿಐಜಿ ಮುನಿರಾಜ್ ಜಿ, ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್ ಇದ್ದರು.

ಸಂಭಾಲ್‌ನಲ್ಲಿ ಪ್ರಸ್ತುತ ಪರಿಸ್ಥಿತಿ ಶಾಂತವಾಗಿದ್ದು, ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ. ಸಂಭಾಲ್‌ನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಶಾಂತಿಯುತವಾಗಿದೆ, ಇದೀಗ ಅಲ್ಲಿ ಯಾವುದೇ ಸಮಸ್ಯೆ ಇಲ್ಲ, ನಿರಂತರ ನಿಗಾ ಇರಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಜಾಗರೂಕತೆಯನ್ನು ನಿರ್ವಹಿಸಲಾಗಿದೆ ಎಂದು ಹೇಳಿದರು.

ನಾವು ಸ್ಥಳದಲ್ಲಿ ಭದ್ರತೆಯನ್ನು ಬಲಪಡಿಸಿದ್ದೇವೆ ಮತ್ತು ಪಡೆಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳನ್ನು ಸುರಕ್ಷಿತವಾಗಿ ಆಯೋಜಿಸಲು ನಾವು ಬದ್ಧರಾಗಿದ್ದೇವೆ. ಯಾವುದೇ ಹಿಂಸಾಚಾರದ ಲಕ್ಷಣಗಳಿಲ್ಲ. ಪ್ರತಿ ನಿರ್ಣಾಯಕ ಹಂತದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ನಾಳೆ ನಮಾಜ್ ಗೆ ಅನುಮತಿ ನೀಡಲಾಗುವುದು ಎಂದು ಸಂಭಾಲ್ ಎಎಸ್ಪಿ ಶ್ರೀಶ್ಚಂದ್ ಹೇಳಿದ್ದಾರೆ.

ನವೆಂಬರ್ 24 ರಂದು ಶಾಹಿ ಜಾಮಾ ಮಸೀದಿಯ ನ್ಯಾಯಾಲಯದ ಆದೇಶದ ನಂತರ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡರು. ಇಲ್ಲಿಯವರೆಗೆ, 25 ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 27 ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com