6 ವಲಸೆ ಕಾರ್ಮಿಕರು, ವೈದ್ಯನ ಹತ್ಯೆ ಮಾಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಜುನೈದ್ ಭಾರತೀಯ ಸೇನೆ ಗುಂಡಿಗೆ ಬಲಿ!

ಹತ್ಯೆಗೀಡಾದ ಉಗ್ರನನ್ನು ಜುನೈದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಜುನೈದ್ ಲಷ್ಕರ್-ಎ-ತೊಯ್ಬಾದ ಎ-ಕೆಟಗರಿ ಭಯೋತ್ಪಾದಕನಾಗಿದ್ದು ಗಗಂಗೀರ್, ಗಂದರ್‌ಬಾಲ್‌ನಲ್ಲಿ ನಾಗರಿಕರ ಹತ್ಯೆ ಮತ್ತು ಇತರ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದನು.
Junaid Ahmed Bhat
ಜುನೈದ್ ಅಹ್ಮದ್ ಭಟ್
Updated on

ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಭದ್ರತಾ ಪಡೆಗಳು ಉತ್ತಮ ಯಶಸ್ಸನ್ನು ಸಾಧಿಸಿವೆ. ಶ್ರೀನಗರದ ದಚಿಗಮ್‌ನಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕನನ್ನು ಹತ್ಯೆಗೈದಿದ್ದಾರೆ.

ಹತ್ಯೆಗೀಡಾದ ಉಗ್ರನನ್ನು ಜುನೈದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಜುನೈದ್ ಲಷ್ಕರ್-ಎ-ತೊಯ್ಬಾದ ಎ-ಕೆಟಗರಿ ಭಯೋತ್ಪಾದಕನಾಗಿದ್ದು ಗಗಂಗೀರ್, ಗಂದರ್‌ಬಾಲ್‌ನಲ್ಲಿ ನಾಗರಿಕರ ಹತ್ಯೆ ಮತ್ತು ಇತರ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದನು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಚಿಗಮ್‌ನ ಮೇಲಿನ ಪ್ರದೇಶಗಳಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡ ನಡೆಸುತ್ತಿದೆ. ಶೋಧ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಗುಂಡು ಹಾರಿಸಿದ್ದು ನಂತರ ಕಾರ್ಯಾಚರಣೆ ಆರಂಭವಾಗಿದೆ.

ದಚಿಗಮ್ ಅರಣ್ಯದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳ ಜಂಟಿ ತಂಡ ಶೋಧ ಕಾರ್ಯ ಆರಂಭಿಸಿದೆ. ಅಷ್ಟರಲ್ಲಿ ಪ್ರದೇಶವನ್ನು ಸುತ್ತುವರಿದಿದ್ದನ್ನು ಕಂಡು ಉಗ್ರರು ಗುಂಡಿನ ದಾಳಿ ಆರಂಭಿಸಿದರು. ಪ್ರತೀಕಾರದ ಕ್ರಮದೊಂದಿಗೆ ಎನ್ಕೌಂಟರ್ ಪ್ರಾರಂಭವಾಯಿತು. ಇಲ್ಲಿಯವರೆಗೆ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.

Junaid Ahmed Bhat
ಶ್ರೀನಗರ: ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಉಗ್ರ ಹತ್ಯೆ

ಭಾರತೀಯ ಸೇನೆಯ ಉತ್ತರ ಕಮಾಂಡ್ ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದು, ನಾರ್ದರ್ನ್ ಕಮಾಂಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಅವರು ಚಿನಾರ್ ವಾರಿಯರ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅತ್ಯುತ್ತಮ ಸಮನ್ವಯ, ತ್ವರಿತ ಕ್ರಮ ಮತ್ತು ಆಪರೇಷನ್ ದಚಿಗಮ್ ಕಾರ್ಯಾಚರಣೆಯ ನಿಖರವಾದ ಕಾರ್ಯಗತಗೊಳಿಸುವಿಕೆಯನ್ನು ಅಭಿನಂದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ದಚಿಗಮ್ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಸುಮಾರು 141 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com