'ಶಿಂಧೆ ಯುಗ ಮುಗಿಯಿತು, ಆತ ಮತ್ತೆಂದು ಸಿಎಂ ಆಗಲ್ಲ': ಸಂಜಯ್ ರಾವತ್

ಶಿಂಧೆಯನ್ನು ಭಾರತೀಯ ಜನತಾ ಪಕ್ಷವು 'ಬಳಸಿ ಬಿಸಾಡಿದೆ' ಎಂದು ರಾವತ್ ಹೇಳಿದ್ದಾರೆ. ಶಿಂಧೆ ಯುಗ ಮುಗಿದಿದೆ. ಅವರ ಉಪಸ್ಥಿತಿ ಕೇವಲ ಎರಡು ವರ್ಷಗಳು ಮಾತ್ರ. ಅವರ ಬಳಕೆ ಈಗ ಕೊನೆಗೊಂಡಿದೆ.
sanjay raut
ಸಂಜಯ್ ರಾವುತ್
Updated on

ಮುಂಬೈ: ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ನಿರ್ಗಮಿತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಶಿಂಧೆ ಯುಗ ಮುಗಿದಿದೆ' ಅವರು ಮತ್ತೆ ಎಂದಿಗೂ ಸಿಎಂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಮಹಾಯುತಿ ಮೈತ್ರಿಕೂಟವು ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಿದ ನಂತರ ಮತ್ತು ಮಹಾರಾಷ್ಟ್ರದಲ್ಲಿ ಅವರ ಐತಿಹಾಸಿಕ ವಿಜಯದ ನಂತರ ನಿರ್ಗಮಿತ ಸಿಎಂ ಏಕನಾಥ್ ಶಿಂಧೆಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದ ನಂತರ ಸಂಜಯ್ ರಾವುತ್ ಅವರ ಈ ಹೇಳಿಕೆ ಬಂದಿವೆ.

ಶಿಂಧೆಯನ್ನು ಭಾರತೀಯ ಜನತಾ ಪಕ್ಷವು 'ಬಳಸಿ ಬಿಸಾಡಿದೆ' ಎಂದು ರಾವತ್ ಹೇಳಿದ್ದಾರೆ. ಶಿಂಧೆ ಯುಗ ಮುಗಿದಿದೆ. ಅವರ ಉಪಸ್ಥಿತಿ ಕೇವಲ ಎರಡು ವರ್ಷಗಳು ಮಾತ್ರ. ಅವರ ಬಳಕೆ ಈಗ ಕೊನೆಗೊಂಡಿದೆ. ಅವರನ್ನು ಬದಿಗೆ ತಳ್ಳಲಾಗಿದೆ. ಶಿಂಧೆ ಅವರು ಮುಂದೆ ಈ ರಾಜ್ಯದ ಸಿಎಂ ಆಗುವುದಿಲ್ಲ. ಇದು ಬಿಜೆಪಿಯ ನೀತಿಯಾಗಿದೆ. ರಾಜಕೀಯದಲ್ಲಿ ಬಿಜೆಪಿಯವರು ತಮ್ಮೊಂದಿಗೆ ಕೆಲಸ ಮಾಡುವವರ ಪಕ್ಷವನ್ನು ಒಡೆಯುತ್ತಾರೆ ಎಂದರು.

ಸ್ಪಷ್ಟ ಬಹುಮತವಿದ್ದರೂ ಮಹಾರಾಷ್ಟ್ರ ಸಿಎಂ ಹೆಸರನ್ನು ಬಹಿರಂಗಪಡಿಸಲು ವಿಳಂಬ ಮಾಡಿರುವುದನ್ನು ರಾವತ್ ಪ್ರಶ್ನಿಸಿದ್ದಾರೆ. ಮಹಾಯುತಿ ಮೈತ್ರಿಯಲ್ಲೇ ದೋಷವಿದೆ ಎಂದರು. ದೇವೇಂದ್ರ ಫಡ್ನವಿಸ್ ಇಂದಿನಿಂದ ರಾಜ್ಯದ ಸಿಎಂ ಆಗಲಿದ್ದಾರೆ. ಅವರಿಗೆ ಬಹುಮತವಿದೆ. ಆದರೆ ಈ ಹೊರತಾಗಿಯೂ ಅವರು 15 ದಿನಗಳ ಕಾಲ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಇದರರ್ಥ ಅವರ ಪಕ್ಷ ಅಥವಾ ಮಹಾಯುತಿಯಲ್ಲಿ ಏನಾದರೂ ತಪ್ಪಾಗಿದೆ. ಈ ವಿಷಯ ನಾಳೆಯಿಂದ ಗೋಚರಿಸುತ್ತದೆ ಎಂದರು.

ಸಿಎಂ ಆಗಿ ಫಡ್ನವಿಸ್ ಪ್ರಮಾಣ ವಚನ

ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದರು. ಅಜಿತ್ ಪವಾರ್ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

sanjay raut
ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕಾರ

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟವು 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ವಿಜಯವನ್ನು ದಾಖಲಿಸಿತು. 235 ಸ್ಥಾನಗಳೊಂದಿಗೆ ಪ್ರಚಂಡ ವಿಜಯವನ್ನು ಗಳಿಸಿತು. 132 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಈ ಫಲಿತಾಂಶಗಳು ಮಹತ್ವದ ಮೈಲಿಗಲ್ಲು. ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ 57 ಮತ್ತು 41 ಸ್ಥಾನಗಳೊಂದಿಗೆ ಗಮನಾರ್ಹ ಮುನ್ನಡೆ ಸಾಧಿಸಿವೆ. ಆದರೆ, ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರಮುಖ ಹಿನ್ನಡೆ ಅನುಭವಿಸಿತು. ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಪಡೆಯಿತು. ಅದರ ಮೈತ್ರಿಕೂಟದ ಪಾಲುದಾರ ಶಿವಸೇನೆ (ಯುಬಿಟಿ) 20 ಸ್ಥಾನಗಳನ್ನು ಗೆದ್ದರೆ, ಎನ್‌ಸಿಪಿ (ಶರದ್ ಪವಾರ್ ಬಣ) ಕೇವಲ 10 ಸ್ಥಾನಗಳನ್ನು ಗಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com