
ಮುಂಬೈ: ಮಹಾಯುತಿ ಸರ್ಕಾರ 'ನಂಬಲಾಗದ' ಜನಾದೇಶದೊಂದಿಗೆ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, 'ರಾಜ್ಯ, ಮರಾಠಿ ಜನರು, ಭಾಷೆ ಮತ್ತು ಸಂಸ್ಕೃತಿ'ಗಾಗಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಆಶಿಸುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.
ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸಮಾರಂಭಕ್ಕೆ ಗೈರು ಆಗಿರುವ ರಾಜ್ ಠಾಕ್ರೆ ಅವರು, ಎಕ್ಸ್‌ನಲ್ಲಿ ತಮ್ಮ 'ಸ್ನೇಹಿತ' ದೇವೇಂದ್ರ ಫಡ್ನವಿಸ್‌ಗೆ ಶುಭ ಹಾರೈಸಿದ್ದಾರೆ.
2019 (ವಿಧಾನಸಭಾ ಚುನಾವಣೆಯ ನಂತರ) ಮತ್ತು 2022 ರಲ್ಲಿ(ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ) ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಫಡ್ನವೀಸ್ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ.
'ಈ ಬಾರಿ ಜನರು ಮಹಾಯುತಿಗೆ ನಂಬಲಾಗದ ಜನಾದೇಶ ನೀಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ದೇವೇಂದ್ರ ಫಡ್ನವಿಸ್ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಈ ದೊಡ್ಡ ಜನಾದೇಶವನ್ನು ರಾಜ್ಯ, ಮರಾಠಿ ಜನರ, ಭಾಷೆ ಮತ್ತು ಸಂಸ್ಕೃತಿಗೆ ಸರಿಯಾಗಿ ಬಳಸಲ್ಪಡುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಠಾಕ್ರೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement