"ದೇಶ ಮಾರಲು ಬಿಡುವುದಿಲ್ಲ" ಭಿತ್ತಿ ಪತ್ರ ಹಿಡಿದು ವಿಪಕ್ಷಗಳ ಪ್ರತಿಭಟನೆ; ಅದಾನಿ ವಿಷಯವಾಗಿ ಜೆಪಿಸಿ ತನಿಖೆಗೆ ಆಗ್ರಹ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರ, ಕಾಂಗ್ರೆಸ್, ಡಿಎಂಕೆ ಹಾಗೂ ಎಡಪಕ್ಷಗಳ ಸಂಸದರು ಮಕರ್ ದ್ವಾರದ ಮೆಟ್ಟಿಲುಗಳ ಮೇಲೆ ನಿಂತು ಪ್ರತಿಭಟನೆ ನಡೆಸಿ ದೇಶವನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
Congress and other opposition parties' MPs stage a protest demonstration during the Winter session of Parliament, in New Delhi.
ವಿಪಕ್ಷಗಳ ಸಂಸದರ ಪ್ರತಿಭಟನೆonline desk
Updated on

ನವದೆಹಲಿ: ಅದಾನಿ ವಿಷಯವನ್ನಿಟ್ಟುಕೊಂಡು ಸಂಸತ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರದಂದೂ ಮುಂದುವರೆದಿದೆ.

ಸಂಸತ್ ಭವನದ ಎದುರು ದೇಶ ಮಾರಲು ಬಿಡುವುದಿಲ್ಲ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿರುವ ವಿಪಕ್ಷಗಳ ಸಂಸದರು, ಅದಾನಿ ವಿಷಯವಾಗಿ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರ, ಕಾಂಗ್ರೆಸ್, ಡಿಎಂಕೆ ಹಾಗೂ ಎಡಪಕ್ಷಗಳ ಸಂಸದರು ಮಕರ್ ದ್ವಾರದ ಮೆಟ್ಟಿಲುಗಳ ಮೇಲೆ ನಿಂತು ಪ್ರತಿಭಟನೆ ನಡೆಸಿ ದೇಶವನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ಮತ್ತು ಅದಾನಿ ನಡುವಿನ ಆಪಾದಿತ ಒಡನಾಟದ ವಿರುದ್ಧ ಘೋಷಣೆಗಳನ್ನು ಎತ್ತಿದರು ಮತ್ತು ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಬುಧವಾರ, ಹಲವಾರು ಪ್ರತಿಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಒಂದು ಕೈಯಲ್ಲಿ ಕೆಂಪು ಗುಲಾಬಿ ಮತ್ತೊಂದು ಕೈಲಿ ತ್ರಿವರ್ಣ ಧ್ವಜವನ್ನು ಹಿಡಿದು ಸ್ವಾಗತಿಸಿದರು. ಆಡಳಿತ ಪಕ್ಷವನ್ನು ಸದನದ ಕಾರ್ಯಗಳು, ಅದಾನಿ ವಿಷಯ ಸೇರಿದಂತೆ ಎಲ್ಲಾ ಸಮಸ್ಯೆಗಳು ಚರ್ಚೆಯಲ್ಲಿ ಒಳಗೊಳ್ಳುವುದನ್ನು ನೋಡಿಕೊಳ್ಳುವಂತೆ ಆಡಳಿತಾರೂಢ ಸಂಸದರನ್ನು ಒತ್ತಾಯಿಸಿದರು.

Congress and other opposition parties' MPs stage a protest demonstration during the Winter session of Parliament, in New Delhi.
ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ: ಕಪ್ಪು ಜೋಳಿಗೆ ಹಿಡಿದ ವಿಪಕ್ಷ ಸಂಸದರು

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಗುಲಾಬಿ ಹಾಗೂ ತ್ರಿವರ್ಣ ಧ್ವಜವನ್ನು ನೀಡಿದ್ದು ನೆನ್ನೆಯ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ವ್ಯಂಗ್ಯಚಿತ್ರಗಳೊಂದಿಗೆ "ಮೋದಿ-ಅಡಾನಿ ಭಾಯ್-ಭಾಯ್" ಎಂದು ಬರೆದಿದ್ದ ಜೋಳಿಗೆಗಳನ್ನು ಹಿಡಿಯುವ ಮೂಲಕ ಸಂಸದರು ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com