ಹರಿಯಾಣ: ಪೊಲೀಸರಿಂದ ಅಶ್ರುವಾಯು ಪ್ರಯೋಗ, 17 ಮಂದಿ ರೈತರಿಗೆ ಗಾಯ, ದಿನದ ಮಟ್ಟಿಗೆ ದೆಹಲಿ ಚಲೋ ಸ್ಥಗಿತ

ಈ ಬಾರಿ ರೈತರನ್ನು ಚದುರಿಸಲು ರಾಸಾಯನಿಕ ಮಿಶ್ರಿತ ನೀರನ್ನು ಬಳಸಲಾಗಿದ್ದು, ಹೆಚ್ಚಿನ ಅಶ್ರುವಾಯು ಶೆಲ್‌ಗಳ ಬಳಕೆ ಆರೋಪ
Farmers move away as security personnel fire teargas shells
ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ
Updated on

ಶಂಭು: ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದ 17ಮಂದಿ ರೈತರು ಗಾಯಗೊಂಡ ನಂತರ ದಿನದ ಮಟ್ಟಿಗೆ ದೆಹಲಿ ಚಲೋ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಗಾಯಾಳುಗಳನ್ನು ಪ್ರತಿಭಟನಾ ಸ್ಥಳದಿಂದ ಆಂಬ್ಯುಲೆನ್ಸ್ ನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಡಿಸೆಂಬರ್ 16 ರಂದು ಟ್ರಾಕ್ಟರ್ ಜಾಥಾವನ್ನು ಘೋಷಿಸಿದ್ದ ರೈಲು ಡಿಸೆಂಬರ್ 18 ರಂದು ಪಂಜಾಬಿನಲ್ಲಿ ರೈಲು ರೈಲು ರೊಕೋ ಪ್ರತಿಭಟನೆ ಘೋಷಿಸಿದ್ದರು. ಪ್ರತಿಭಟನಾನಿರತ ರೈತರು ಗಾಯಗೊಂಡ ನಂತರ ದೆಹಲಿ ಚಲೋ ಪ್ರತಿಭಟನೆ ಸ್ಥಗಿತಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಯಾ ಸಂಘಟನೆಗಳು ನಿರ್ಧರಿಸಿದ್ದಾಗಿ ರೈತ ನಾಯಕ ಸರ್ವಾನ್ ಸಿಂಗ್ ಪಂದರ್ ತಿಳಿಸಿದರು.

ಶಂಭು ಗಡಿಯಲ್ಲಿನ ಪ್ರತಿಭಟನಾ ಸ್ಥಳದಿಂದ ಕೆಲವು ಮೀಟರ್‌ಗಳವರೆಗೆ ನಡೆದ ಕೂಡಲೇ, 101 ರೈತರ ಗುಂಪನ್ನು ಹರಿಯಾಣ ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ ಬ್ಯಾರಿಕೇಡ್‌ನಲ್ಲಿ ತಡೆದರು. ಬಳಿಕ ಪೊಲೀಸರು ಅಶ್ರುವಾಯು ಸಿಡಿಸಿ, ಜಲಫಿರಂಗಿಗಳನ್ನು ಬಳಸಿದರು. ಈ ಬಾರಿ ರೈತರನ್ನು ಚದುರಿಸಲು ರಾಸಾಯನಿಕ ಮಿಶ್ರಿತ ನೀರನ್ನು ಬಳಸಲಾಗಿದ್ದು, ಹೆಚ್ಚಿನ ಅಶ್ರುವಾಯು ಶೆಲ್‌ಗಳನ್ನು ಬಳಸಲಾಗಿದೆ ಎಂದು ಪಂಧೇರ್ ಆರೋಪಿಸಿದ್ದಾರೆ.

ಭದ್ರತಾ ಸಿಬ್ಬಂದಿ ರಬ್ಬರ್ ಗುಂಡುಗಳನ್ನು ಬಳಸಿದ್ದು, ಒಬ್ಬ ರೈತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ರೈತ ಮುಖಂಡ ಮಂಜಿತ್ ಸಿಂಗ್ ರೈ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಅಂಬಾಲಾ ಕಂಟೋನ್ಮೆಂಟ್) ರಜತ್ ಗುಲಿಯಾ ನಿರಾಕರಿಸಿದ್ದಾರೆ.

ರಾಷ್ಟ್ರ ರಾಜಧಾನಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ರೈತರು ನಡೆಸುತ್ತಿರುವ ಮೂರನೇ ಪ್ರಯತ್ನ ಇದಾಗಿದೆ. ಈ ಹಿಂದೆ ಡಿಸೆಂಬರ್ 6 ಮತ್ತು ಡಿಸೆಂಬರ್ 8 ರಂದು ಎರಡು ಪ್ರಯತ್ನಗಳನ್ನು ಮಾಡಿದ್ದರು ಆದರೆ ಅವರನ್ನು ಹರಿಯಾಣ ಪೊಲೀಸರು ತಡೆದಿದ್ದರು.

Farmers move away as security personnel fire teargas shells
ದೆಹಲಿ ಚಲೋ: ಶಂಭು ಗಡಿಯಲ್ಲಿ ಹರಿಯಾಣ ಪೊಲೀಸರಿಂದ ರೈತರ ಮೇಲೆ ಅಶ್ರುವಾಯು ಪ್ರಯೋಗ

ಈ ಹಿಂದೆಯೂ ದೆಹಲಿಗೆ ಸಾಗುವ ಪ್ರಯತ್ನವನ್ನು ಹರಿಯಾಣ ಪೊಲೀಸರು ತಡೆದ ನಂತರ ಫೆಬ್ರವರಿ 13 ರಿಂದಲೂ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ರೈತರು ಮೊಕ್ಕಾಂ ಹೂಡಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com