
ನವದೆಹಲಿ: ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಭಾಷಣ ಮಾಡುತ್ತಾ, ಬಿಜೆಪಿಯನ್ನು ಟೀಕಿಸಿರುವ ಭರದಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿದ್ದಾರೆ.
ಮಹಾಭಾರತ, ದ್ರೋಣಾಚಾರ್ಯ, ಏಕಲ್ಯ ಮುಂತಾದ ಉಲ್ಲೇಖಗಳನ್ನು ನೀಡುತ್ತಾ, ರಾಹುಲ್ ಗಾಂಧಿ ಮೋದಿ ಸರ್ಕಾರ ದೇಶದ ಯುವಕರ ಹೆಬ್ಬೆರಳು ಕತ್ತರಿಸುತ್ತಿದೆ. ಇದು ಮಹಾಭಾರತದಲ್ಲಿ ಗುರುದಕ್ಷಿಣೆ ಪಡೆಯಲು ದ್ರೋಣಾಚಾರ್ಯ ಏಕಲವ್ಯನಿಂದ ಹೆಬ್ಬೆರಳು ಕತ್ತರಿಸಿದಂತೆಯೇ ಆಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏಕಲವ್ಯನ ಬಗ್ಗೆ ಮಾತನಾಡುತ್ತಾ, ರಾಹುಲ್ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ. ಮುಂಜಾನೆ ಬಿಲ್ಲು ಬಾಣ ಹಿಡಿದು ಅಭ್ಯಾಸ ಮಾಡುವ ಮೂಲಕ ಏಕಲವ್ಯ ಎಂಬ ಬಾಲಕ ತಪಸ್ ಮಾಡುತ್ತಿದ್ದ. ಧನುಸ್ಸಿನಲ್ಲಿ (ಬಿಲ್ಲು) ತಪಸ್ಸಿದೆ. ಮನ್ರೇಗಾದಲ್ಲಿ ತಪಸ್ಸಿದೆ. ತಪಸ್ಸೆಂದರೆ, ಶರೀರದಲ್ಲಿ ಶಾಖ ಉತ್ಪತ್ತಿಸುವುದಾಗಿದೆ, ಅರ್ಥಮಾಡಿಕೊಳ್ಳಿ ತಪನ ಎಂದರೆ ಅದೇ ಅರ್ಥ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಮಾತಿಗೆ ಆಡಳಿತಪಕ್ಷದ ಸದಸ್ಯರು ನಕ್ಕಿದ್ದಾರೆ. ಬಿಜೆಪಿ ರಾಹುಲ್ ಗಾಂಧಿ ಮಾತಿಗೆ ವ್ಯಂಗ್ಯವಾಡಿದ್ದು, ಜಾರ್ಜ್ ಸೊರೊಸ್ ಅವರಿಂದ ಮಾತ್ರ ಇಂತಹ ಜ್ಞಾನ ಬರಲು ಸಾಧ್ಯ ಎಂದು ಸಂಬಿತ್ ಪಾತ್ರ ಟ್ವಿಟರ್ ನಲ್ಲಿ ಕಾಲೆಳೆದಿದ್ದಾರೆ.
Advertisement