ಸಂಭಾಲ್ ಮಸೀದಿ ಆವರಣದಲ್ಲಿ ಮತ್ತೆ ಬುಲ್ಡೋಜರ್ ಘರ್ಜನೆ: 1.25 ಕೋಟಿ ರೂ ಮೌಲ್ಯದ ವಿದ್ಯುತ್ ಕಳ್ಳತನ, 25 ಸಿಲಿಂಡರ್‌ ಪತ್ತೆ

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಮಾತನಾಡಿ, ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳು ಮತ್ತು ಅಂಗಡಿಗಳ ಹೊರಗಿನ ಚರಂಡಿಗಳನ್ನು ತೆರವುಗೊಳಿಸಲು ಗಮನಹರಿಸಲಾಗಿದೆ ಎಂದು ಹೇಳಿದ್ದಾರೆ.
mosque-Encroachment drive
ಮಸೀದಿ-ಬುಲ್ಡೋಜರ್ online desk
Updated on

ಸಂಭಾಲ್: ಸಮೀಕ್ಷೆ ನಡೆಸಲು ಕೋರ್ಟ್ ಆದೇಶದ ಬಳಿಕ ಹಿಂಸಾಚಾರ ಉಂಟಾಗಿದ್ದ, ಸಂಭಾಲ್ ನ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಮತ್ತೆ ಘರ್ಜಿಸಿದೆ.

ಜಿಲ್ಲಾಡಳಿತ ಮತ್ತೆ ಅಕ್ರಮ ಒತ್ತುವರಿ ತೆರವು, ಅಕ್ರಮ ವಿದ್ಯುತ್ ಸಂಪರ್ಕದ ವಿರುದ್ಧದ ಕಾರ್ಯಾಚರಣೆಯನ್ನು ಆರಂಭಿಸಿದೆ. ಅದರ ಪ್ರಯತ್ನದ ಭಾಗವಾಗಿ, ಆಡಳಿತ ಭಾನುವಾರ ಬೆಳಿಗ್ಗೆ ಪ್ರದೇಶದಿಂದ ಅತಿಕ್ರಮಣಗಳನ್ನು ತೆಗೆದುಹಾಕಲು ಪ್ರಾರಂಭಿಸಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಮಾತನಾಡಿ, ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳು ಮತ್ತು ಅಂಗಡಿಗಳ ಹೊರಗಿನ ಚರಂಡಿಗಳನ್ನು ತೆರವುಗೊಳಿಸಲು ಗಮನಹರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರದೇಶ ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಅವರ ನಿವಾಸಕ್ಕೆ ಸಮೀಪದಲ್ಲಿದೆ. ಸಾರ್ವಜನಿಕ ಸ್ಥಳಗಳನ್ನು ಮರುಸ್ಥಾಪಿಸಲು ಮತ್ತು ಒಳಚರಂಡಿ ವ್ಯವಸ್ಥೆಯ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆಯು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು ಎಂದು ಚಂದ್ರ ಹೇಳಿದ್ದಾರೆ.

ಈ ವೇಳೆ ಮನೆಯೊಂದರಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗಳ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಹಾಜಿ ರಬ್ಬನ್ ಅವರ ಮನೆಯಲ್ಲಿ ಇಂತಹ 25 ಸಿಲಿಂಡರ್‌ಗಳು ಪತ್ತೆಯಾಗಿವೆ ಎಂದು ಸರಬರಾಜು ನಿರೀಕ್ಷಕ ಯೋಗೇಶ್ ಶುಕ್ಲಾ ತಿಳಿಸಿದ್ದಾರೆ.

"ಸಿಲಿಂಡರ್‌ಗಳನ್ನು ಮದುವೆಗಾಗಿ ದಾಸ್ತಾನು ಇಡಲಾಗಿತ್ತು ಎಂದು ಕುಟುಂಬದವರು ಹೇಳಿಕೊಂಡಿದ್ದರೂ, ಅಗತ್ಯ ದಾಖಲೆಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗಲಿಲ್ಲ. ಸಿಲಿಂಡರ್‌ಗಳಲ್ಲಿ ಎರಡು ಭರ್ತಿ ಮಾಡಲಾಗಿತ್ತು ಮತ್ತು ಉಳಿದವು ಖಾಲಿಯಾಗಿವೆ, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಎಫ್‌ಐಆರ್ ದಾಖಲಿಸಲಾಗುವುದು" ಎಂದು ಶುಕ್ಲಾ ಹೇಳಿದ್ದಾರೆ.

ಇದೇ ವೇಳೆ ವಿದ್ಯುತ್ ಕಳ್ಳತನವನ್ನು ಗುರಿಯಾಗಿಸಿಕೊಂಡು ವಿದ್ಯುತ್ ಇಲಾಖೆ ಕೂಡ ಭಾರೀ ಕಾರ್ಯಾಚರಣೆ ನಡೆಸಿದೆ.

ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನವೀನ್ ಗೌತಮ್ ಮಾತನಾಡಿ, ದೀಪಾ ಸಾರಾಯಿಯಲ್ಲಿ ನಡೆದ ದಾಳಿಯ ವೇಳೆ ಅಧಿಕಾರಿಗಳು ನಾಲ್ಕು ಮಸೀದಿಗಳು ಮತ್ತು ಮದರಸಾಗಳಲ್ಲಿ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಪತ್ತೆಹಚ್ಚಿದ್ದಾರೆ. "ಅಂದಾಜು 1.25 ಕೋಟಿ ಮೌಲ್ಯದ ಒಟ್ಟು 130 ಕಿಲೋವ್ಯಾಟ್ ವಿದ್ಯುತ್ ಕಳ್ಳತನವಾಗಿದೆ. ಕಾರ್ಯಾಚರಣೆಯ ವೇಳೆ ಕಳ್ಳತನದಲ್ಲಿ ಭಾಗಿಯಾಗಿರುವ 49 ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗಿದೆ. ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಗೌತಮ್ ಹೇಳಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ಶನಿವಾರ ಜಿಲ್ಲಾಡಳಿತದಿಂದ ಪುನಾರಂಭಗೊಂಡ ಭಸ್ಮ ಶಂಕರ ದೇವಸ್ಥಾನದಲ್ಲಿ ನಿತ್ಯ ಪೂಜೆ ಪುನರಾರಂಭಗೊಂಡಿದೆ. ಆರಾಧಕರು ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಲು ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದ್ದಾರೆ ಎಂದು ಮಹಂತ್ ಆಚಾರ್ಯ ವಿನೋದ್ ಶುಕ್ಲಾ ಹೇಳಿದರು.

ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬ್ಯುಲರಿ ಸಿಬ್ಬಂದಿಯ ಉಪಸ್ಥಿತಿಯೊಂದಿಗೆ ದೇವಾಲಯವನ್ನು ಭದ್ರಪಡಿಸಲಾಗಿದೆ.

mosque-Encroachment drive
ಮಸೀದಿ, ಮಂದಿರಗಳ ಸಮೀಕ್ಷೆಗೆ ಆದೇಶ ನೀಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಆದೇಶ

ದೇವಾಲಯದ ಪುನರಾರಂಭಕ್ಕೆ ಸ್ಥಳೀಯ ನಿವಾಸಿ ಮೋಹಿತ್ ರಸ್ತೋಗಿ ಕೃತಜ್ಞತೆ ಸಲ್ಲಿಸಿದರು. ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರ ನಂತರ "ನಾನು ಈ ದೇವಾಲಯದ ಬಗ್ಗೆ ನನ್ನ ಅಜ್ಜನಿಂದ ಕೇಳಿದ್ದೇನೆ" ಎಂದು ಹೇಳಿದರು.

"ನಮ್ಮ ಪರಂಪರೆಯೊಂದಿಗೆ ಮರುಸಂಪರ್ಕಿಸಲು ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ" ಎಂದು ಅವರು ಹೇಳಿದರು.

ಈ ಕ್ರಮಗಳು ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಸುವ್ಯವಸ್ಥೆ ಪುನಃಸ್ಥಾಪಿಸಲು ಮತ್ತು ಪರಿಹರಿಸಲು ವ್ಯಾಪಕ ಉಪಕ್ರಮದ ಭಾಗವಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದರ್ ಪೆನ್ಸಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com