
ಶ್ರೀನಗರ: ಕೆಲವು ದಿನಗಳ ಹಿಂದೆ EVM ಬಗ್ಗೆ ಕಾಂಗ್ರೆಸ್ ಗೆ ಪಾಠ ಮಾಡಿದ್ದ ಜಮ್ಮು-ಕಾಶ್ಮೀರ ಸಿಎಂ, NC ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ ಪಕ್ಷದಿಂದ ವಿಪಕ್ಷಗಳ ಮೈತ್ರಿಕೂಟ INDI ಗೆ ಆಘಾತ ಎದುರಾಗಿದೆ.
ಇಂದು ಸಂಸತ್ ನಲ್ಲಿ ಮಂಡನೆಯಾದ ಒಂದು ದೇಶ, ಒಂದು ಚುನಾವಣೆ (One Nation, One Election) ಮಸೂದೆಯನ್ನು
ವಿಪಕ್ಷಗಳು ಒಟ್ಟಾಗಿ ವಿರೋಧಿಸಿದ್ದರೆ, ಜಮ್ಮು-ಕಾಶ್ಮೀರದ NC ಸಚಿವ ಬರಹಿಂಗವಾಗಿ ಒಂದು ದೇಶ, ಒಂದು ಚುನಾವಣೆಗೆ ಬೆಂಬಲ ಸೂಚಿಸಿದ್ದಾರೆ.
ಜಮ್ಮು-ಕಾಶ್ಮೀರದ ಕ್ರೀಡಾ ಸಚಿವರಾಗಿರುವ ಸತೀಶ್ ಶರ್ಮಾ, ಮಸೂದೆಯು ದೇಶದ ಹಣವನ್ನು ಉಳಿಸಿದರೆ ದೇಶದಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ'ಯನ್ನು ಪರಿಚಯಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
"ಮೊದಲು ನಾನು ನನ್ನ ಸಿಎಂ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇನೆ, ನಾನು ಮಂತ್ರಿ ಸ್ಥಾನದ ಹೊರತಾಗಿ ಅಭಿಪ್ರಾಯ ವ್ಯಕ್ತಪಡಿಸುವುದಾದರೆ, ಒಂದು ದೇಶ, ಒಂದು ಚುನಾವಣೆಯಲ್ಲಿ ಏನೂ ತಪ್ಪಿಲ್ಲ ಎಂದು ನಾನು ನಂಬುತ್ತೇನೆ, ದೇಶದ ಹಣ ಉಳಿಸಿದರೆ, ನಮ್ಮ ತೆರಿಗೆ ಹಣ ಉಳಿತಾಯವಾಗುತ್ತದೆ, ಅದು ಒಳ್ಳೆಯದೇ. ಆರಂಭದಲ್ಲಿ ನಾವು ಸ್ವಾತಂತ್ರ್ಯ ಗಳಿಸಿದ ಹೊಸತರಲ್ಲಿ ಒಂದೇ ದೇಶ, ಒಂದೇ ಚುನಾವಣೆಯಾಗಿಯೇ ಇತ್ತು. ನಾವು ತೆರಿಗೆದಾರರ ಹಣವನ್ನು ಉಳಿಸಬೇಕಾಗಿದೆ, ”ಎಂದು ಸತೀಶ್ ಶರ್ಮಾ ಹೇಳಿದ್ದಾರೆ.
Advertisement