One Nation One Election Bill: ಮತದಾನದ ವೇಳೆ ಬಿಜೆಪಿಯ 20ಕ್ಕೂ ಹೆಚ್ಚು ಸಂಸದರು ಗೈರು; ತನಿಖೆಗೆ ಪಕ್ಷ ಮುಂದು!

ಅಚ್ಚರಿ ಎಂದರೆ ವಿಪ್ ಹೊರತಾಗಿಯೂ ಆಡಳಿತಾರೂಢ ಬಿಜೆಪಿಯ 20 ಕ್ಕೂ ಹೆಚ್ಚು ಸಂಸದರು ಮತದಾನದ ವೇಳೆ ಗೈರು ಹಾಜರಾಗಿದ್ದರು.
One nation one Election- Parliament
ಒಂದು ದೇಶ ಒಂದು ಚುನಾವಣೆ- ಸಂಸತ್ online desk
Updated on

ನವದೆಹಲಿ: ಒಂದು ದೇಶ ಒಂದು ಚುನಾವಣೆ (One Nation One Election) ಮಸೂದೆಯನ್ನು ಡಿ.17 ರಂದು ಸಂಸತ್ ನಲ್ಲಿ ಮಂಡಿಸಲಾಗಿದ್ದು ವಿಸ್ತೃತ ಚರ್ಚೆಗೆಂದು ಜಂಟಿ ಸದನ ಸಮಿತಿಗೆ ಶಿಫಾರಸು ಮಾಡಲಾಗಿದೆ.

ಮಸೂದೆಯ ಪ್ರಸ್ತಾವನೆಗೆ ಮತದಾನ ನಡೆದಿದ್ದು ಈ ವೇಳೆ ಮಸೂದೆ ಪರವಾಗಿ 269 ಮತಗಳು ಬಂದಿದ್ದರೆ, 198 ಮತಗಳು ವಿರುದ್ಧವಾಗಿ ಚಲಾವಣೆಯಾಗಿವೆ.

ಅಚ್ಚರಿ ಎಂದರೆ ವಿಪ್ ಹೊರತಾಗಿಯೂ ಆಡಳಿತಾರೂಢ ಬಿಜೆಪಿಯ 20 ಕ್ಕೂ ಹೆಚ್ಚು ಸಂಸದರು ಮತದಾನದ ವೇಳೆ ಗೈರು ಹಾಜರಾಗಿದ್ದರು.

ಮಸೂದೆ ಮಂಡನೆ ವೇಳೆ ಸದನದಲ್ಲಿ ಹಾಜರಿರುವಂತೆ ಸಂಸದರಿಗೆ ವಿಪ್ ಜಾರಿ ಮಾಡಲಾಗಿತ್ತಾದರೂ, ಗೈರಾಗುವ ಮೂಲಕ ಸಂಸದರು ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆದಾಗ್ಯೂ, ಹಲವು ಸಂಸದರು ವೈಯಕ್ತಿಕ ಮತ್ತು ಕೆಲಸಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ ತಮ್ಮ ಗೈರುಹಾಜರಿಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

"ನಾವು ಖಂಡಿತವಾಗಿಯೂ ಅವರ ಅನುಪಸ್ಥಿತಿಯ ಹಿಂದಿನ ಕಾರಣಗಳನ್ನು ಪರಿಶೀಲಿಸುತ್ತಿದ್ದೇವೆ. ಕೆಲವರಿಗೆ ನಿಜವಾದ ಕಾರಣಗಳಿವೆ" ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ಕೇಂದ್ರ ಸಚಿವ ಸಿ ಆರ್ ಪಾಟೀಲ್ ಸೇರಿದಂತೆ ಕೆಲವು ಸಂಸದರು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಮಾರಂಭದಲ್ಲಿ ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ.

One nation one Election- Parliament
ONOE Bill: ಬಹುಮತವಿದ್ದರೂ ಮಸೂದೆ ಪರ 269 ಮತ; ಸೋತು ಗೆದ್ದ ವಿಪಕ್ಷಗಳು? JPC ಗೆ ಮಸೂದೆ ಕಳುಹಿಸಿದ ಹಿಂದಿನ ಮರ್ಮವೇನು?

ಬಿಜೆಪಿ ಮಿತ್ರಪಕ್ಷಗಳ ನಾಲ್ಕೈದು ಸಂಸದರು ಮತದಾನದ ವೇಳೆ ಹಾಜರಿರಲಿಲ್ಲ, ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು. ಮಂಗಳವಾರ 90 ನಿಮಿಷಗಳ ಕಾಲ ನಡೆದ ಚರ್ಚೆಯ ನಂತರ ಲೋಕಸಭೆಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕಾರ್ಯವಿಧಾನವನ್ನು ರೂಪಿಸುವ ಎರಡು ಮಸೂದೆಗಳನ್ನು ಮಂಡಿಸಲಾಯಿತು. ಸಂವಿಧಾನ (129 ನೇ ತಿದ್ದುಪಡಿ) ಮಸೂದೆಯನ್ನು ಮೇಘವಾಲ್ ಅವರು ಮತಗಳ ವಿಭಜನೆಯ ನಂತರ ಲೋಕಸಭೆಯಲ್ಲಿ ಮಂಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com