Narendra Modi: ಕಾಂಗ್ರೆಸ್ ನ ಕೊಳೆತ ಪರಿಸರ ವ್ಯವಸ್ಥೆಯ ಸುಳ್ಳುಗಳು ಅಂಬೇಡ್ಕರ್ ಗೆ ಮಾಡಿದ ಅವಮಾನ ಮುಚ್ಚಿಡಲಾಗದು!

ರಾಜ್ಯಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಮಿತ್ ಶಾ, ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಷಯಗಳಿಗೂ ಅಂಬೇಡ್ಕರ್ ಹೆಸರನ್ನು ತೆಗೆದುಕೊಳ್ಳುವುದು ಒಂದು ರೀತಿಯ ಫ್ಯಾಷನ್ ಆಗಿದೆ ಎಂದು ಹೇಳಿದ್ದರು.
Narendra Modi
ನರೇಂದ್ರ ಮೋದಿonline desk
Updated on

ನವದೆಹಲಿ: ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಮಿತ್ ಶಾ, ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಷಯಗಳಿಗೂ ಅಂಬೇಡ್ಕರ್ ಹೆಸರನ್ನು ತೆಗೆದುಕೊಳ್ಳುವುದು ಒಂದು ರೀತಿಯ ಫ್ಯಾಷನ್ ಆಗಿದೆ ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷಗಳು ಅಮಿತ್ ಶಾ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದವು.

ವಿಪಕ್ಷಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅಮಿತ್ ಶಾ ಅವರನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರನ್ನು ಅವಮಾನ ಮಾಡಿರುವ ಕರಾಳ ಇತಿಹಾಸವಿದೆ ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ಅವಮಾನದ ಕುರಿತು ಅಮಿತ್ ಶಾ ಸದನದಲ್ಲಿ ಸಾಕ್ಷ್ಯ ಸಹಿತವಾಗಿ ನಿರೂಪಿಸಿದ್ದಾರೆ. ಈ ವಾಸ್ತವಾಂಶವನ್ನು ಕಂಡು ಪ್ರತಿಪಕ್ಷ ದಿಗ್ಭ್ರಮೆಗೊಂಡಿದ್ದು, ಈಗ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಆದರೆ ಸತ್ಯ ಏನು ಎಂಬುದು ಜನರಿಗೆ ಗೊತ್ತಿದೆ ಎಂದು ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.

Narendra Modi
ಅಂಬೇಡ್ಕರ್ ರನ್ನು ಅವಮಾನಿಸಿದ ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಆಗ್ರಹ

ಅಂಬೇಡ್ಕರ್ ವಿಷಯಕ್ಕೆ ಬಂದರೆ, ನಮ್ಮ ಸರ್ಕಾರದ ಅವರೆಡೆಗೆ ಸಂಪೂರ್ಣ ಗೌರವ ಮತ್ತು ಶ್ರದ್ಧೆಯನ್ನು ಹೊಂದಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

"ಕಾಂಗ್ರೆಸ್ ಪಕ್ಷ ಮತ್ತು ಅದರ "ಕೊಳೆತ ಪರಿಸರ ವ್ಯವಸ್ಥೆ" ತಮ್ಮ "ದುರುದ್ದೇಶಪೂರಿತ ಸುಳ್ಳುಗಳ ಮೂಲಕ ತಮ್ಮ ಹಲವಾರು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಡಬಹುದು ಎಂದು ಭಾವಿಸಿದರೆ, ವಿಶೇಷವಾಗಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಿಂದ ಉಂಟಾದ ಅವಮಾನಗಳನ್ನು ಮರೆಮಾಚಬಹುದು ಎಂದು ಭಾವಿಸಿದ್ದರೆ, ಅದು ತಪ್ಪಾದ ಗ್ರಹಿಕೆ ಎಂದು ಮೋದಿ ಹೇಳಿದ್ದಾರೆ.

ನೆಹರು-ಗಾಂಧಿ ಕುಟುಂಬವನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ರಾಜವಂಶದ ಮಾದರಿಯ ನೇತೃತ್ವ ಹೊಂದಿರುವ ಒಂದು ಪಕ್ಷ ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಸಾಧ್ಯವಿರುವ ಎಲ್ಲಾ ತಂತ್ರಗಳಲ್ಲಿ ಹೇಗೆ ತೊಡಗಿದೆ ಎಂಬುದನ್ನು ಭಾರತದ ಜನರು ಮತ್ತೆ ಮತ್ತೆ ನೋಡಿದ್ದಾರೆ ಎಂದು ಮೋದಿ ತೀಕ್ಷ್ಣ ಟೀಕಾ ಪ್ರಹಾರ ನಡೆಸಿದ್ದಾರೆ.

ಅಂಬೇಡ್ಕರ್ ಅವರನ್ನು ಒಂದಲ್ಲ ಎರಡಲ್ಲ ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ವಿರುದ್ಧ ಪ್ರಚಾರ ಮಾಡಿ ಸೋಲನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದು, ಅವರಿಗೆ ಭಾರತ ರತ್ನ ನೀಡದಿರುವುದು ಮತ್ತು ಅವರ ಭಾವಚಿತ್ರಕ್ಕೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸ್ಥಾನ ನೀಡದಿರುವುದು ಕಾಂಗ್ರೆಸ್ ಪಾಪಗಳ ಪಟ್ಟಿಯಲ್ಲಿ ಸೇರಿದೆ. ಎಂದು ಪ್ರಧಾನಿ ಹೇಳಿದರು.

"ಕಾಂಗ್ರೆಸ್ ನವರು ಅವರು ಬಯಸಿದಂತೆ ಪ್ರಯತ್ನಿಸಬಹುದು ಆದರೆ ಎಸ್‌ಸಿ/ಎಸ್‌ಟಿ ಸಮುದಾಯಗಳ ವಿರುದ್ಧ ಕೆಟ್ಟ ಹತ್ಯಾಕಾಂಡಗಳು ಅವರ ಆಡಳಿತದಲ್ಲಿ ನಡೆದಿವೆ ಎಂಬುದನ್ನು ಅವರು ಅಲ್ಲಗಳೆಯಲು ಸಾಧ್ಯವಿಲ್ಲ, ಅವರು ವರ್ಷಗಳ ಕಾಲ ಅಧಿಕಾರದಲ್ಲಿ ಕುಳಿತು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಸಬಲೀಕರಣಗೊಳಿಸಲು ಏನನ್ನೂ ಮಾಡಲಿಲ್ಲ." ಎಂದು ಮೋದಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com