'ಇದನ್ನು ಒಪ್ಪಲಾಗದು': ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ- ಮೋಹನ್ ಭಾಗವತ್

ಹಿಂದೂ ಸೇವಾ ಮಹಾವತ್ ಕಾರ್ಯಕ್ರಮದ ಸಂದರ್ಭದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥರು ಇತ್ತೀಚಿನ ಮಂದಿರ-ಮಸೀದಿ ವಿವಾದಗಳನ್ನೂ ಪ್ರಸ್ತಾಪಿಸಿದರು.
Yogi Adityanath-Mohan Bhagwat
ಯೋಗಿ ಆದಿತ್ಯನಾಥ-ಮೋಹನ್ ಭಾಗವತ್
Updated on

ನವದೆಹಲಿ: ಇತ್ತೀಚಿನ ದಿನಗಳಲ್ಲಿ, ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವಂತೆ ಅತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹತ್ವದ ಹೇಳಿಕೆ ನೀಡಿದ್ದು ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಈ ಹೊಸ ವಿವಾದಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ವಾಸ್ತವವಾಗಿ, ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಂತರ್ಗತ ಸಮಾಜವನ್ನು ಪ್ರತಿಪಾದಿಸಿದರು. ದೇಶ ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದರು. ರಾಮಕೃಷ್ಣ ಮಿಷನ್ ನಲ್ಲಿ ಕ್ರಿಸ್ ಮಸ್ ಆಚರಿಸಲಾಗುತ್ತದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥರು ಹೇಳಿದ್ದಾರೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನು ಮಾಡಲು ಸಾಧ್ಯ ಎಂದರು.

ಹಿಂದೂ ಸೇವಾ ಮಹಾವತ್ ಕಾರ್ಯಕ್ರಮದ ಸಂದರ್ಭದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥರು ಇತ್ತೀಚಿನ ಮಂದಿರ-ಮಸೀದಿ ವಿವಾದಗಳನ್ನೂ ಪ್ರಸ್ತಾಪಿಸಿದರು. ರಾಮ ಮಂದಿರ ನಿರ್ಮಾಣದ ನಂತರ ಕೆಲವರು ಹೊಸ ಜಾಗಗಳಲ್ಲಿ ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ನಾಯಕರಾಗಬಹುದು ಎಂದು ಭಾವಿಸುತ್ತಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಉತ್ತರ ಪ್ರದೇಶದ ಸಂಭಾಲ್‌ನ ಶಾಹಿ ಜಾಮಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೀರ್ ಷರೀಫ್‌ನಂತಹ ಧಾರ್ಮಿಕ ಸ್ಥಳಗಳ ಮೂಲದ ಬಗ್ಗೆ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ.

ಭಾರತೀಯ ಸಮಾಜದಲ್ಲಿನ ವೈವಿಧ್ಯತೆಯ ಬಗ್ಗೆ ಮಾತನಾಡಿದ ಅವರು, ನಾವು ಬಹಳ ಹಿಂದಿನಿಂದಲೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಈ ಸದ್ಭಾವನೆಯನ್ನು ನಾವು ಜಗತ್ತಿಗೆ ಒದಗಿಸಬೇಕಾದರೆ, ನಾವು ಅದನ್ನು ಮಾದರಿಯಾಗಿಟ್ಟುಕೊಳ್ಳಬೇಕು. ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಏಕೆಂದರೆ ಅದು ಎಲ್ಲಾ ಹಿಂದೂಗಳ ನಂಬಿಕೆಯ ವಿಷಯವಾಗಿತ್ತು. ಯಾವುದೇ ನಿರ್ದಿಷ್ಟ ವಿವಾದವನ್ನು ಉಲ್ಲೇಖಿಸದೆ, ಪ್ರತಿದಿನ ಹೊಸ ಪ್ರಕರಣದ ವಿವಾದಗಳು ಹುಟ್ಟಿಕೊಳ್ಳುತ್ತಿದೆ. ಅದನ್ನು ಬಿಟ್ಟು ನಾವು ಒಟ್ಟಿಗೆ ಬಾಳಬಹುದು ಎಂಬುದನ್ನು ಭಾರತ ತೋರಿಸಬೇಕಾಗಿದೆ ಎಂದರು.

Yogi Adityanath-Mohan Bhagwat
ಸಿಎಂ ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ: ಉತ್ತರ ಪ್ರದೇಶ ವ್ಯಕ್ತಿಯ ಬಂಧನ

ಹೊರಗಿನಿಂದ ಬಂದ ಕೆಲವು ಗುಂಪುಗಳು ತಮ್ಮೊಂದಿಗೆ ಮತಾಂಧತೆಯನ್ನು ತಂದಿವೆ. ಅವರು ತಮ್ಮ ಹಳೆಯ ಆಳ್ವಿಕೆಯನ್ನು ಹಿಂದಿರುಗಿಸಬೇಕೆಂದು ಬಯಸುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು. ಆದರೆ ಈಗ ಸಂವಿಧಾನದ ಪ್ರಕಾರವೇ ದೇಶ ನಡೆಯುತ್ತಿದೆ. ಈ ವ್ಯವಸ್ಥೆಯಲ್ಲಿ, ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ, ಅವರು ಸರ್ಕಾರವನ್ನು ನಡೆಸುತ್ತಾರೆ. ಪ್ರಾಬಲ್ಯದ ದಿನಗಳು ಕಳೆದುಹೋಗಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com