ಹೆದರಿದ ಮೋದಿ ಸರ್ಕಾರದಿಂದ ಹತಾಶೆಯ ಕ್ರಮ: ರಾಹುಲ್ ವಿರುದ್ಧ ಎಫ್‌ಐಆರ್‌ಗೆ ಪ್ರಿಯಾಂಕಾ ವಾಗ್ದಾಳಿ

ಅದಾನಿ ಪ್ರಕರಣದ ಬಗ್ಗೆ ಚರ್ಚಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರಿಗೆ 'ದಾಳಿ ಮತ್ತು ಪ್ರಚೋದನೆ' ಸಂಬಂಧ ದೂರು ನೀಡಿರುವುದನ್ನು ಖಂಡಿಸಿದರು.
Priyanka Vadra
ಪ್ರಿಯಾಂಕಾ ವಾದ್ರಾPTI
Updated on

ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ವಿರುದ್ಧದ ಹೇಳಿಕೆಗೆ ರಾಜಕೀಯ ಕೋಲಾಹಲ ಎದ್ದಿದೆ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳೆರಡೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಇನ್ನು ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಮತ್ತೊಮ್ಮೆ ಖಂಡಿಸಿದ್ದಾರೆ. ಭಾರತದಲ್ಲಿ ಇಂತಹ ಅವಮಾನವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಅಂಬೇಡ್ಕರ್ ಅವರ ನಿಜವಾದ ಭಾವನೆಗಳು ಮುನ್ನೆಲೆಗೆ ಬಂದಿವೆ ಎಂದು ನನಗೆ ತಿಳಿದಿದೆ. ಹಾಗಾಗಿ, ನಾವು ಈ ವಿಷಯವನ್ನು ಪ್ರಸ್ತಾಪಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ಪ್ರತಿಪಕ್ಷಗಳಿಗೆ ಹೆದರುತ್ತಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಒಳಗೊಂಡಿದೆ. ಸಂವಿಧಾನ ನೀಡುವ ಮೂಲಕ ಅಂಬೇಡ್ಕರ್ ಅವರು ಈ ದೇಶದ ಜನರಿಗೆ ಪ್ರತಿಭಟಿಸುವ ಹಕ್ಕು ನೀಡಿದ್ದಾರೆ ಎಂದರು.

ಅದಾನಿ ಪ್ರಕರಣದ ಬಗ್ಗೆ ಚರ್ಚಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರಿಗೆ 'ದಾಳಿ ಮತ್ತು ಪ್ರಚೋದನೆ' ಸಂಬಂಧ ದೂರು ನೀಡಿರುವುದನ್ನು ಖಂಡಿಸಿದ ಅವರು ಕೇಂದ್ರ ಸರ್ಕಾರವು 'ಸುಳ್ಳು' ಮತ್ತು 'ಆಧಾರರಹಿತ' ಎಫ್‌ಐಆರ್‌ಗಳನ್ನು ಹತಾಶೆಯಿಂದ ದಾಖಲಿಸಿದೆ ಎಂದು ಹೇಳಿದರು. ಇದು ಸರ್ಕಾರದ ಹತಾಶೆ. ಸುಳ್ಳು ಎಫ್‌ಐಆರ್ ದಾಖಲಿಸುವಷ್ಟು ಹತಾಶರಾಗಿದ್ದಾರೆ. ರಾಹುಲ್ ಅವರು ಯಾರನ್ನೂ ತಳ್ಳಲು ಸಾಧ್ಯವಿಲ್ಲ. ನಾನು ಅವನ ಸಹೋದರಿ, ನಾನು ಅವನನ್ನು ಬಲ್ಲೆ. ಅವರು ಅದನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ ದೇಶಕ್ಕೂ ಇದು ಗೊತ್ತಿದೆ. ಅವರು ಆಧಾರರಹಿತ ಎಫ್‌ಐಆರ್‌ಗಳನ್ನು ದಾಖಲಿಸುತ್ತಿರುವುದು ಎಷ್ಟು ಹತಾಶರಾಗಿದ್ದಾರೆ ಎಂಬುದನ್ನು ದೇಶವೇ ನೋಡುತ್ತಿದೆ ಎಂದರು.

Priyanka Vadra
ಸಂಸತ್ ಮುಂದೆ ಹೈಡ್ರಾಮಾ: ರಾಹುಲ್ ಗಾಂಧಿ, ಇತರ ಸಂಸದರ ವಿರುದ್ಧ FIR ದಾಖಲು

ಗುರುವಾರ ಸಂಸತ್ತಿನ ಸಂಕೀರ್ಣದಲ್ಲಿ ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್ ಸಂಸದರು ನಡುವೆ ಮಾರಾಮಾರಿ ನಡೆದಿದ್ದು ಇದರಲ್ಲಿ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡರು. ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದರಿಂದ ತಾವು ಗಾಯಗೊಂಡಿದ್ದಾಗಿ ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com