
ರಣಥಂಬೋರ್: ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ವರ್ಷದ ಗಂಡು ಹುಲಿಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಎರಡು ಬಿಗ್ ಕ್ಯಾಟ್ ಗಳ ನಡುವೆ ನಡೆದ ಕಾಳಗದಲ್ಲಿ ಹುಲಿ ಸಾವನ್ನಪ್ಪಿರಬಹುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಆರ್‌ಟಿಆರ್ ಕ್ಷೇತ್ರ ನಿರ್ದೇಶಕ ಅನೂಪ್ ಕೆಆರ್ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಆಮಘಾಟಿ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಹುಲಿಯ ಮೃತದೇಹ ಪತ್ತೆ ಮಾಡಿದ್ದು, ಕುತ್ತಿಗೆ, ಕಾಲು ಮತ್ತು ತಲೆಯ ಮೇಲೆ ಗಾಯದ ಗುರುತುಗಳಿವೆ.
"ಕ್ಯಾಮೆರಾ ಟ್ರ್ಯಾಪ್‌ಗಳು ಒಂದೇ ಪ್ರದೇಶದಲ್ಲಿ ಎರಡು ಹುಲಿಗಳ ಚಲನವಲನವನ್ನು ತೋರಿಸಿದೆ. ಆದ್ದರಿಂದ ಹುಲಿಗಳ ನಡುವಿನ ಕಾದಾಟದಲ್ಲಿ ಹುಲಿ ಸತ್ತಿದೆ ಎಂದು ನಂಬಲಾಗಿದೆ" ಎಂದು ಅನೂಪ್ ಹೇಳಿದ್ದಾರೆ.
Advertisement