MahaKumbh Mela 2025: ಪ್ರಯಾಗ್ ರಾಜ್ ಸಜ್ಜು, 40 ಕೋಟಿಗೂ ಅಧಿಕ ಭಕ್ತಾದಿಗಳಿಂದ ಪುಣ್ಯ ಸ್ನಾನ; US, ಕೆನಡಾ ಒಟ್ಟು ಜನಸಂಖ್ಯೆಗಿಂತಲೂ ಇದು ಹೆಚ್ಚು!

ಪ್ರಯಾಗ್ ರಾಜ್ ನ ನದಿ ದಡದಲ್ಲಿ ತಾತ್ಕಾಲಿಕ ನಗರವೊಂದು ನಿರ್ಮಾಣಗೊಂಡಿದ್ದು, ಕುಂಭಮೇಳ ಸಂದರ್ಶಿಸಲು ಆಗಮಿಸುವ ಸುಮಾರು 40 ಕೋಟಿಗೂ ಅಧಿಕ ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆದಿದೆ. ಇತಿಹಾಸದಲ್ಲೇ ಇದೊಂದು ಭವ್ಯವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
Mahakumbh Mela 2025
ಮಹಾಕುಂಭ ಮೇಳ 2025online desk
Updated on

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗುವ ಕ್ಷೇತ್ರ ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಸಜ್ಜುಗೊಂಡಿದೆ.

ಪ್ರಯಾಗ್ ರಾಜ್ ನ ನದಿ ದಡದಲ್ಲಿ ತಾತ್ಕಾಲಿಕ ನಗರವೊಂದು ನಿರ್ಮಾಣಗೊಂಡಿದ್ದು, ಕುಂಭಮೇಳ ಸಂದರ್ಶಿಸಲು ಆಗಮಿಸುವ ಸುಮಾರು 40 ಕೋಟಿಗೂ ಅಧಿಕ ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆದಿದೆ. ಇತಿಹಾಸದಲ್ಲೇ ಇದೊಂದು ಭವ್ಯವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

40 ಕೋಟಿಗೂ ಅಧಿಕ ಮಂದಿ 6 ವಾರಗಳ ಕಾಲ ನಡೆಯಲಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಇದು ಅಮೇರಿಕಾ, ಕೆನಡಾದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆ ಎಂಬುದು ಗಮನಾರ್ಹವಾಗಿದೆ. ಪವಿತ್ರ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಧಾರ್ಮಿಕ ಶ್ರದ್ಧೆ ಮತ್ತು ಪುಣ್ಯ ಸ್ನಾನಗಳಿರುವ ಸಹಸ್ರಮಾನಗಳ ಹಿಂದಿನ ಆಚರಣೆಯನ್ನು ನಡೆಸಲಾಗುತ್ತದೆ.

ಜನವರಿ 13 ರಿಂದ ಫೆಬ್ರವರಿ 26 ವರೆಗೆ ಮಹಾಕುಂಭ ಮೇಳ ನಡೆಯಲಿದೆ. ಪ್ರಯಾಗ್ ರಾಜ್ ನ ನದಿಯ ದಡದಲ್ಲಿ 4,000 ಹೆಕ್ಟೇರ್ ಪ್ರದೇಶದಲ್ಲಿ (15 ಸ್ಕ್ವೇರ್ ಮೈಲಿಗಳು) ಮಿನಿ ನಗರವೇ ತಲೆ ಎತ್ತಿದ್ದು ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ಇಲ್ಲಿ ಮೂಲಸೌಕರ್ಯ ಕಲ್ಪಿಸಲು ವಿವಿಧ ಕಾಮಗಾರಿಗಳಲ್ಲಿ ತೊಡಗಿರುವ ಬಾಬು ಚಂದ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ನಾನು ಉದಾತ್ತ ಕಾರಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ನಾನೂ ಸಹ ಇಂತಹ ಪವಿತ್ರ ಕಾರ್ಯಕ್ರಮಕ್ಕಾಗಿ ಕೊಡುಗೆ ನೀಡುತ್ತಿದ್ದೇನೆ ಎಂಬ ಭಾವ ನನ್ನಲ್ಲಿದೆ, ನಾನು ಮಾಡುತ್ತಿರುವುದು ಪುಣ್ಯಕಾರ್ಯದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

"ಸುಮಾರು 350 ರಿಂದ 400 ಮಿಲಿಯನ್ ಭಕ್ತರು ಮೇಳಕ್ಕೆ ಭೇಟಿ ನೀಡಲಿದ್ದಾರೆ, ಆದ್ದರಿಂದ ನೀವು ಸಿದ್ಧತೆಗಳ ಪ್ರಮಾಣವನ್ನು ಊಹಿಸಬಹುದು" ಎಂದು ಉತ್ಸವದ ವಕ್ತಾರ ವಿವೇಕ್ ಚತುರ್ವೇದಿ ಹೇಳಿದರು. ಕುಂಭಕ್ಕೆ ತಯಾರಿ ಮಾಡುವುದು ಹೊಸ ದೇಶವನ್ನು ಸ್ಥಾಪಿಸಿದಂತೆ, ರಸ್ತೆಗಳು, ಬೆಳಕು, ವಸತಿ ಮತ್ತು ಒಳಚರಂಡಿ ಅಗತ್ಯವಿರುತ್ತದೆ.

Mahakumbh Mela 2025
ಮಹಾ ಕುಂಭಮೇಳಕ್ಕೆ BJP ಸಿದ್ಧತೆ ಬಗ್ಗೆ ಅಖಿಲೇಶ್ ಅಸಮಾಧಾನ: ಸರ್ಕಾರಕ್ಕೆ ಸಹಾಯದ ಆಫರ್ ನೀಡಿದ SP ಮುಖಂಡ!

ಕುಂಭಮೇಳದ ಅಘಾಧತೆ ಮತ್ತು ಯಾರಿಗೂ ಯಾವುದೇ ಆಮಂತ್ರಣಗಳನ್ನು ಕಳುಹಿಸದೇ ಇದ್ದರೂ ಈ ಪ್ರಮಾಣದಲ್ಲಿ ಜನ ಸೇರುತ್ತಾರೆ ಎಂಬುದು ಈ ಕಾರ್ಯಕ್ರಮವನ್ನು ಅನನ್ಯವಾಗಿಸುವ ಅಂಶವಾಗಿದೆ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಬರುತ್ತಾರೆ, ಶುದ್ಧ ನಂಬಿಕೆಯಿಂದ ನಡೆಸಲ್ಪಡುತ್ತಾರೆ" ಎಂದು ಚತುರ್ವೇದಿ ತಿಳಿಸಿದ್ದಾರೆ.

"ಜಗತ್ತಿನಲ್ಲಿ ಎಲ್ಲಿಯೂ ನೀವು ಈ ಗಾತ್ರದ ಕೂಟವನ್ನು ನೋಡುವುದಿಲ್ಲ, ಅದರ ಹತ್ತನೇ ಒಂದು ಭಾಗವನ್ನೂ ಬೇರೆಡೆ ನೋಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾದ ಮೆಕ್ಕಾಗೆ ವಾರ್ಷಿಕ ಹಜ್ ಯಾತ್ರೆಯಲ್ಲಿ ಸುಮಾರು 1.8 ಮಿಲಿಯನ್ ಮುಸ್ಲಿಮರು ಭಾಗವಹಿಸುತ್ತಾರೆ. ಸುಮಾರು 150,000 ಶೌಚಾಲಯಗಳನ್ನು ನಿರ್ಮಿಸಲಾಗಿದೆ, 68,000 ಎಲ್ಇಡಿ ಲೈಟಿಂಗ್ ಕಂಬಗಳನ್ನು ನಿರ್ಮಿಸಲಾಗಿದೆ ಮತ್ತು ಸಮುದಾಯ ಅಡುಗೆ ಮನೆಗಳು ಒಂದೇ ಸಮಯದಲ್ಲಿ 50,000 ಜನರಿಗೆ ಆಹಾರವನ್ನು ನೀಡಬಹುದು.

ಧಾರ್ಮಿಕ ಸಿದ್ಧತೆಗಳ ಜೊತೆಗೆ, ಪ್ರಯಾಗ್‌ರಾಜ್ ಪ್ರಮುಖ ಮೂಲಸೌಕರ್ಯ ಕೂಲಂಕುಷ ಪರೀಕ್ಷೆಗೆ ಒಳಗಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೃಹತ್ ಪೋಸ್ಟರ್‌ಗಳು ನಗರದಲ್ಲಿ ರಾರಾಜಿಸುತ್ತಿವೆ. ಇಬ್ಬರೂ ರಾಜಕೀಯ ಮತ್ತು ಧರ್ಮ ಆಳವಾಗಿ ಹೆಣೆದುಕೊಂಡಿರುವ ಆಡಳಿತಾರೂಢ ಹಿಂದೂ-ರಾಷ್ಟ್ರೀಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com