ಮಾಲಿಕರು ಟನ್ ಗಟ್ಟಲೆ ಹಣ ಮಾಡ್ತೀವಿ, ಬೇಕಾದರೆ 24 ಗಂಟೆಯೂ ಕೆಲಸ ಮಾಡ್ತೀವಿ, ಸಾಮಾನ್ಯ ಉದ್ಯೋಗಿಯ ಕಥೆ ಏನು?: 70 ಗಂಟೆ ಕೆಲಸದ ಬಗ್ಗೆ ಉದ್ಯಮಿ Namita Thapar

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಮಿತಾ ಥಾಪರ್, ವಾರಕ್ಕೆ 70 ಗಂಟೆಗಳ ಕಾಲ ಓರ್ವ ಉದ್ಯೋಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಆತನ ಮೇಲೆ ಅತಿ ಹೆಚ್ಚು ಒತ್ತಡ ಹೇರಿದಂತಾಗುತ್ತದೆ ಎಂದು ಹೇಳಿದ್ದಾರೆ.
Namita Thapar- Narayana Murthy
ನಮಿತಾ ಥಾಪರ್- ಇನ್ಫೋಸಿಸ್ ನಾರಾಯಣ ಮೂರ್ತಿ online desk
Updated on

ಮುಂಬೈ: ಭಾರತದ ಕೆಲಸದ ಸಂಸ್ಕೃತಿ ಬಗ್ಗೆ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ನೀಡಿರುವ ಹೇಳಿಕೆ, ಸಮರ್ಥನೆಗಳು ಈ ವಿಷಯದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ, ದೇಶದ ಯುವಜನತೆ ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವುದರೆಡೆಗೆ, ಜೊತೆಗೆ ತಾವೂ ಬಡತನದಿಂದ ಹೊರಬರಲು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು.

ಈಗ ಈ ಬಗ್ಗೆ ಹಲವು ಉದ್ಯಮಿಗಳು ಮಾತನಾಡತೊಡಗಿದ್ದಾರೆ. ಈ ಪೈಕಿ Shaadi.com ನ ಸಿಇಒ ಅನುಪಮ್ ಮಿತ್ತಲ್, ಹಾಗೂ ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಮಿತಾ ಥಾಪರ್ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಗಮನಾರ್ಹವಾಗಿದೆ.

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಮಿತಾ ಥಾಪರ್, ವಾರಕ್ಕೆ 70 ಗಂಟೆಗಳ ಕಾಲ ಓರ್ವ ಉದ್ಯೋಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಆತನ ಮೇಲೆ ಅತಿ ಹೆಚ್ಚು ಒತ್ತಡ ಹೇರಿದಂತಾಗುತ್ತದೆ ಎಂದು ಹೇಳಿದ್ದಾರೆ.

ಸಂಸ್ಥೆಯ ಸ್ಥಾಪಕರಿಗೂ ಉದ್ಯೋಗಿಗಳಿಗೂ ವಾಸ್ತವಗಳು ಗಮನಾರ್ಹವಾಗಿ ಬೇರೆಯೇ ಇರುತ್ತವೆ. ಇಬ್ಬರಿಂದಲೂ ಒಂದೇ ರೀತಿಯ ನಿರೀಕ್ಷೆ ಇಟ್ಟುಕೊಳ್ಳುವುದು ಅಸಮಂಜಸ ಎಂಬುದು ನಮಿತಾ ಥಾಪರ್ ಹೇಳಿಕೆ.

ಕಂಪನಿಗಳ ಸ್ಥಾಪಕರು ಹಾಗೂ ಅದರಲ್ಲಿ ಹೆಚ್ಚು ಪಾಲನ್ನು ಹೊಂದಿರುವವರು, ಅವರ ಗಮನಾರ್ಹ ಆರ್ಥಿಕ ಹೂಡಿಕೆಗಳ ಮೌಲ್ಯಗಳ ಕಾರಣದಿಂದಾಗಿ, ಹೆಚ್ಚಿನ ಅವಧಿ ಕೆಲಸ ಮಾಡಲು ಬಯಸುತ್ತಾರೆ. ಆದರೆ ಇದೇ ಮಾನದಂಡಗಳನ್ನು ಓರ್ವ ಸಾಮಾನ್ಯ ಉದ್ಯೋಗಿಯ ಮೇಲೆ ಹೇರುವುದು ತಪ್ಪಾಗುತ್ತದೆ.

"ಕೋಟ್ಯಂತರ ರೂಪಾಯಿ ಗಳಿಸುವ ನನ್ನಂತಹ ಸಂಸ್ಥೆಯ ಸ್ಥಾಪಕರು, ನಮಗೆ ಬೇಕಾದಲ್ಲಿ, ದಿನದ 24 ಗಂಟೆಯೂ ಕೆಲಸ ಮಾಡಬಹುದಾಗಿದೆ. ಆದರೆ ಓರ್ವ ಸಾಮಾನ್ಯ ವ್ಯಕ್ತಿಗೆ ಸಮಂಜಸವಾದ ಕೆಲಸದ ಸಮಯದ ಮಿತಿ ಇರಬೇಕು" ಎಂಬುದು ನಮಿತಾ ಥಾಪರ್ ಅಭಿಪ್ರಾಯ.

Namita Thapar- Narayana Murthy
Narayana Murthy: 'ಅಸಂಬದ್ಧತೆಯನ್ನು ಬರೆದುಕೊಂಡು ಬಡವರಾಗಿ ಪ್ರಪಂಚದಿಂದ ದೂರವಿರುವುದು ತುಂಬಾ ಸುಲಭ'; ವಾರಕ್ಕೆ 70 ಗಂಟೆ ದುಡಿಮೆ ಬಗ್ಗೆ ಮತ್ತೆ ಹೇಳಿಕೆ

ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ನಮಿತಾ ಥಾಪರ್ ತಮ್ಮದೇ ಉದಾಹರಣೆ ನೀಡಿದ್ದಾರೆ. ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ನ ಸಾರ್ವಜನಿಕ ಷೇರು ಬಿಡುಗಡೆ ಸಮಯದಲ್ಲಿ ಥಾಪರ್ ತನ್ನ ಅನುಭವವನ್ನು ಉಲ್ಲೇಖಿಸಿದ್ದಾರೆ, ಇದು $3 ಬಿಲಿಯನ್ ಮೌಲ್ಯದ್ದಾಗಿದ್ದು, ಅವರ ಕುಟುಂಬವು ಕಂಪನಿಯ 80% ಅನ್ನು ಹೊಂದಿದೆ. "ನಿಸ್ಸಂಶಯವಾಗಿ, ನಾವು ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡಬಹುದು, ಮತ್ತು ನಾವು ಆ ರೀತಿ ಮಾಡಿರುವ ಉದಾಹರಣೆಗಳೂ ಇವೆ. ಆದರೆ ಉದ್ಯೋಗಿಗಳು, ನನ್ನ ಉದಾಹರಣೆಗೆ ನನ್ನ ಅಕೌಂಟೆಂಟ್‌ ಅದೇ ರೀತಿಯ ಆರ್ಥಿಕ ಏರಿಕೆಯನ್ನು (ಆರ್ಥಿಕ ಲಾಭ) ಹಂಚಿಕೊಳ್ಳುವುದಿಲ್ಲ ಎಂದು ನಮಿತಾ ಥಾಪರ್ ಹೇಳಿದ್ದಾರೆ.

ಅತಿಯಾದ ಕೆಲಸದ ಸಮಯ ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು ಎಂದು ಥಾಪರ್ ಒತ್ತಿ ಹೇಳಿದ್ದಾರೆ. "ಯಾರಾದರೂ ಅಂತಹ ದೀರ್ಘ ಗಂಟೆಗಳ ಕೆಲಸ ಮಾಡುತ್ತಿದ್ದರೆ, ಅವರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ" ಎಂದು ಅವರು ಎಚ್ಚರಿಸಿದರು, ಸರಾಸರಿ ಕೆಲಸಗಾರರಿಗೆ ಹೆಚ್ಚು ಸಮತೋಲಿತ ಕೆಲಸದ ವೇಳಾಪಟ್ಟಿಯ ಅಗತ್ಯದೆಡೆಗೆ ನಮಿತಾ ಥಾಪರ್ ಪ್ರಬಲ ವಾದ ಮಂಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com