ದಿವಾಳಿಯ ದವಡೆಗೆ ಸಿಲುಕಿತ್ತು ಭಾರತ; 'LPG' ಮೂಲಕ ಆರ್ಥಿಕತೆಯನ್ನು ಹಳಿಗೆ ಮರಳಿಸಿದ್ದರು Dr. Manmohan singh: ಅವರ ಪ್ರಮುಖ ಯೋಜನೆಗಳಿವು...

ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
Former PM Manmohan singh- Former PM PV Narasimha rao
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್- ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್online desk
Updated on

ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (92) ಡಿ.26 ರಂದು ಇಹಲೋಕ ತ್ಯಜಿಸಿದ್ದಾರೆ.ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಡಿ.26 ರಂದು ರಾತ್ರಿ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು.

ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

ಮನಮೋಹನ್ ಸಿಂಗ್ ಅವರ ನಿಧನಕ್ಕೆ ಗಣ್ಯರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದು, ಅವರ ಕೊಡುಗೆಗಳನ್ನು ಸ್ಮರಿಸುತ್ತಿದ್ದಾರೆ.

1991 ರ ಅವಧಿಯಲ್ಲಿ ಭಾರತ ದಿವಾಳಿಯ ದವಡೆಗೆ ಸಿಲುಕಿದ್ದಾಗ ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಮನಮೋಹನ್ ಸಿಂಗ್ ಅವರನ್ನು ವಿತ್ತ ಸಚಿವರನ್ನಾಗಿ ನೇಮಿಸಿದ್ದರು. ಇದು ದೇಶದ ದಿಕ್ಕನ್ನೇ ಬದಲಿಸಿತ್ತು.

ಅಂದಿನ ಭಾರತದ ಪರಿಸ್ಥಿತಿ ಹೇಗಿತ್ತೆಂದರೆ...

  • 15 ದಿನಗಳ ಆಮದಿಗಾಗುವಷ್ಟು ಮಾತ್ರವೇ ಇತ್ತು ಭಾರತದ ಫಾರೆಕ್ಸ್ ರಿಸರ್ವ್ಸ್​ ಮೊತ್ತ

  • ಜಿಡಿಪಿಯ ಶೇ. 8.4ರಷ್ಟು ವಿತ್ತೀಯ ಕೊರತೆ! ಸರ್ಕಾರ ಆಡಳಿತ ನಿರ್ವಹಣೆಗೆ ಹೆಚ್ಚು ಸಾಲ ಮಾಡುವುದು ಅನಿವಾರ್ಯವಾಗಿತ್ತು.

  • ಶೇ. 16.7ಕ್ಕೆ ಏರಿದ್ದ ಹಣದುಬ್ಬರ!

  • ತೈಲ ಬೆಲೆ ಹೆಚ್ಚಳದ ಬರೆ!

  • ಐಎಂಎಫ್ ನಂತಹ ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಭಾರತಕ್ಕೆ ಒತ್ತಡ.

ಉದಾರೀಕರಣ

ಉದ್ಯಮ ವಲಯಕ್ಕೆ ತಲೆನೋವಾಗಿದ್ದ ಲೈಸೆನ್ಸ್ ರಾಜ್ ನ್ನು ಕೊನೆಗೊಳಿಸಿದ್ದ ಕೀರ್ತಿಯೂ ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ರಾಸಾಯನಿಕ ಇತ್ಯಾದಿ ಹಾನಿಕಾರಕ ಎನಿಸುವ ಉದ್ಯಮಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಉದ್ದಿಮೆಯನ್ನೂ ಯಾವ ಲೈಸೆನ್ಸ್ ಇಲ್ಲದೆಯೇ ಸ್ಥಾಪಿಸುವ ಅವಕಾಶವನ್ನು ಸಿಂಗ್ ವಿತ್ತಸಚಿವರಾಗಿದ್ದಾಗ ನೀಡಿದ್ದರು. ಖಾಸಗಿ ಬ್ಯಾಂಕುಗಳು ತಾವೇ ಸ್ವಂತವಾಗಿ ಬಡ್ಡಿದರ ನಿಗದಿ ಮಾಡುವ ಸ್ವಾತಂತ್ರ್ಯ ಪಡೆದವು.

ಖಾಸಗೀಕರಣ ನೀತಿ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಲು ಅನುಮತಿಸಲಾಯಿತು.

ಜಾಗತೀಕರಣ ನೀತಿ: ಆಮದು ಸುಂಕ ದರಗಳನ್ನು ಇಳಿಸಲಾಯಿತು. ಆಮದು ನಿರ್ಬಂಧ ಪಟ್ಟಿಯಿಂದ ಎಲ್ಲಾ ಸರಕುಗಳನ್ನು ಮುಕ್ತಗೊಳಿಸಲಾಯಿತು. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿದೇಶೀ ಹೂಡಿಕೆಗೆ ಆರ್ಥಿಕತೆಯನ್ನು ತೆರೆಯಲಾಯಿತು. ಈ ರೀತಿಯ ಸುಧಾರಣಾ ಕ್ರಮಗಳ ಪರಿಣಾಮವಾಗಿ ಭಾರತಕ್ಕೆ ಹೂಡಿಕೆ, ಬಂಡವಾಳ ಹರಿದುಬಂದವು ಐಟಿ ಕ್ಷೇತ್ರ ವಿಪುಲವಾಗಿ ಬೆಳೆಯಲು ಸಾಧ್ಯವಾಯಿತು.

Former PM Manmohan singh- Former PM PV Narasimha rao
ಅರ್ಥಶಾಸ್ತ್ರದ ಪ್ರಾಧ್ಯಾಪಕನಿಂದ ಪ್ರಧಾನಿಯ ಹುದ್ದೆ ವರೆಗೆ Dr. Manmohan Singh ನಡೆದುಬಂದ ಹಾದಿ....

ಪ್ರಧಾನಿಯಾಗಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಯೋಜನೆಗಳು

  1. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (NREGA): ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ

  2. ಮಾಹಿತಿ ಹಕ್ಕು ಕಾಯಿದೆ (RTI): ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸುವುದು

  3. ಯುನೈಟೆಡ್ ಸ್ಟೇಟ್ಸ್ ಜೊತೆಗಿನ ನಾಗರಿಕ ಪರಮಾಣು ಒಪ್ಪಂದ: ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಿತ್ತು.

  4. ಡಾ ಸಿಂಗ್ ಅವರ ಶಾಂತ ಮತ್ತು ನಿರ್ಣಾಯಕ ನಾಯಕತ್ವವು 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡಿತು, ನಿರಂತರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿತು.

  5. ಆಧಾರ್ ಯೋಜನೆ ಜಾರಿಗೆ ಬಂದಿದ್ದೂ ಮನಮೋಹನ್ ಸಿಂಗ್ ಅವರ ಅವಧಿಯಲ್ಲೇ ಎಂಬುದು ಗಮನಾರ್ಹ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com