ನಿತೇಶ್ ರಾಣೆ
ನಿತೇಶ್ ರಾಣೆ

ಕೇರಳ ವಿರೋಧಿ ಹೇಳಿಕೆ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಜಾಗೊಳಿಸುವಂತೆ ಮೋದಿಗೆ ಕಾಂಗ್ರೆಸ್ ಆಗ್ರಹ

ಇಂತಹ ನಾಚಿಕೆಗೇಡಿನ ಹೇಳಿಕೆ ನೀಡಿರುವ ರಾಣೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದ್ದಾರೆ.
Published on

ನವದೆಹಲಿ: ಕೇರಳ "ಮಿನಿ-ಪಾಕಿಸ್ತಾನ". ಅದಕ್ಕೆ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರನ್ನು ಗೆಲ್ಲಿಸಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಅವರ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ ಮತ್ತು ಇದು ದಕ್ಷಿಣ ರಾಜ್ಯದ ಜನರ ಬಗ್ಗೆ ಬಿಜೆಪಿಯಲ್ಲಿ "ಆಳವಾಗಿ ಬೇರೂರಿರುವ ದ್ವೇಷವನ್ನು" ತೋರಿಸುತ್ತದೆ ಎಂದು ಹೇಳಿದ್ದಾರೆ.

ಇಂತಹ ನಾಚಿಕೆಗೇಡಿನ ಹೇಳಿಕೆ ನೀಡಿರುವ ರಾಣೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದ್ದಾರೆ.

"ಹಾಗಾಗ ಕೇರಳದ ವಿರುದ್ಧ ವಿಷ ಕಕ್ಕಲು ಬಿಜೆಪಿ ಇಂತಹ ನಾಯಕರನ್ನು ನಿಯೋಜಿಸುತ್ತದೆ. 'ಮಿನಿ ಪಾಕಿಸ್ತಾನ' ಎಂಬ ಪದವನ್ನು ಬಳಸಿರುವುದು ಕೇರಳದ ಜನರ ಬಗ್ಗೆ ಬಿಜೆಪಿಯಲ್ಲಿ "ಆಳವಾಗಿ ಬೇರೂರಿರುವ ದ್ವೇಷವನ್ನು" ತೋರಿಸುತ್ತದೆ" ಎಂದು ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 ನಿತೇಶ್ ರಾಣೆ
ಕೇರಳ 'ಮಿನಿ-ಪಾಕಿಸ್ತಾನ', ಅದಕ್ಕೆ ರಾಹುಲ್, ಪ್ರಿಯಾಂಕಾ ಗೆದ್ದರು: ಮಹಾರಾಷ್ಟ್ರ ಸಚಿವ ರಾಣೆ ವಿವಾದಾತ್ಮಕ ಹೇಳಿಕೆ

ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಜೀವನಮಟ್ಟದಲ್ಲಿ ನಿರಂತರವಾಗಿ ಅಗ್ರಸ್ಥಾನದಲ್ಲಿರುವ ಕೇರಳ ಇಡೀ ವಿಶ್ವಕ್ಕೆ ಮಾದರಿ ರಾಜ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ತಿರುಗೇಟು ನೀಡಿದ್ದಾರೆ.

ಸಹಸ್ರಮಾನಗಳಿಂದಲೂ, ಕೇರಳವು ಎಲ್ಲಾ ಧರ್ಮಗಳು ಮತ್ತು ಪಂಗಡಗಳ ನಡುವೆ ಕೋಮು ಸೌಹಾರ್ದತೆ ಮತ್ತು ಸಹೋದರತ್ವದ ದಾರಿದೀಪವಾಗಿದೆ ಎಂದು ಅವರು ಹೇಳಿದ್ದಾರೆ.

“ಸಮಾನತೆ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ ಶ್ರೀನಾರಾಯಣ ಗುರು, ಚಟ್ಟಂಬಿ ಸ್ವಾಮಿಗಳು ಮತ್ತು ಮಹಾತ್ಮ ಅಯ್ಯಂಕಾಳಿ ಅವರ ನಾಡಿನ ವಿರುದ್ಧ ನಿಂದನೀಯ ಭಾಷೆ ಬಳಸಿರುವುದು ಬಿಜೆಪಿಯ ತನ್ನ ಸಹ ನಾಗರಿಕರ ಬಗೆಗಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಕೂಡಲೇ ಮಹಾರಾಷ್ಟ್ರ ಸಚಿವ ರಾಣೆಯನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com