ಕೇಂದ್ರ ಬಜೆಟ್ 2024: ಕೃಷಿ, ರೈತ ಕಲ್ಯಾಣ ಸಚಿವಾಲಯಕ್ಕೆ 1.27 ಲಕ್ಷ ಕೋಟಿ ರೂ. ಅನುದಾನ

ಕೇಂದ್ರ ಬಜೆಟ್-2024 ರಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಘೋಷಣೆಯಾಗಿದ್ದರೆ, ಅತಿ ಕಡಿಮೆ ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗಿದೆ. 
ಕೃಷಿ ಚಟುವಟಿಕೆ (ಸಂಗ್ರಹ ಚಿತ್ರ)
ಕೃಷಿ ಚಟುವಟಿಕೆ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಬಜೆಟ್-2024 ರಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಘೋಷಣೆಯಾಗಿದ್ದರೆ, ಅತಿ ಕಡಿಮೆ ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗಿದೆ. 

ನಿರ್ಮಲಾ ಸೀತಾರಾಮನ್ ಕೃಷಿ ಬಗ್ಗೆ ಮಾತನಾಡಿದ್ದು, ಕೊಯ್ಲಿನ ನಂತರದ ಕೃಷಿ ಚಟುವಟಿಕೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸುವುದಾಗಿ ತಿಳಿಸಿದ್ದಾರೆ.

ಇನ್ನು ಈ ಬಾರಿಯ ಬಜೆಟ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ವರ್ಷಕ್ಕೆ 6000 ದಿಂದ 7,500-8000 ರೂಪಾಯಿಗಳಿಗೆ ಏರಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತಾದರೂ ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 11.8 ಕೋಟಿ ರೈತರಿಗೆ ನೆರವು ಸಿಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com