ಜಾರ್ಖಂಡ್: ಜೆಎಂಎಂ ಶಾಸಕಾಂಗ ಪಕ್ಷದ ನಾಯಕನಾಗಿ ಚಂಪೈ ಸೊರೇನ್ ಆಯ್ಕೆ; ಶೀಘ್ರವೇ ರಾಜ್ಯಪಾಲರ ಭೇಟಿ ಸಾಧ್ಯತೆ

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನ ನೂತನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಚಂಪೈ ಸೊರೇನ್ ಅವರನ್ನು ಆಯ್ಕೆ ಮಾಡಲಾಗಿದೆ. 
ಹೇಮಂತ್ ಸೊರೇನ್-ಚಂಪೈ ಸೊರೇನ್
ಹೇಮಂತ್ ಸೊರೇನ್-ಚಂಪೈ ಸೊರೇನ್

ಜಾರ್ಖಂಡ್: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನ ನೂತನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಚಂಪೈ ಸೊರೇನ್ ಅವರನ್ನು ಆಯ್ಕೆ ಮಾಡಲಾಗಿದೆ. 

ಜಾರ್ಖಂಡ್ ನಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವಿದ್ದು, ಸಿಎಂ ಹೇಮಂತ್ ಸೊರೇನ್ ಅವರನ್ನು ಭೂ ಹಗರಣದ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆದಿದೆ.

ಚಂಪೈ ಸೊರೇನ್ ತಮಗೆ 47 ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ತಲುಪಿಸಿದ್ದಾರೆ. ಶೀಘ್ರವೇ ರಾಜ್ಯಪಾಲರು ಚಂಪೈ ಸೊರೇನ್ ಗೆ ಸರ್ಕಾರ ರಚನೆಗೆ ಆಹ್ವಾನ ನೀಡುವ ಸಾಧ್ಯತೆ ಇದೆ.

ಶಿಬು ಸೋರೆನ್ ಅವರ 'ಆಪ್ತ' ಚಂಪೈ ಸೊರೇನ್

ಜೆಎಂಎಂ ಉಪಾಧ್ಯಕ್ಷರಾದ ಚಂಪೈ ಸೊರೆನ್ ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಸಹವರ್ತಿಯಾಗಿದ್ದಾರೆ. ಅವರು ಜಾರ್ಖಂಡ್ ಚಳವಳಿಯ ಸಂದರ್ಭದಲ್ಲಿ ಶಿಬು ಸೊರೆನ್ ಅವರನ್ನು ಬೆಂಬಲಿಸಿದರು. ಜಾರ್ಖಂಡ್ ಟೈಗರ್ ಎಂದು ವ್ಯಾಪಕವಾಗಿ ಪರಿಚಿತರಾಗಿರುವ ಚಂಪೈ ಅವರನ್ನು ಶಿಬು ಸೊರೆನ್ ಅವರ 'ಅತ್ಯಾಪ್ತ' ಎಂದು ಗುರುತಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com