ದೇಶಕ್ಕಾಗಿ ನನ್ನ ಜೀವನ ಮುಡಿಪು; 'ಭಾರತ ರತ್ನ' ನನ್ನ ಆದರ್ಶ, ತತ್ವಗಳಿಗೆ ಸಂದ ಗೌರವ: ಅಡ್ವಾಣಿ

ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಗಾಗಿ ಮಾತ್ರ ನೀಡಿಲ್ಲ. ಜೀವನದುದ್ದಕ್ಕೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಕಾರಣವಾದ ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ...
ಎಲ್ ಕೆ ಅಡ್ವಾಣಿx
ಎಲ್ ಕೆ ಅಡ್ವಾಣಿx
Updated on

ನವದೆಹಲಿ: ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಯಾಗಿ ಮಾತ್ರ ಅಲ್ಲ. ಜೀವನದುದ್ದಕ್ಕೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಕಾರಣವಾದ ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಶನಿವಾರ ಹೇಳಿದ್ದಾರೆ.
  
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ತಮ್ಮ ಹೆಸರನ್ನು ಘೋಷಿಸಿದ ಬೆನ್ನಲ್ಲೇ, "ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ, ಇಂದು ನನಗೆ ನೀಡಲಾದ ಭಾರತ ರತ್ನವನ್ನು ನಾನು ಸ್ವೀಕರಿಸುತ್ತೇನೆ" ಎಂದು ಅಡ್ವಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

96 ವರ್ಷದ ನಾಯಕ, ಬಿಜೆಪಿ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ ಅಡ್ವಾಣಿ ಅವರು, 14 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸದಸ್ಯನಾಗಿ ಸೇರಿದಾಗಿನಿಂದ ನಿಸ್ವಾರ್ಥದಿಂದ ಯಾವುದೇ ಪ್ರತಿಫಲ ಬಯಸದೇ ಸೇವೆ ಸಲ್ಲಿಸಿದ್ದೇನೆ. ದೇಶಕ್ಕಾಗಿ ನನ್ನ ಜೀವನ ಮುಡಿಪು ಎಂದು ಹೇಳಿದ್ದಾರೆ.

"ಈ ಜೀವನ ನನ್ನದಲ್ಲ, ನನ್ನ ಜೀವನ ದೇಶಕ್ಕಾಗಿ ಮುಡಿಪು" ಎಂಬ ಧ್ಯೇಯವಾಕ್ಯವೇ ನನ್ನ ಜೀವನಕ್ಕೆ ಸ್ಫೂರ್ತಿಯಾಗಿದೆ ಎಂದು ಮಾಜಿ ಉಪ ಪ್ರಧಾನಿ ತಿಳಿಸಿದ್ದಾರೆ.

ಈ ಹಿಂದೆ ಭಾರತ ರತ್ನ ಪುರಸ್ಕೃತರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಗೌರವಕ್ಕೆ ಪಾತ್ರರಾದ ನಾನು ಇಂದು ಆ ಇಬ್ಬರು ವ್ಯಕ್ತಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದಿದ್ದಾರೆ.

ಲಕ್ಷಾಂತರ ಬಿಜೆಪಿ ಕಾರ್ಯಕರ್ತರು, ಆರೆಸ್ಸೆಸ್ ಸ್ವಯಂಸೇವಕರು ಮತ್ತು ತಮ್ಮ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಿದ ಇತರರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ ಅಡ್ವಾಣಿ ಅವರು, ಭಾರತ ರತ್ನ ನೀಡಿ ಗೌರವಿಸಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com