ದೇಶದ ಜನರನ್ನು ನೆಹರೂ 'ಸೋಮಾರಿ' ಎಂದಿದ್ದರು; ಕಾಂಗ್ರೆಸ್ ಎಂದಿಗೂ ದೇಶದ ಸಾಮರ್ಥ್ಯವನ್ನು ನಂಬಲಿಲ್ಲ: ಪ್ರಧಾನಿ ಮೋದಿ

ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ ನಲ್ಲಿ ತಮ್ಮ ಕೊನೆಯ ಭಾಷಣವನ್ನು ಮಾಡಿದ್ದು ಈ ವೇಳೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ ನಲ್ಲಿ ತಮ್ಮ ಕೊನೆಯ ಭಾಷಣವನ್ನು ಮಾಡಿದ್ದು ಈ ವೇಳೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. 

ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಭಾರತದ ಸಾಧನೆಗಳನ್ನು "ಕಿತ್ತು ಹಾಕುವ" ಉದ್ದೇಶ ಹೊಂದಿದೆ ಎಂದು ಆರೋಪಿಸಿದರು. ಹೆಚ್ಚುವರಿಯಾಗಿ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿರ್ದಿಷ್ಟವಾಗಿ 370 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ದೇಶಕ್ಕೆ ಉತ್ತಮ ವಿರೋಧ ಪಕ್ಷದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇನ್ನು ಪ್ರತಿಪಕ್ಷಗಳ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ದೂಷಿಸಿದರು. ಇದು ಚುನಾವಣೆಯ ಸಮಯ, ನೀವು ಸ್ವಲ್ಪ ಶ್ರಮವಹಿಸಿ, ಹೊಸ ಭರವಸೆಗಳನ್ನೂ ಜನರಿಗೆ ನೀಡಬೇಕಾಗಿತ್ತು. ಆದರೆ ನೀವು ಹೀನಾಯವಾಗಿ ಸೋತಿದ್ದೀರಿ, ನಿಮಗೆ ಇದನ್ನೇ ಕಲಿಸುತ್ತೇನೆ. ಈಗಿನ ಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ಕಾಂಗ್ರೆಸ್‌ಗೆ ಉತ್ತಮ ಪ್ರತಿಪಕ್ಷವಾಗಲು ಅವಕಾಶ ಸಿಕ್ಕಿದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.

INDIA ಮೈತ್ರಿಕೂಟವನ್ನು ಟೀಕಿಸಿದ ಮೋದಿ, ಮೈತ್ರಿಕೂಟದ ಹೊಂದಾಣಿಕೆಯು ಹದಗೆಟ್ಟಿದೆ. "ಮೈತ್ರಿಕೂಟದ ಪಾಲುದಾರರಲ್ಲಿ ನಂಬಿಕೆಯ ಕೊರತೆಯಿದೆ. ರಾಷ್ಟ್ರೀಯ ಮಟ್ಟದಲ್ಲಿ ನಂಬಿಕೆಯನ್ನು ಬೆಳೆಸುವ ಅವರ ಸಾಮರ್ಥ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಸೇರಿಸಿದರು.

ದೇಶವು ಕುಟುಂಬವಾದದ ಭಾರವನ್ನು ಹೊತ್ತುಕೊಂಡಿದ್ದು ಕಾಂಗ್ರೆಸ್‌ಗೆ ಅದೇ ತೊಡಕಾಗಿದೆ. ಮಲ್ಲಿಕಾರ್ಜುನ್ ಖರ್ಗೆ ಅವರು ಲೋಕಸಭೆಯಿಂದ ರಾಜ್ಯಸಭೆಗೆ ಮತ್ತು ಗುಲಾಂ ನಬಿ ಆಜಾದ್ ಅವರು ಪಕ್ಷದಿಂದ ಹೊರ ಹೋಗಿದ್ದಾರೆ. ಅವರೆಲ್ಲರೂ ಕುಟುಂಬವಾದಕ್ಕೆ ಬಲಿಯಾದರು. ಒಂದು ಉತ್ಪನ್ನ(ರಾಹುಲ್ ಗಾಂಧಿ)ವನ್ನು ಮತ್ತೆ ಮತ್ತೆ ಮೇಲೆತ್ತುವ ಪ್ರಯತ್ನದಲ್ಲಿ ಸೋತಿದ್ದು, ಕಾಂಗ್ರೆಸ್‌ನ ಅಂಗಡಿ ಮುಚ್ಚುವ ಹಂತದಲ್ಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕಾಂಗ್ರೆಸ್ 'ಕಿತ್ತು ಹಾಕುವ' ಮನಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ಅದು ಆತ್ಮನಿರ್ಭರ್ ಭಾರತ್, ವಂದೇ ಭಾರತ್, ಸೆಂಟ್ರಲ್ ವಿಸ್ಟಾ ಸೇರಿದಂತೆ ಎಲ್ಲವನ್ನೂ ವಿರೋಧಿಸಿದ್ದರು. ನಾವು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತೇವೆ ಆದರೆ ಕಾಂಗ್ರೆಸ್ ರದ್ದು ಎಂದು ಹೇಳುತ್ತಾರೆ. ನಾವು ಆತ್ಮನಿರ್ಭರ ಭಾರತ್ ಎಂದು ಹೇಳುತ್ತೇವೆ, ಕಾಂಗ್ರೆಸ್ ಕಿತ್ತುಹಾಕುತ್ತೇವೆ ಎಂದು ಹೇಳುತ್ತಾರೆ. ನಾವು ವಂದೇ ಭಾರತ್ ರೈಲು ಎಂದು ಹೇಳಿದರೆ ಅದು ಬೇಡ ಎಂದು ಕಾಂಗ್ರೆಸ್ ಹೇಳುತ್ತಿತ್ತು. ನಾವು ಹೊಸ ಸಂಸತ್ತಿನ ಕಟ್ಟಡ ಕಟ್ಟಲು ಮುಂದಾದರೆ ಕಾಂಗ್ರೆಸ್ ಬೇಡ ಎಂದು ಹೇಳುತ್ತಿತ್ತು. ನನಗೆ ಆಶ್ಚರ್ಯವಾಗಿದೆ ಏಕೆಂದರೆ ಇವು ಮೋದಿಯವರ ಸಾಧನೆಗಳಲ್ಲ, ಇವು ದೇಶದ ಸಾಧನೆಗಳು ಎಂದು ಪ್ರಧಾನಿ ಹೇಳಿದರು.

ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ ಪಿಎಂ ಮೋದಿ, ಬಿಜೆಪಿಯ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಮೂರನೇ ಅವಧಿ ಈಗ ಬಹಳ ದೂರವಿಲ್ಲ, ಕೇವಲ 100-125 ದಿನಗಳು ಮಾತ್ರ ಉಳಿದಿವೆ. ನಾನು ಅಂಕಿಅಂಶಗಳಿಗೆ ಹೋಗುವುದಿಲ್ಲ, ಆದರೆ ನಾನು ದೇಶದ ಮನಸ್ಥಿತಿಯನ್ನು ನೋಡಿದ್ದೇನೆ. ಇದು ಎನ್‌ಡಿಎ 400 ದಾಟುತ್ತದೆ. ಅಲ್ಲದೆ ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ. ಇನ್ನು ಮೂರನೇ ಅವಧಿಯಲ್ಲಿ ಬಹಳ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಮೋದಿ ಹೇಳಿದರು.

ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಹೇಳಿಕೆಯನ್ನು ಪ್ರಸ್ತಾಪಿಸಿದ ಮೋದಿ, ದೇಶದ ಮೊದಲ ಪ್ರಧಾನಿ ನೆಹರೂ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತರು ಎಂದು ಭಾವಿಸಿದ್ದರು. ಭಾರತೀಯರು ಯುರೋಪ್, ಜಪಾನ್ ಮತ್ತು ಚೀನಾದವರಿಗಿಂತ ಕಡಿಮೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಮನಸ್ಥಿತಿಯು ಅದು ಎಂದಿಗೂ ದೇಶದ ಸಾಮರ್ಥ್ಯವನ್ನು ನಂಬುವುದಿಲ್ಲ. ಕಾಂಗ್ರೆಸ್ ತನ್ನನ್ನು ಆಡಳಿತಗಾರರು ಮತ್ತು ಸಾರ್ವಜನಿಕರಿಗಿಂತ ಹೆಚ್ಚು, ಯಾರಾದರೂ ತಮ್ಮ ಮುಂದೆ ಚಿಕ್ಕವರು ಎಂದು ಪರಿಗಣಿಸಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com