ಇಳಿ ವಯಸ್ಸಿನಲ್ಲಿ ಏಕಾಏಕಿ ದೇವೇಗೌಡರಿಗೆ ಏನಾಯಿತೋ ತಿಳಿಯದು: ಮಲ್ಲಿಕಾರ್ಜುನ ಖರ್ಗೆ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಇಡೀ ಬದುಕನ್ನು ಜಾತ್ಯತೀತತೆ, ಸಮಾಜವಾದಕ್ಕಾಗಿ ಮತ್ತು ರೈತರ ಹಿತಾಸಕ್ತಿ ರಕ್ಷಿಸಲು ಕಳೆದರು. ಈ ಇಳಿ ವಯಸ್ಸಿನಲ್ಲಿ ಏಕಾಏಕಿ ಅವರಿಗೆ ಏನಾಯಿತೋ ತಿಳಿಯದು ಎಂದು ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ:  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಇಡೀ ಬದುಕನ್ನು ಜಾತ್ಯತೀತತೆ, ಸಮಾಜವಾದಕ್ಕಾಗಿ ಮತ್ತು ರೈತರ ಹಿತಾಸಕ್ತಿ ರಕ್ಷಿಸಲು ಕಳೆದರು. ಈ ಇಳಿ ವಯಸ್ಸಿನಲ್ಲಿ ಏಕಾಏಕಿ ಅವರಿಗೆ ಏನಾಯಿತೋ ತಿಳಿಯದು ಎಂದು ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜ್ಯಸಭೆಯ ಅವಧಿಯನ್ನು ಪೂರೈಸುತ್ತಿರುವ 68 ಸದಸ್ಯರಿಗೆ ಗುರುವಾರ ಸದನದಲ್ಲಿ ಬೀಳ್ಕೊಡುಗೆ ಭಾಷಣ ಮಾಡಿದ ವಿರೋಧಪಕ್ಷ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಈ ಮಾತು ಹೇಳಿದರು. ತಮ್ಮ ಭಾಷಣದಲ್ಲಿ ಖರ್ಗೆ ಅವರು ಗೌಡರ ಜೊತೆಗಿನ ಸುದೀರ್ಘ ಅವಧಿಯ ಬಾಂಧವ್ಯವನ್ನು ಮೆಲುಕು ಹಾಕಿದರು. ಖರ್ಗೆ ಅವರ ಮಾತುಗಳು ಒಂದು ಹಂತದಲ್ಲಿ ಸದಸ್ಯರಲ್ಲಿ ನಗು ಮೂಡಿಸಿತು.

ದೇವೇಗೌಡರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರನ್ನು ಅತಿಯಾಗಿ ಹೊಗಳುತ್ತಿದ್ದಾರೆ. ಅಪ್ಪಿಕೊಳ್ಳುತ್ತಿದ್ದಾರೆ. ಗೌಡರಿಗೆ ಯಾರನ್ನು ಹೊಗಳುವ ಹವ್ಯಾಸವೇ ಇಲ್ಲ. ಅಂತಹವರಿಗೆ ಈ ಇಳಿವಯಸ್ಸಿನಲ್ಲಿ ಏನಾಯಿತೊ? ಅವರ ಹವ್ಯಾಸ ಬದಲಾಗಲು ಕಾರಣವಾದುದಾದರೂ ಏನು’ ಎಂದೂ ಖರ್ಗೆ ಪ್ರಶ್ನಿಸಿದರು.

ಈ ಮಾತಿಗೆ ಪಕ್ಷಭೇದವಿಲ್ಲದೆ ಸದಸ್ಯರು ನಕ್ಕರು. ಸದನದಲ್ಲಿದ್ದ ಪ್ರಧಾನಿ ಮೋದಿ ಅವರೂ ಈ ನಗುವಿನಲ್ಲಿ ಭಾಗಿಯಾದರು. ಸದ್ಯ, ಅವಧಿಯನ್ನು ಪೂರೈಸುತ್ತಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ 10 ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ಖರ್ಗೆ ಅವರು ಇದೇ ಸಂದರ್ಭದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com