ಭಗವಾನ್ ಶ್ರೀ ರಾಮನೊಂದಿಗೆ ನಿಮ್ಮ ಹೆಸರು ಎಂದೆಂದಿಗೂ ಉಳಿಯಲಿದೆ: ಪಿಎಂ ಮೋದಿ ಹೊಗಳಿದ ಶಿಲ್ಪಾ ಶೆಟ್ಟಿ

ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ಎಕ್ಸ್‌ ಪೇಜ್‌ನಲ್ಲಿ ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಬರೆದಿರುವ ಪತ್ರವನ್ನು ಪೋಸ್ಟ್‌ ಮಾಡಲಾಗಿದೆ. ರಾಮ ಮಂದಿರದ ಕನಸು ನನಸಾಗಿಸಿದ ಮೋದಿ ಅವರ ಕಾರ್ಯಕ್ಕೆ ಶಿಲ್ಪಾ ಶೆಟ್ಟಿ ಮೆಚ್ಚುಗೆ ಸೂಚಿಸಿರುವುದು ಪತ್ರದಲ್ಲಿ ಕಂಡು ಬಂದಿದೆ.
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ

ಮುಂಬಯಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿರುವ ಭವ್ಯ ರಾಮ ಮಂದಿರವನ್ನು ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

ಈ ಮೂಲಕ ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ನನಸಾಗಿದೆ. ಇದೀಗ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅಯೋಧ್ಯೆ ರಾಮ ಮಂದಿರ ಉದ್ಘಾಟಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ತಿಳಿಸಿ ಬರೆದ ಪತ್ರ ವೈರಲ್‌ ಆಗಿದೆ.

ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ಎಕ್ಸ್‌ ಪೇಜ್‌ನಲ್ಲಿ ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಬರೆದಿರುವ ಪತ್ರವನ್ನು ಪೋಸ್ಟ್‌ ಮಾಡಲಾಗಿದೆ. ರಾಮ ಮಂದಿರದ ಕನಸು ನನಸಾಗಿಸಿದ ಮೋದಿ ಅವರ ಕಾರ್ಯಕ್ಕೆ ಶಿಲ್ಪಾ ಶೆಟ್ಟಿ ಮೆಚ್ಚುಗೆ ಸೂಚಿಸಿರುವುದು ಪತ್ರದಲ್ಲಿ ಕಂಡು ಬಂದಿದೆ. ರಾಮ ಮಂದಿರ ನಿರ್ಮಾಣದ ಮೂಲಕ ಪ್ರಧಾನಿ ಮೋದಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶಿಲ್ಪಾ ಶೆಟ್ಟಿ ಪತ್ರದಲ್ಲಿ ಶ್ಲಾಘಿಸಿದ್ದಾರೆ. ದೇವಾಲಯವನ್ನು ತೆರೆದಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ. ಮೋದಿ ಯಾವಾಗಲೂ ದೇವಾಲಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎಂದೂ ಬರೆದುಕೊಂಡಿದ್ದಾರೆ.

ಕೆಲವರು ಇತಿಹಾಸವನ್ನು ಓದಿದರೆ, ಇತರರು ಅದರಿಂದ ಕಲಿಯುತ್ತಾರೆ. ನಿಮ್ಮಂತಹ ವ್ಯಕ್ತಿಗಳು (ಪ್ರಧಾನಿ ನರೇಂದ್ರ ಮೋದಿ) ಅದನ್ನು ಮರು ಸೃಷ್ಟಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾರೆ. ನೀವು ರಾಮ ಜನ್ಮಭೂಮಿಯ 500 ವರ್ಷಗಳ ಇತಿಹಾಸವನ್ನು ಮತ್ತೆ ಬರೆದಿದ್ದೀರಿ. ಇದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು. ಈ ಶುಭ ಕಾರ್ಯದಿಂದಾಗಿ ನಿಮ್ಮ ಹೆಸರು ಭಗವಾನ್ ಶ್ರೀ ರಾಮನೊಂದಿಗೆ ಎಂದೆಂದಿಗೂ ಉಳಿಯಲಿದೆ” ಎಂದು ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಬರೆದಿದ್ದಾರೆ.

ಬಿಜೆಪಿ ಮಹಾರಾಷ್ಟ್ರ ಘಟಕ ಈ ಪತ್ರವನ್ನು ಹಂಚಿಕೊಂಡು, ಇತ್ತೀಚೆಗೆ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಪತ್ರ ಬರೆದು ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಶ್ರೀ ರಾಮನು 5 ಶತಮಾನಗಳ ಕಾಲ ವನವಾಸದಲ್ಲಿದ್ದನು. ಇದೀಗ ವನವಾಸ ಕೊನೆಗೊಂಡಿದೆ. ಇದರ ಹಿಂದೆ ಮೋದಿಜಿ ಅವರ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ. ಇದಕ್ಕಾಗಿ ಶಿಲ್ಪಾ ಶೆಟ್ಟಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಬರೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com