ಎನ್‌ಡಿಎಗೆ ಮರಳಲು ಟಿಡಿಪಿ ಸಜ್ಜು: ಮುಂದಿನ ವಾರ ಮೈತ್ರಿ ಘೋಷಣೆ ಸಾಧ್ಯತೆ!

ಮೋದಿ ಜೊತೆ ನಾಯ್ಡು ಮತ್ತು ಪವನ್ ಕಲ್ಯಾಣ್
ಮೋದಿ ಜೊತೆ ನಾಯ್ಡು ಮತ್ತು ಪವನ್ ಕಲ್ಯಾಣ್

ಹೈದರಾಬಾದ್: ವಿಧಾನಸಭೆ ಮತ್ತು ಲೋಕಸಭೆ ಸೀಟು ಹಂಚಿಕೆ ಮಾತುಕತೆಗಳು ಹೆಚ್ಚು ಕಡಿಮೆ ಅಂತಿಮಗೊಂಡಿದ್ದು ಟಿಡಿಪಿ ಮುಂದಿನ ವಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಲು ಸಿದ್ಧವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಉನ್ನತ ಮೂಲಗಳು ತಿಳಿಸಿವೆ.

ಟಿಡಿಪಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನವದೆಹಲಿಯಲ್ಲಿ ಮಾತುಕತೆ ನಡೆಸಿದ ಸುಮಾರು 10 ದಿನಗಳ ನಂತರ ಈ ಬೆಳವಣಿಗೆಯಾಗಿದೆ.

ಫೆಬ್ರವರಿ 20 ಅಥವಾ 21 ರಂದು ಮೈತ್ರಿ ಸಂಬಂಧ ಘೋಷಣೆ ಮಾಡಲಾಗುವುದು. ಟಿಡಿಪಿ ಮತ್ತು ಬಿಜೆಪಿ ನಡುವೆ ಯಾವುದೇ ಕೆಟ್ಟ ರಕ್ತವಿಲ್ಲ. 2019 ರ ಚುನಾವಣೆಗೆ ಮುಂಚಿತವಾಗಿ ಎನ್‌ಡಿಎಯಿಂದ ಹೊರಬರಲು ಕಾರಣವಾದ ಸಂದರ್ಭಗಳನ್ನು ನಾಯ್ಡು ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ ಜೊತೆ ನಾಯ್ಡು ಮತ್ತು ಪವನ್ ಕಲ್ಯಾಣ್
ಕುತೂಹಲ ಕೆರಳಿಸಿದ ಡಿಕೆಶಿ-ಚಂದ್ರಬಾಬು ನಾಯ್ಡು ಭೇಟಿ: ಆಂಧ್ರಪ್ರದೇಶದಲ್ಲೂ ಶುರುವಾಯಿತೇ ತಂತ್ರಗಾರಿಕೆ?

ಮೈತ್ರಿಯ ಭಾಗವಾಗಿ, ಟಿಡಿಪಿ 30 ವಿಧಾನಸಭೆ ಮತ್ತು 10 ಲೋಕಸಭೆ ಸ್ಥಾನಗಳನ್ನು ಬಿಜೆಪಿ-ಜನಸೇನೆಗೆ ಬಿಟ್ಟುಕೊಡಬಹುದು. 30 ಅಸೆಂಬ್ಲಿ ಸ್ಥಾನಗಳಲ್ಲಿ, ಬಿಜೆಪಿ 5-10 ರಲ್ಲಿ ಸ್ಪರ್ಧಿಸಬಹುದು ಮತ್ತು ಉಳಿದವುಗಳನ್ನು ಪವನ್ ಕಲ್ಯಾಣ್ ಅವರ ಜನಸೇನೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಸಲಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೂರು ಸ್ಥಾನಗಳನ್ನು ಜನಸೇನೆಗೆ ಬಿಟ್ಟುಕೊಡಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಚಿತ್ರನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ, ಈ ಬಾರಿ ಖಾತೆಯನ್ನು ತೆರೆಯುವ ನಿರೀಕ್ಷೆಯಲ್ಲಿದೆ. ಕಳೆದ ಬಾರಿ ಕೇವಲ ಒಂದು ಸ್ಥಾನ ಪಡೆದಿತ್ತು. ಹೀಗಾಗಿ ಈ ಬಾರಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಕಳೆದ ಬಾರಿ ದಾಖಲಾದ ಶೇಕಡಾ 5.5 ಕ್ಕಿಂತ ಅದರ ಮತ-ಪಾಲು ಸುಧಾರಿಸುತ್ತದೆ ಎಂದು ಜನಸೇನೆ ವಿಶ್ವಾಸದಲ್ಲಿದೆ.

ನರಸಾಪುರದಿಂದ ವೈಎಸ್‌ಆರ್‌ಸಿ ಬಂಡಾಯ ಸಂಸದ ಕೆ ರಘು ರಾಮಕೃಷ್ಣರಾಜು, ರಾಜಮಹೇಂದ್ರವರಂನಿಂದ ಪಕ್ಷದ ರಾಜ್ಯ ಮುಖ್ಯಸ್ಥೆ ಡಿ ಪುರಂದೇಶ್ವರಿ, ರಾಜಂಪೇಟೆಯಿಂದ ಮಾಜಿ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಮತ್ತು ಹಿಂದೂಪುರ ಅಥವಾ ಅನಂತಪುರದಿಂದ ಹಿರಿಯ ನಾಯಕ ಸತ್ಯಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಜನಸೇನೆಯಿಂದ ಎಸ್ ಸತೀಶ್ ಕಾಕಿನಾಡ ಮತ್ತು ವಲ್ಲಭನೇನಿ ಬಾಲಶೌರಿ ಮಚಲಿಪಟ್ಟಣದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅನಕಪಲ್ಲಿಯಿಂದ ಸ್ಪರ್ಧಿಸಬಹುದು.

ಮೋದಿ ಜೊತೆ ನಾಯ್ಡು ಮತ್ತು ಪವನ್ ಕಲ್ಯಾಣ್
ಚಂದ್ರಬಾಬು ನಾಯ್ಡು ಬೆಂಬಲಿಸಲು ಎನ್ ಡಿಎ ತೊರೆದ ಪವನ್ ಕಲ್ಯಾಣ್!

ಫೆಬ್ರವರಿ 17 ರಿಂದ 18 ರವರೆಗೆ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಸಮಾವೇಶದ ನಂತರ ಮೈತ್ರಿಯ ಔಪಚಾರಿಕ ಘೋಷಣೆ ಹೊರಬೀಳಲಿದೆ. ನಾಯ್ಡು ಅವರು ಅಮಿತ್ ಶಾ ಅವರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೈತ್ರಿ ವಿಷಯದ ಬಗ್ಗೆ ಚರ್ಚಿಸಲು ಟಿಡಿಪಿಯ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಗೃಹ ಸಚಿಲ ಅಮಿತ್ ಶಾ ಅವರೊಂದಿಗೆ ಹಿರಿಯ ನಾಯಕರ ಮಾತುಕತೆಯ ನಂತರ ನಾಯ್ಡು ಅವರಿಗೆ ದೆಹಲಿಗೆ ಬರುವಂತೆ ಕರೆ ಬಂದಿತ್ತು.

ಸೀಟು ಹಂಚಿಕೆ ಸುಸೂತ್ರವಾಗಿ ನಡೆದರೆ, ಟಿಡಿಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾಯ್ಡು ಅವರು ಎರಡು ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಗೆದ್ದಿದ್ದರು, ಒಮ್ಮೆ ವಾಜಪೇಯಿ ಕಾಲದಲ್ಲಿ ಮತ್ತು 2014 ರಲ್ಲಿ. ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಯು 'ವಿರೋಧ ಮತಗಳು ವಿಭಜನೆಯಾಗದಂತೆ' ತಡೆಯಲು ಪವನ್ ಕಲ್ಯಾಣ್ ಜನೇಸೇನೆ ಯತ್ನಿಸುತ್ತಿದೆ.

ವೈಎಸ್‌ಆರ್‌ಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಒಂದು ಕಡೆ ಅಸಾಧಾರಣ ಮೈತ್ರಿಯನ್ನು ಎದುರಿಸುವುದು ಮತ್ತು ಇನ್ನೊಂದು ಬದಿಯಲ್ಲಿ ಅವರ ಸ್ವಂತ ಸಹೋದರಿ ವೈಎಸ್ ಶರ್ಮಿಳಾ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿ ಈ ಬಾರಿ ಚುನಾವಣಾ ಕಣ ಪ್ರಬಲ ಸ್ಪರ್ಧೆಯಿಂದ ಕೂಡಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com