ಕೋರ್ಟ್ ನಲ್ಲಿ ನ್ಯಾಯಾಧೀಶರಿಂದಲೇ ಲೈಂಗಿಕ ದೌರ್ಜನ್ಯ: ಸಂತ್ರಸ್ತೆ

ನ್ಯಾಯ ಒದಗಿಸಬೇಕಾದ ನ್ಯಾಯಾಧೀಶರೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ತ್ರಿಪುರಾ ನ್ಯಾಯಾಲಯದಲ್ಲಿ ವರದಿಯಾಗಿದೆ.
ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ
ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ

ತ್ರಿಪುರಾ: ನ್ಯಾಯ ಒದಗಿಸಬೇಕಾದ ನ್ಯಾಯಾಧೀಶರೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ತ್ರಿಪುರಾ ನ್ಯಾಯಾಲಯದಲ್ಲಿ ವರದಿಯಾಗಿದೆ. ಅತ್ಯಾಚಾರದ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ವಿರುದ್ಧ ಆರೋಪ ಮಾಡಿದ್ದು, ತ್ರಿಪುರಾದ ಕೋರ್ಟ್ ನ ಚೇಂಬರ್ ನಲ್ಲಿಯೇ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಧಲೈ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ನೇತೃತ್ವದ ಮೂವರು ಸದಸ್ಯರ ಸಮಿತಿಯು ಆರೋಪದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹಿರಿಯ ವಕೀಲರು ತಿಳಿಸಿದ್ದಾರೆ. ಫೆಬ್ರವರಿ 16 ರಂದು ತನ್ನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕಮಲಾಪುರದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಕೋಣೆಗೆ ಹೋದಾಗ ಲೈಂಗಿಕ ದೌರ್ಜನ್ಯದ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ
ವಿಜಯಪುರ: ಪೊಲೀಸ್ ಅಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ; ಮಹಿಳೆಯಿಂದ ದೂರು ದಾಖಲು

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲಾಪುರಕ್ಕೆ ನೀಡಿದ ದೂರಿನಲ್ಲಿ ಮಹಿಳೆ, "ಫೆಬ್ರವರಿ 16 ರಂದು ನನ್ನ ಹೇಳಿಕೆಯನ್ನು ದಾಖಲಿಸಲು ನಾನು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಕೊಠಡಿಗೆ ಹೋಗಿದ್ದೆ. ನಾನು ನನ್ನ ಹೇಳಿಕೆಯನ್ನು ನೀಡಲು ಮುಂದಾದಾಗ, ನ್ಯಾಯಾಧೀಶರು ತಬ್ಬಿಕೊಂಡರು. ನಾನು ಅವರ ಕೊಠಡಿಯಿಂದ ಹೊರಗೆ ಧಾವಿಸಿ ವಕೀಲರು ಮತ್ತು ನನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿದೆ" ಎಂದು ಹೇಳಿದ್ದಾರೆ.

ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ
ಬೆಳಗಾವಿ: ಜಮೀನು ವಿವಾದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; 20 ಮಂದಿ ವಿರುದ್ಧ ಪ್ರಕರಣ ದಾಖಲು

ಘಟನೆ ಕುರಿತು ಮಹಿಳೆಯ ಪತಿ ಕಮಲಾಪುರ ಬಾರ್ ಅಸೋಸಿಯೇಷನ್‌ಗೆ ಪ್ರತ್ಯೇಕ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ಅವರು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಸತ್ಯಜಿತ್ ದಾಸ್ ಅವರೊಂದಿಗೆ ಕಮಲಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ
ಮಡಿಕೇರಿ: ಎರಡು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ

"ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯ ಸಮಿತಿಯು ನ್ಯಾಯಾಲಯದ ಆವರಣದಲ್ಲಿ ಕಮಲಾಪುರ ವಕೀಲರ ಸಂಘದ ಸದಸ್ಯರನ್ನು ಭೇಟಿ ಮಾಡಿ ಮಹಿಳೆಯ ಆರೋಪಗಳ ಬಗ್ಗೆ ನಮ್ಮ ಅಭಿಪ್ರಾಯವನ್ನು ಕೇಳಿದೆವು. ನಾವು ನಮ್ಮ ಅಂಶಗಳನ್ನು ಸಮಿತಿಯ ಮುಂದೆ ಇರಿಸಿದ್ದೇವೆ" ಎಂದು ವಕೀಲರ ಸಂಸ್ಥೆಯ ಕಾರ್ಯದರ್ಶಿ ಶಿಬೇಂದ್ರ ದಾಸ್‌ಗುಪ್ತ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com