ಉತ್ತರ ಪ್ರದೇಶ: ಲೋಕಸಭಾ ಚುನಾವಣೆಗೆ 11 ಅಭ್ಯರ್ಥಿಗಳನ್ನು ಘೋಷಿಸಿದ ಎಸ್‌ಪಿ

ಮುಂಬರುವ ಸಾರ್ವತ್ರಿಕ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಸಮಾಜವಾದಿ ಪಕ್ಷ, ಸಂಸದ ಅಫ್ಜಲ್ ಅನ್ಸಾರಿ ಸೇರಿದಂತೆ ಉತ್ತರ ಪ್ರದೇಶದ 11 ಲೋಕಸಭೆ ಅಭ್ಯರ್ಥಿಗಳ ಮೊದಲ ಪಟ್ಟಿ.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ಲಖನೌ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಸಮಾಜವಾದಿ ಪಕ್ಷ, ಸಂಸದ ಅಫ್ಜಲ್ ಅನ್ಸಾರಿ ಸೇರಿದಂತೆ ಉತ್ತರ ಪ್ರದೇಶದ 11 ಲೋಕಸಭೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಇಂಡಿಯಾ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡುವ ಪ್ರಸ್ತಾಪದ ನಡುವೆ ಎಸ್ ಪಿ 11 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಗಾಜಿಪುರ ಲೋಕಸಭಾ ಕ್ಷೇತ್ರದಿಂದ ಬಿಎಸ್‌ಪಿಯ ಹಾಲಿ ಸಂಸದ ಅಫ್ಜಲ್ ಅನ್ಸಾರಿ ಅವರನ್ನು ಎಸ್‌ಪಿ ಅದೇ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಅಖಿಲೇಶ್ ಯಾದವ್
ಕಾಂಗ್ರೆಸ್ ಗೆ 15 ಸೀಟು ಕೊಡಲು ಸಿದ್ಧ; ಹಂಚಿಕೆ ಪ್ರಕ್ರಿಯೆ ಮುಗಿದ ಮೇಲೆ ನ್ಯಾಯ್ ಯಾತ್ರೆಯಲ್ಲಿ ಭಾಗಿ: ಅಖಿಲೇಶ್ ಯಾದವ್

ಪಕ್ಷ ಘೋಷಿಸಿದ ಇತರ ಅಭ್ಯರ್ಥಿಗಳೆಂದರೆ ಹರೇಂದ್ರ ಮಲಿಕ್(ಮುಜಾಫರ್‌ನಗರ), ನೀರಜ್ ಮೌರ್ಯ(ಅಯೋನ್ಲಾ), ರಾಜೇಶ್ ಕಶ್ಯಪ್ (ಶಹಜಹಾನ್‌ಪುರ-ಎಸ್‌ಸಿ), ಉಷಾ ವರ್ಮಾ(ಹರ್ದೋಯ್-ಎಸ್‌ಸಿ), ಆರ್‌ಕೆ ಚೌಧರಿ(ಮೋಹನ್‌ಲಾಲ್‌ಗಂಜ್-ಎಸ್‌ಸಿ), ಎಸ್‌ಪಿ ಸಿಂಗ್ ಪಟೇಲ್(ಪ್ರತಾಪಗಢ) , ರಮೇಶ್ ಗೌತಮ್(ಬಹ್ರೈಚ್-ಎಸ್‌ಸಿ), ಶ್ರೇಯಾ ವರ್ಮಾ(ಗೊಂಡಾ), ವೀರೇಂದ್ರ ಸಿಂಗ್(ಚಂದೌಲಿ) ಮತ್ತು ರಾಂಪಾಲ್ ರಾಜವಂಶಿ(ಮಿಸ್ರಿಖ್-ಎಸ್‌ಸಿ).

11 ಮಂದಿಯಲ್ಲಿ ನಾಲ್ವರು ಹಿಂದುಳಿದ ವರ್ಗದವರಾಗಿದ್ದು, ಐವರು ಪರಿಶಿಷ್ಟ ಜಾತಿಗೆ ಸೇರಿದ್ದರೆ, ವೀರೇಂದ್ರ ಸಿಂಗ್ ಅವರು ಠಾಕೂರ್ ಆಗಿದ್ದರೆ, ಅಫ್ಜಲ್ ಅನ್ಸಾರಿ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com