ಲೋಕಸಭೆ ಚುನಾವಣೆಗೆ ಶುಭ್ಮನ್ ಗಿಲ್ 'ಐಕಾನ್'

ಪಂಜಾಬ್ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಕ್ರಿಕೆಟಿಗ ಶುಭ್ಮನ್ ಗಿಲ್ ಅವರನ್ನು "ರಾಜ್ಯ ಐಕಾನ್" ಎಂದು ಘೋಷಿಸಿದೆ.
ಶುಭ್ಮನ್ ಗಿಲ್
ಶುಭ್ಮನ್ ಗಿಲ್

ಚಂಡೀಗಢ: ಪಂಜಾಬ್ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಕ್ರಿಕೆಟಿಗ ಶುಭ್ಮನ್ ಗಿಲ್ ಅವರನ್ನು "ರಾಜ್ಯ ಐಕಾನ್" ಎಂದು ಘೋಷಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಶೇ. 70 ರಷ್ಟು ಮತದಾನವನ್ನು ಖಚಿತಪಡಿಸಿಕೊಳ್ಳಲು ಮತದಾರರಲ್ಲಿ ಜಾಗೃತಿ ಮೂಡಿಸಲು ಗಿಲ್ ವಿವಿಧ ಅಭಿಯಾನಗಳಲ್ಲಿ ಭಾಗವಹಿಸುತ್ತಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಸಿಬಿನ್ ಸಿ ಅವರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಆಯೋಗ ಶೇ. 70 ರಷ್ಟು ಮತದಾನದ ಗುರಿ ಹೊಂದಿದೆ. ಕಳೆದ ಬಾರಿ ಪಂಜಾಬ್‌ನ 13 ಸ್ಥಾನಗಳಲ್ಲಿ ನಡೆದ 2019ಕ ಲೋಕಸಭೆ ಚುನಾವಣೆಯಲ್ಲಿ ಶೇ. 65.96 ಮತದಾನವಾಗಿತ್ತು.

ಶುಭ್ಮನ್ ಗಿಲ್
ಚುನಾವಣೆ ಎಂಬುದು ಅತಿದೊಡ್ಡ ಪ್ರಕ್ರಿಯೆ: ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (ಸಂದರ್ಶನ)

ಕ್ರೀಡಾ ಉತ್ಸಾಹಿಗಳಲ್ಲಿ, ವಿಶೇಷವಾಗಿ ಯುವಕರಲ್ಲಿ ಜನಪ್ರಿಯರಾಗಿರುವ ಪಂಜಾಬ್ ನಿವಾಸಿ ಗಿಲ್ ಅವರನ್ನು ಚುನಾವಣೆಗೆ "ರಾಜ್ಯ ಐಕಾನ್" ಆಗಿ ನೇಮಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.

ಶುಕ್ರವಾರ ಪಂಜಾಬ್‌ನ ಎಲ್ಲಾ ಡೆಪ್ಯೂಟಿ ಕಮಿಷನರ್‌ಗಳೊಂದಿಗೆ ನಡೆದ ಸಭೆಯಲ್ಲಿ ಕಳೆದ ಚುನಾವಣೆಯ ಸಮಯದಲ್ಲಿ ಮತದಾನದ ಶೇಕಡಾವಾರು ಕಡಿಮೆ ಇರುವಂತಹ ಪ್ರದೇಶಗಳನ್ನು ಗುರುತಿಸಲು ಕೇಳಲಾಯಿತು ಎಂದು ಸಿಬಿನ್ ಸಿ ಹೇಳಿದರು.

ಅಂತಹ ಪ್ರದೇಶಗಳಲ್ಲಿ ಶುಬ್ಮನ್ ಗಿಲ್ ಅವರು ಮಾಡಿದ ಜಾಗೃತಿ ಅಭಿಯಾನಗಳು ಮತ್ತು ಮನವಿಗಳು ಮತದಾರರನ್ನು ಪ್ರೇರೇಪಿಸುತ್ತದೆ ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com