ಸಮಾಜವಾದಿ ಪಕ್ಷ ತೊರೆದ ಐದು ಬಾರಿ ಸಂಸದರಾಗಿದ್ದ ಸಲೀಂ ಶೇರ್ವಾನಿ

ಸಮಾಜವಾದಿ ಪಕ್ಷ(ಎಸ್ ಪಿ)ದ ನಾಯಕ ಮತ್ತು ಮಾಜಿ ಸಂಸದ ಸಲೀಂ ಶೇರ್ವಾನಿ ಅವರು ಸೋಮವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಖಿಲೇಶ್ ಯಾದವ್‌
ಅಖಿಲೇಶ್ ಯಾದವ್‌

ಲಖನೌ: ರಾಜ್ಯಸಭೆಗೆ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನಗೊಂಡಿದ್ದ ಸಮಾಜವಾದಿ ಪಕ್ಷ(ಎಸ್ ಪಿ)ದ ನಾಯಕ ಮತ್ತು ಮಾಜಿ ಸಂಸದ ಸಲೀಂ ಶೇರ್ವಾನಿ ಅವರು ಸೋಮವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಐದು ಬಾರಿ ಸಂಸದರಾಗಿದ್ದ ಮಾಜಿ ಕೇಂದ್ರ ಸಚಿವ ಶೇರ್ವಾನಿ ಅವರು ಭಾನುವಾರ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್‌ಗೆ ಬರೆದ ರಾಜೀನಾಮೆ ಪತ್ರದಲ್ಲಿ ಪಕ್ಷವು ಮುಸ್ಲಿಮರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.

"ನಾನು ಆಗಾಗ್ಗೆ ನಿಮ್ಮೊಂದಿಗೆ ಮುಸ್ಲಿಂ ಸಮುದಾಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದೇನೆ ಮತ್ತು ಸಮುದಾಯ ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವುದರ ಜೊತೆಗೆ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಎಂದು ತಮಗೆ ತಿಳಿಸಲು ಪ್ರಯತ್ನಿಸಿದ್ದೇನೆ" ಎಂದು ಶೇರ್ವಾನಿ ಹೇಳಿದ್ದಾರೆ.

ಅಖಿಲೇಶ್ ಯಾದವ್‌
ಕಾಂಗ್ರೆಸ್ ಗೆ 15 ಸೀಟು ಕೊಡಲು ಸಿದ್ಧ; ಹಂಚಿಕೆ ಪ್ರಕ್ರಿಯೆ ಮುಗಿದ ಮೇಲೆ ನ್ಯಾಯ್ ಯಾತ್ರೆಯಲ್ಲಿ ಭಾಗಿ: ಅಖಿಲೇಶ್ ಯಾದವ್

ಪಕ್ಷದ ಸಂಪ್ರದಾಯದಂತೆ ಮುಸ್ಲಿಂ ಸಮುದಾಯಕ್ಕೆ ರಾಜ್ಯಸಭಾ ಸ್ಥಾನ ನೀಡುವಂತೆ ಪದೇ ಪದೇ ನಾನು ಮನವಿ ಮಾಡಿದ್ದೇನೆ. ನನ್ನ ಹೆಸರನ್ನು ಪರಿಗಣಿಸದಿದ್ದರೂ ಪಕ್ಷ ಘೋಷಿಸಿರುವ ಅಭ್ಯರ್ಥಿಗಳಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ ಇಲ್ಲ ಎಂದಿದ್ದಾರೆ.

ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುತ್ತಿರುವುದಾಗಿ ಪಕ್ಷ ಬೂಟಾಟಿಕೆ ಮಾಡುತ್ತಿದೆ ಎಂದು ಆರೋಪಿಸಿದ ಕೇಂದ್ರದ ಮಾಜಿ ಸಚಿವರು, "ರಾಜ್ಯಸಭಾ ಚುನಾವಣೆಗೆ ನೀವು ಟಿಕೆಟ್ ಹಂಚಿಕೆಯ ರೀತಿಯಲ್ಲಿ ಗಮನಿಸಿದರೆ ಪಿಡಿಎ(ಪಿಚ್ಡಾ, ದಲಿತ ಮತ್ತು ಅಲ್ಪಸಂಖ್ಯಾತ)ಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ತೋರಿಸುತ್ತದೆ. ಇದು ಬಿಜೆಪಿಯಿಂದ ನೀವು ಹೇಗೆ ಭಿನ್ನರು ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ" ಎಂದು ಶೇರ್ವಾನಿ ಹೇಳಿದ್ದಾರೆ.

ಉತ್ತರ ಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಎಸ್‌ಪಿ, ರಾಮ್‌ಜಿ ಲಾಲ್ ಸುಮನ್, ಜಯಾ ಬಚ್ಚನ್ ಮತ್ತು ಯುಪಿ ಮಾಜಿ ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಅವರನ್ನು ಕಣಕ್ಕಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com