ದೆಹಲಿ ಚಲೋ: ರೈತರ ಬಳಿ ಇರುವ ಜೆಸಿಬಿ, ಬೃಹತ್ ಯಂತ್ರೋಪಕರಣ ವಶಕ್ಕೆ ಪಡೆಯಲು ಹರ್ಯಾಣ ಡಿಜಿಪಿ ಸೂಚನೆ

ಪ್ರತಿಭಟನಾ ನಿರತ ರೈತರ ದೆಹಲಿ ಚಲೋ ಮೆರವಣಿಗೆ ಇಂದು ನಡೆಯಲಿದ್ದು, ಅಂತಾರಾಜ್ಯ ಗಡಿ ಪ್ರದೇಶಗಳಿಂದ ಬುಲ್ಡೋಜರ್ ಗಳು ಹಾಗೂ ಇನ್ನಿತರ ಬೃಹತ್ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯುವಂತೆ ಹರ್ಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ತಿಳಿಸಿದ್ದಾರೆ.
ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.

ನವದೆಹಲಿ: ಪ್ರತಿಭಟನಾ ನಿರತ ರೈತರ ದೆಹಲಿ ಚಲೋ ಮೆರವಣಿಗೆ ಇಂದು ನಡೆಯಲಿದ್ದು, ಅಂತಾರಾಜ್ಯ ಗಡಿ ಪ್ರದೇಶಗಳಿಂದ ಬುಲ್ಡೋಜರ್ ಗಳು ಹಾಗೂ ಇನ್ನಿತರ ಬೃಹತ್ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯುವಂತೆ ಹರ್ಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ತಿಳಿಸಿದ್ದಾರೆ.

ಬ್ಯಾರಿಕೇಡ್ ಗಳನ್ನು ಈ ಬೃಹತ್ ಯಂತ್ರೋಪಕರಣಗಳನ್ನು ಬಳಕೆ ಮಾಡುವುದರ ಮೂಲಕ ಪ್ರತಿಭಟನಾ ನಿರತರು ಮುರಿದುಹಾಕುವ ಸಾಧ್ಯತೆ ಇರುವುದರಿಂದ ಇವುಗಳನ್ನು ವಶಕ್ಕೆ ಪಡೆಯುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಈ ರೀತಿಯ ಬೃಹತ್ ಯಂತ್ರೋಪಕರಣಗಳನ್ನು ರೈತರು ದೆಹಲಿ ಚಲೋ ವೇಳೆ ಬಳಕೆ ಮಾಡುವುದರಿಂದ, ಗಡಿ ಭಾಗದಲ್ಲಿ ನಿಯೋಜಿಸಲ್ಪಟ್ಟಿರುವ ಆಂತರಿಕ ಭದ್ರತಾ ಸಿಬ್ಬಂದಿಗಳಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಹರ್ಯಾಣ ಡಿಜಿಪಿ ಶತ್ರುಜೀತ್ ಕಪೂರ್ ಪಂಜಾಬ್ ಡಿಜಿಪಿಗೆ ಕಳಿಸಿರುವ ತುರ್ತು ಸಂದೇಶದಲ್ಲಿ ತಿಳಿಸಿದ್ದಾರೆ. ಪಂಜಾಬ್ ಡಿಜಿಪಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಳಿಸಲಾದ ಸಂವಹನದಲ್ಲಿ, ಯಾವುದೇ ಜೆಸಿಬಿಗಳು ಮತ್ತು ಇತರ ಭಾರೀ ಉಪಕರಣಗಳನ್ನು ಖಾನೌರಿ ಮತ್ತು ಶಂಬು ಗಡಿ ಪಾಯಿಂಟ್ ಗಳಿಗೆ ತಲುಪಲು ಅನುಮತಿಸಬಾರದು ಎಂದು ಹೇಳಿದ್ದು, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಹರಿಯಾಣಕ್ಕೆ ಪ್ರವೇಶಿಸಲು ಯೋಜಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ರೈತರ ಪ್ರತಿಭಟನೆ: 177 ಸಾಮಾಜಿಕ ಜಾಲತಾಣ ಖಾತೆ, ವೆಬ್ ಲಿಂಕ್ ಗಳಿಗೆ ಕೇಂದ್ರ ಸರ್ಕಾರ ತಾತ್ಕಾಲಿಕ ನಿರ್ಬಂಧ

ಸೋಮವಾರ ನಡೆದ ‘ದೆಹಲಿ ಚಲೋ’ ಆಂದೋಲನದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುಂದಿಟ್ಟಿದ್ದ ಸೂತ್ರದ ಬಗ್ಗೆ ಚರ್ಚೆ ನಡೆಸಿದ್ದರು.ಕಾಳುಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) 5 ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ಈ ಸಭೆಯಲ್ಲಿ ತಿರಸ್ಕರಿಸಿದ್ದ ರೈತರು. ಫೆ.21 ರಂದು ತಮ್ಮ ಮೆರವಣಿಗೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದರು.

ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ಬೇಡಿಕೆಗಳನ್ನು ಈಡೇರಿಸಿ: ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿದ ಬೆನ್ನಲ್ಲೇ ರೈತರ ಆಗ್ರಹ

ಮಂಗಳವಾರ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿ ಪಾಯಿಂಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿನಿಧಿಸುವ ಪಂಧೇರ್, ರೈತರಿಗೆ ಮೂರು ದೊಡ್ಡ ಬೇಡಿಕೆಗಳಿವೆ: ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಮೇಲೆ ಕಾನೂನು ಖಾತರಿಪಡಿಸುವುದು “ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸಿ 2 ಪ್ಲಸ್ ಶೇ.50 ಅನುಷ್ಠಾನಗೊಳಿಸುವ ಸೂತ್ರ ಮತ್ತು ಸಾಲ ಮನ್ನಾ ಈ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಂಧೇರ್, ಕೇಂದ್ರ ಸಚಿವರೊಂದಿಗಿನ ಸಭೆಯಲ್ಲಿ ರೈತರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಎಂಎಸ್‌ಪಿ ಕುರಿತು ಕಾನೂನನ್ನು ಜಾರಿಗೆ ತರಲು ಪ್ರಸ್ತಾಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com