ಪ್ರಾಣಿಗಳಿಗೆ ಸೀತಾ, ಅಕ್ಬರ್ ಅಂತಹ ಹೆಸರು ನಾಮಕರಣ ಮಾಡುವುದನ್ನು ತಪ್ಪಿಸಿ: ಹೈಕೋರ್ಟ್

ಕೋಲ್ಕತ್ತಾ ಹೈಕೋರ್ಟ್ ನ ಜಲ್ಪೈಗುರಿ ಸರ್ಕ್ಯೂಟ್ ಪೀಠ, ವಿವಾದಗಳು ಉಂಟಾಗದಂತೆ ತಡೆಯಲು ಪ್ರಾಣಿಗಳಿಗೆ ಸೀತಾ, ಅಕ್ಬರ್ ರೀತಿಯ ಹೆಸರನ್ನು ನಾಮಕರಣ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ.
ಸಿಂಹ-ಸಿಂಹಿಣಿ (ಸಾಂಕೇತಿಕ ಚಿತ್ರ)
ಸಿಂಹ-ಸಿಂಹಿಣಿ (ಸಾಂಕೇತಿಕ ಚಿತ್ರ)TNIE

ಕೋಲ್ಕತ್ತ: ಪಶ್ಚಿಮ ಬಂಗಾಳದ ಝೂನಲ್ಲಿ ಸಿಂಹ ಮತ್ತು ಸಿಂಹಿಣಿ ಜೋಡಿಗೆ ಸೀತಾ, ಅಕ್ಬರ್ ಎಂಬ ನಾಮಕರಣ ಮಾಡಿದ್ದು ಇತ್ತೀಚಿಗೆ ವಿವಾದಕ್ಕೆ ಗುರಿಯಾಗಿತ್ತು. ಈ ಬಗ್ಗೆ ಕೋಲ್ಕತ್ತ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ. ಕೋಲ್ಕತ್ತಾ ಹೈಕೋರ್ಟ್ ನ ಜಲ್ಪೈಗುರಿ ಸರ್ಕ್ಯೂಟ್ ಪೀಠ, ವಿವಾದಗಳು ಉಂಟಾಗದಂತೆ ತಡೆಯಲು ಪ್ರಾಣಿಗಳಿಗೆ ಸೀತಾ, ಅಕ್ಬರ್ ರೀತಿಯ ಹೆಸರನ್ನು ನಾಮಕರಣ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ.

ಪಶ್ಚಿಮ ಬಂಗಾಳದ ಝೂ ಪ್ರಾಧಿಕಾರಕ್ಕೆ ಈ ಪ್ರಾಣಿಗಳಿಗೆ ಮರು ಹೆಸರು ನಾಮಕರಣ ಮಾಡುವುದನ್ನು ಪರಿಗಣಿಸುವಂತೆ ಸಲಹೆ ನೀಡಿದೆ.

ಸಿಂಹ ಸಿಂಹಿಣಿಗೆ ಅಕ್ಬರ್ ಸೀತಾ ಎಂಬ ಹೆಸರು ನಾಮಕರಣ ಮಾಡಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ನಡೆಯಾಗಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾ. ಸೌಗತ ಭಟ್ಟಾಚಾರ್ಯ ಅವರಿದ್ದ ಪೀಠ, ಯಾವುದೇ ಪ್ರಾಣಿಗೆ ದೇವರು, ಪೌರಾಣಿಕ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.

ಸಿಂಹ-ಸಿಂಹಿಣಿ (ಸಾಂಕೇತಿಕ ಚಿತ್ರ)
ಪಶ್ಚಿಮ ಬಂಗಾಳ: ಸಿಂಹ ಅಕ್ಬರ್ ಜೊತೆ ಸಿಂಹಿಣಿ ಸೀತಾ: ಕೋರ್ಟ್ ಮೆಟ್ಟಿಲೇರಿದ VHP

ವಿವಾದಗಳಾಗದಂತೆ ಎಚ್ಚರ ವಹಿಸಲು ಇಂತಹ ಹೆಸರುಗಳನ್ನು ನಾಮಕರಣ ಮಾಡುವುದನ್ನು ಬಿಡಬಹುದು ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com