ಬಿಜೆಪಿಯವರು ಕಾಂಗ್ರೆಸ್ ಹಣವನ್ನು ಕದಿಯುತ್ತಿದ್ದಾರೆ: ಕೆಸಿ ವೇಣುಗೋಪಾಲ್ ಆರೋಪ

ಬಿಜೆಪಿಯವರು ನಮ್ಮ ಹಣವನ್ನು ಬ್ಯಾಂಕ್ ಗಳಿಂದ ಕದಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಕೆಸಿ ವೇಣುಗೋಪಾಲ್
ಕೆಸಿ ವೇಣುಗೋಪಾಲ್ANI

ನವದೆಹಲಿ: ಬಿಜೆಪಿಯವರು ನಮ್ಮ ಹಣವನ್ನು ಬ್ಯಾಂಕ್ ಗಳಿಂದ ಕದಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೂ ಕೂಡಾ ಈ ದೇಶವನ್ನು ಆಳಿದ್ದೇವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಅಥವಾ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ರೀತಿಯ ಅನುಭವವಾಗಿದ್ದರೆ, ಅಂತಹ ಯಾವುದೇ ಉದಾಹರಣೆ ಇದ್ದರೆ ಬಿಜೆಪಿ ತೋರಿಸಬಹುದು ಎಂದರು.

ಕೆಸಿ ವೇಣುಗೋಪಾಲ್
ನಮ್ಮ ಬ್ಯಾಂಕ್ ಖಾತೆಗಳಿಂದ ಐಟಿ ಇಲಾಖೆ 65 ಕೋಟಿ ರೂ. ವಿತ್ ಡ್ರಾ ಮಾಡಿದೆ: ಕಾಂಗ್ರೆಸ್ ಆರೋಪ

ಬಿಜೆಪಿ ಪಕ್ಷವಾಗಿ ಯಾವುದೇ ಆದಾಯ ತೆರಿಗೆ ಕೊಟ್ಟಿದೆಯೇ ಎಂದು ಪ್ರಶ್ನಿಸಿದ ಅವರು, ಇದು ಸ್ಪಷ್ಟವಾಗಿ ಪ್ರಜಾಸತ್ತಾತ್ಮಕ ತತ್ವಗಳು ಮತ್ತು ಮೌಲ್ಯಗಳ ಮೇಲಿನ ದಾಳಿಯಾಗಿದೆ.ಅವರು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸ್ಪಷ್ಟವಾಗಿ ಸರ್ವಾಧಿಕಾರದ ಉದಾಹರಣೆಯಾಗಿದೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com