ವಿಂಗ್ ಕಮಾಂಡರ್ ಎಂದು ಹೇಳಿಕೊಂಡು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದ್ದ ವ್ಯಕ್ತಿ ಬಂಧನ

ಐಎಎಫ್‌ ವಿಂಗ್ ಕಮಾಂಡರ್ ಎಂದು ಹೇಳಿಕೊಂಡು ದೆಹಲಿ ಕಂಟೋನ್ಮೆಂಟ್ ಪ್ರದೇಶದ ಪಾಲಂ ಏರ್ ಫೋರ್ಸ್ ಸ್ಟೇಷನ್‌ ಪ್ರವೇಶಿಸಿದ ಆರೋಪದ ಮೇಲೆ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಐಎಎಫ್‌ ವಿಂಗ್ ಕಮಾಂಡರ್ ಎಂದು ಹೇಳಿಕೊಂಡು ದೆಹಲಿ ಕಂಟೋನ್ಮೆಂಟ್ ಪ್ರದೇಶದ ಪಾಲಂ ಏರ್ ಫೋರ್ಸ್ ಸ್ಟೇಷನ್‌ ಪ್ರವೇಶಿಸಿದ ಆರೋಪದ ಮೇಲೆ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಆರೋಪಿಯನ್ನು ವಿನಾಯಕ್ ಚಡ್ಡಾ ಎಂದು ಗುರುತಿಸಲಾಗಿದ್ದು, ತನ್ನ ತಂದೆಗೆ ವಾಯುಪಡೆ ಸ್ಟೇಷನ್ ನ ದಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಬಯಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಬುಧವಾರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ(ನೈಋತ್ಯ) ರೋಹಿತ್ ಮೀನಾ ಅವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಬೋಯಿಂಗ್ ನಿಂದ ಭಾರತೀಯ ವಾಯುಪಡೆಗೆ ಯುದ್ಧ ಹೆಲಿಕಾಪ್ಟರ್ ಪೂರೈಕೆ ಕಾರ್ಯ ಪೂರ್ಣ: ಐಎಎಫ್‌ 

ಆರೋಪಿಯು ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ವಾಯುಪಡೆ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ತಿಮ್ಮಯ್ಯ ರಸ್ತೆಯಲ್ಲಿರುವ ವಾಯುಪಡೆಯ ದಂತ ಆಸ್ಪತ್ರೆಗೆ, ತಾನು ವಿಂಗ್‌ ಕಮಾಂಡರ್‌ ಎಂದು ಹೇಳಿಕೊಂಡು ಈ ವ್ಯಕ್ತಿ ಪ್ರವೇಶಿಸಿದ್ದರು ಎಂದು ಅವರು ಹೇಳಿದ್ದಾರೆ.

ನಕಲಿ ಐಡಿ ಕಾರ್ಡ್ ಬಳಸಿಕೊಂಡು ಭದ್ರತೆಯ ಮೊದಲ ಹಂತವನ್ನು ಪ್ರವೇಶಿಸಿದ್ದಾರೆ. ಆದರೆ ನಂತರ ವಾಯುಪಡೆಯ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಮೀನಾ ತಿಳಿಸಿದ್ದಾರೆ.

ನಂತರ ಚಡ್ಡಾ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಅವರ ಬಳಿ ಹಲವು ರಕ್ಷಣಾ ಸಿಬ್ಬಂದಿಗಳ ಹೆಸರಿನ ನಕಲಿ ಗುರುತಿನ ಚೀಟಿ ಮತ್ತು ಇತರ ಕೆಲವು ಮದ್ಯದ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಸಬ್ಸಿಡಿ ದರದಲ್ಲಿ ಮದ್ಯ ಖರೀದಿಸಲು ರಕ್ಷಣಾ ಸಿಬ್ಬಂದಿಗೆ ಮದ್ಯ ಕಾರ್ಡ್‌ಗಳನ್ನು ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com